ಪುತ್ತೂರು: ಕ್ಯಾನ್ಸರ್ ಪೀಡಿತ ಮಗುವಿನ ಚಿಕಿತ್ಸೆಗೆ ಮುಖ್ಯ ಮಂತ್ರಿ ಪರಿಹಾರ ನಿಧಿಯಿಂದ ರೂ 4 ಲಕ್ಷ ಪರಿಹಾರಧನ ಮಂಜೂರಾಗಿದೆ.
ಕೊಳ್ತಿಗೆ ಗ್ರಾಮದ ಪಾಲ್ತಾಡು ನಿವಾಸಿ ಹರ್ಷದ್ ಸಾಹೇಬ್ ಅವರ ತಮೀಮ್ (2 ವ) ಎಂಬ ಮಗು ರಕ್ತ ಕ್ಯಾನ್ಸರ್ ನಿಂದ ಬಳಲುತ್ತಿದ್ದು ಮಗುವಿನ ಚಿಕಿತ್ಸೆಗೆ 12 ಲಕ್ಷ ಖರ್ಚು ತಗುಲಿದ್ದು ಬಡ ಕುಟುಂಬಕ್ಕೆ ನೆರವು ನೀಡುವಂತೆ ಶಾಸಕ ಅಶೋಕ್ ರೈ ಅವರು ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದರು.
ಇದಲ್ಲದೆ ಮೂಡಬಿದ್ರೆಯ ಪುತ್ತಿಗೆ ಪದವು ನಿವಾಸಿ ಮೊಹಮ್ಮದ್ ಕಬೀರ್ ರವರ ಪುತ್ರ ಮೊಹಮ್ಮದ್ ಫಯಾಝ್ (16) ರವರಿಗೂ ಕ್ಯಾನ್ಸರ್ ಖಾಯಿಲೆ ಇದ್ದು ಚಿಕಿತ್ಸೆಗೆ ನೆರವು ಕೋರಿ ಶಾಸಕ ಅಶೋಕ್ ರೈ ಅವರ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದ್ದರು. ಈ ಬಾಲಕನ ಚಿಕಿತ್ಸೆಗೆ 3 ಲಕ್ಷ ರೂ ಪರಿಹಾರ ಘೋಷಿಸಲಾಗಿದೆ .