ಪುತ್ತೂರು: ಹಾಸನ ಜಿಲ್ಲೆಯ ಮೊಸಳೆಹೊಸಳ್ಳಿಯಲ್ಲಿ ಗಣೇಶ ವಿಸರ್ಜನಾ ಮೆರವಣಿಗೆಯ ವೇಳೆ ಕ್ಯಾಂಟರ್ ಲಾರಿ ನುಗ್ಗಿ ದುರಂತ ಸಂಭವಿಸಿದ ಘಟನೆಯ ಮೆರವಣಿಗೆಯಲ್ಲಿ ಕಲಾ ಪ್ರದರ್ಶನದ ನೀಡುತ್ತಿದ್ದ ಬೆಳ್ತಂಗಡಿಯ ಶೆಟ್ಟಿ ಆರ್ಟ್ ಕಲಾ ತಂಡದ ಕಲಾವಿದರು ಕೂದಲೆಲೆ ಅಂತರದಲ್ಲಿ ಪಾರಾಗಿದ್ದಾರೆ.
ಸೆ.12ರ ರಾತ್ರಿ ಗಣೇಶ ವಿಸರ್ಜನಾ ಮೆರವಣಿಗೆ ಮೇಲೆ ಕ್ಯಾಂಟರ್ ಲಾರಿ ಹರಿದ ದುರಂತದಲ್ಲಿ 9 ಮಂದಿ ಮೃತಪಟ್ಟಿದ್ದರು. ಈ ಮೆರವಣಿಗೆಯಲ್ಲಿ ಕಲಾ ಪ್ರದರ್ಶನ ನೀಡಲು ಬೆಳ್ತಂಗಡಿ ಶೆಟ್ಟಿ ಆರ್ಟ್ ಕಲಾ ತಂಡದ ಕೀಳು ಕುದುರೆ, ಗೊಂಬೆಗಳ ನೃತ್ಯಗಳು ಇದ್ದವು. ಇವರ ಹಿಂದೆಯೇ ಅನೇಕ ಯುವಕರು ನೃತ್ಯ ಮಾಡುತ್ತಿದ್ದರು. ಕ್ಯಾಂಟರ್ ಏಕಾಏಕಿ ಹರಿದು ಬಂದು ನೃತ್ಯ ಮಾಡುತ್ತಿದ್ದ ಯುವಕರ ಮೇಲೆ ಹೋಗಿದೆ. ನಾವು ತಂಡದ 6 ಪೀಟ್ ಅಂತರದಲ್ಲಿ ಕ್ಯಾಂಟರ್ ಚಲಿಸಿದೆ. ಒಮ್ಮೆಗೆ ಮೈ ಜುಮ್ ಎನಿಸಿದೆ ಎಂದು ಕಲಾ ತಂಡದ ಮ್ಯಾನೇಜರ್ ಯಶೋಧರ ಅವರು ತಿಳಿಸಿದ್ದಾರೆ.