ಪುತ್ತೂರು ಪುರಭವನದಲ್ಲಿ ಕಥೆ ಎಡ್ಡೆ ಉಂಡು ತುಳು ನಾಟಕದ 250ರ ಸಂಭ್ರಮ

0

ತುಳು ನಾಟಕ, ಸಿನಿಮಾದಿಂದ ತುಳು ಭಾಷೆ ಅಭಿವೃದ್ಧಿ-ಶಶಿಕುಮಾರ್ ರೈ ಬಾಲ್ಯೊಟ್ಟು



ಪುತ್ತೂರು: ಎಸ್.ಅರ್, ಕಂಬೈನ್ಸ್ ಪುತ್ತೂರು ಇವರ ಆಶ್ರಯದಲ್ಲಿ ಶಾರದಾ ಆರ್ಟ್ಸ ಕಲಾವಿದೆರ್ ಮಂಜೇಶ್ವರ ಅಭಿನಯದ ಕಥೆ ಎಡ್ಡೆ ಉಂಡು ತುಳು ನಾಟಕ ೨೫೦ ನೇ ಪ್ರದರ್ಶನದ ಸಂಭ್ರಮ ಹಾಗೂ ಸನ್ಮಾನ ಮತ್ತು ಸಹಾಯಧನ ವಿತರಣೆ ಸಮಾರಂಭ ಸೆ.14 ರಂದು ಪುತ್ತೂರು ಪುರಭವನದಲ್ಲಿ ಜರಗಿತು.


ದ.ಕ,ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಶಶಿಕುಮಾರ್ ರೈ ಬಾಲ್ಯೊಟ್ಟುರವರು ಸಮಾರಂಭವನ್ನು ಉದ್ಘಾಟಿಸಿ, ಮಾತನಾಡಿ ತುಳು ನಾಟಕ, ತುಳು ಸಿನಿಮಾದಿಂದ ತುಳು ಸಂಸ್ಕೃತಿ, ಭಾಷೆ ಅಭಿವೃದ್ಧಿಯಾಗಿದೆ, ತುಳುನಾಟಕದಲ್ಲಿ ಕಥೆ ಎಡ್ಡೆ ಉಂಡು 250 ಪ್ರದರ್ಶನಗಳನ್ನು ಕಂಡಿರುವುದು ತುಂಬಾ ಸಂತೋಷ ತಂದಿದೆ. ಇತ್ತೀಚಿನ 4 ತಿಂಗಳಿನಿಂದ ಕರಾವಳಿ ಜಿಲ್ಲೆಗಳಲ್ಲಿ ಸಾಂಸ್ಕೃತಿಕ ಕಾರ್‍ಯಕ್ರಮವನ್ನು ರಾತ್ರಿ ಹತ್ತು ಗಂಟೆಯೊಳಗೆ ಮುಗಿಸಬೇಕೆಂಬ ಸರಕಾರದ ಕ್ರಮ ಸರಿ ಅಲ್ಲ, ಈ ಪರಿಸ್ಥಿತಿ ಬೇರೆ ಜಿಲ್ಲೆಯಲ್ಲಿ ಆಗಿದ್ದರೆ ಅಲ್ಲಿನ ಜನರು ವಿರೋಧಿಸುತ್ತಿದ್ದರು. ಕರಾವಳಿ ಜಿಲ್ಲೆಗೆ ಮಾತ್ರ ಸೀಮಿತವಾದ ಸಮಯ ನಿರ್ಧಾರವನ್ನು ಸರಕಾರ ಮರುಪರೀಶೀಲನೆ ಮಾಡಬೇಕು, ಆ ಮೂಲಕ ಸಾಂಸ್ಕೃತಿಕ ಕಾರ್‍ಯಕ್ರಮಕ್ಕೆ ಹೆಚ್ಚು ಸಮಯ ದೊರೆಯಬೇಕು ಎಂದರು.


ಪುತ್ತೂರು ತಮನ್ವಿ ಸಿಲ್ಕ್ಸ್ ಮಾಲಕಿ ಮಾಲಾಶ್ರೀ ವಿಜಿತ್‌ರವರು ಮಾತನಾಡಿ ತುಳು ನಾಟಕಗಳಿಗೆ ನಿರಂತರವಾದ ಪ್ರೋತ್ಸಾಹವನ್ನು ನಾವೆಲ್ಲ ನೀಡಬೇಕು ಎಂದರು. ಉದ್ಯಮಿ ಸಂಪತ್ ಸುವರ್ಣರವರು ಮಾತನಾಡಿ ತುಳು ನಾಟಕ ಕ್ಷೇತ್ರದಲ್ಲಿ ಶಾರದಾ ಆರ್ಟ್ಸ್‌ನವರ ಕಥೆ ಎಡ್ಡೆ ಉಂಡು ಒಳ್ಳೆಯ ಹೆಸರನ್ನು ಮಾಡಿದೆ. ಈ ನಾಟಕ ತುಳು ನಾಟಕ ಕ್ಷೇತ್ರದಲ್ಲಿ ಹೊಸ ದಾಖಲೆಯನ್ನು ನಿರ್ಮಿಸಿದೆ ಎಂದರು. ಈ ನಾಟಕ ಸಾವಿರಾರು ಪ್ರದರ್ಶನಗಳನ್ನು ಕಾಣಲಿ ಎಂದು ಶುಭಹಾರೈಸಿದರು.


ಸನ್ಮಾನ- ರಂಗಭೂಮಿ ಸಂಗೀತ ನಿರ್ದೇಶಕ ಸುಬ್ರಹ್ಮಣ್ಯ ಕಾರಂತ, ರಂಗಭೂಮಿ ವೇಷಭೂಷಣ ವಿನ್ಯಾಸಕ ವೆಂಕಟೇಶ್ ಮಯ್ಯ ಖಂಡಿಗರವರನ್ನು ಸನ್ಮಾನಿಸಲಾಯಿತು. ಶಾರದಾ ಆರ್ಟ್ಸ ಕಲಾವಿದೆರ್ ಮಂಜೇಶ್ವರ ತಂಡದ ಎಲ್ಲಾ ಕಲಾವಿದರಿಗೆ ಈ ಸಂದರ್ಭದಲ್ಲಿ ಸ್ಮರಣಿಕೆ ನೀಡಿ, ಗೌರವಿಸಲಾಯಿತು.


ಸಹಾಯಧನ ವಿತರಣೆ
ಶಾರದಾ ಆರ್ಟ್ಸ ಕಲಾವಿದೆರ್ ತಂಡದ ಕಲಾವಿದ ದಿ. ಸುರೇಶ್ ವಿಟ್ಲರವರ ಪತ್ನಿ ಕಮಲಾಕ್ಷಿ ರವರಿಗೆ ಶಾರದಾ ಆರ್ಟ್ಸ ಕಲಾವಿದೆರ್ ಮಂಜೇಶ್ವರ ತಂಡದಿಂದ ಸಹಾಯಧನ ವಿತರಿಸಲಾಯಿತು. ಶಾರದಾ ಆರ್ಟ್ಸ ಕಲಾವಿದೆರ್ ಮಂಜೇಶ್ವರ ತಂಡದ ವ್ಯವಸ್ಥಾಪಕ ಕೃಷ್ಣ ಜಿ. ಕಾರ್‍ಯಕ್ರಮದ ನಿರ್ವಹಕ ರವಿಚಂದ್ರ ರೈ ಕುಂಬ್ರ ಉಪಸ್ಥಿತರಿದ್ದರು.ಕಲಾವಿದ ರಾಜೇಶ್ ಮುಗುಳಿ ಸ್ವಾಗತಿಸಿ, ಪ್ರಶಾಂತ್ ಅಂಚನ್ ಕಾರ್‍ಯಕ್ರಮ ನಿರೂಪಿಸಿದರು. ಬಳಿಕ ಕಥೆ ಎಡ್ಡೆ ಉಂಡು ತುಳು ನಾಟಕ ಪ್ರದರ್ಶನ ನಡೆಯಿತು.

LEAVE A REPLY

Please enter your comment!
Please enter your name here