ಇಳಂತಾಜೆ ಸಂತೋಷ್ ಕುಮಾರ್ ರೈ, ಇಕ್ಬಾಲ್ ಹುಸೈನ್ ಭೇಟಿ ; ಪರಿಶೀಲನೆ
ಪುತ್ತೂರು: ಶಾಸಕ ಅಶೋಕ್ ಕುಮಾರ್ ರೈ ಅವರ ಅನುದಾನದಲ್ಲಿ 5 ಕೋಟಿ ವೆಚ್ಚದ ಕೌಡಿಚ್ಚಾರು ಇಳಂತಾಜೆ-ಕೆಯ್ಯೂರು ಸಂಪರ್ಕ ರಸ್ತೆ ಕಾಮಗಾರಿ ನಡೆಯುತ್ತಿದ್ದು, ಶೀಘ್ರದಲ್ಲಿ ಪೂರ್ಣಗೊಳ್ಳಲಿದೆ.

ಅರಿಯಡ್ಕ ವಲಯ ಕಾಂಗ್ರೆಸ್ ಅಧ್ಯಕ್ಷ ಇಕ್ಬಾಲ್ ಹುಸೈನ್ ಹಾಗೂ ಕಾಮಗಾರಿಯ ಅನುದಾನಕ್ಕೆ ಪ್ರಮುಖ ಕಾರಣಕರ್ತರಾದ ಇಳಂತಾಜೆ ಸಂತೋಷ್ ಕುಮಾರ್ ರೈ ಅವರು ಕೌಡಿಚ್ಚಾರು ಇಳಂತಾಜೆ-ಕೆಯ್ಯೂರು ಸಂಪರ್ಕ ರಸ್ತೆ ಕಾಮಗಾರಿ ನಡೆಯುತ್ತಿರುವ ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದರು.