ಕುಂಬ್ರ ಸರಸ್ವತಿ ಪದ್ಮನಾಭ ರೈಯವರ ವೈಕುಂಠ ಸಮಾರಾಧನೆ- ಶ್ರದ್ಧಾಂಜಲಿ ಸಭೆ

0

ಸರಸ್ವತಿ ಪದ್ಮನಾಭ ರೈಯವರು ಸೌಮ್ಯ, ಸರಳ ವ್ಯಕ್ತಿತ್ವದ ಸುಗುಣವಂತೆ- ಮನೋಹರ್ ಆಳ್ವ ಅಗ್ರಾಳ

ಪುತ್ತೂರು: ಪುಣಚ ಅಗ್ರಾಳ ದಿ| ಪದ್ಮನಾಭ ರೈಯವರ ಪತ್ನಿ ಸರಸ್ವತಿ ಪದ್ಮನಾಭ ರೈರವರು ಸೆ.5ರಂದು ನಿಧನರಾಗಿದ್ದು, ಇವರ ಉತ್ತರಕ್ರಿಯೆಯ ವೈಕುಂಠ ಸಮಾರಾಧನೆ ಮತ್ತು ಶ್ರದ್ಧಾಂಜಲಿ ಸಭೆಯು ಸೆ.15ರಂದು ಪುತ್ತುರು ಎಂ. ಸುಂದರರಾಮ್ ಶೆಟ್ಟಿ ಸ್ಮಾರಕ ಬಂಟರ ಭವನದಲ್ಲಿ ಜರಗಿತು.

ವಿಜಯ ಬ್ಯಾಂಕ್‌ನ ನಿವೃತ್ತ ಎಜಿಎಂ ಮನೋಹರ್ ಆಳ್ವ ಅಗ್ರಾಳರವರು ಶ್ರದ್ಧಾಂಜಲಿ ಸಭೆಯಲ್ಲಿ ಮಾತನಾಡಿ ಸರಸ್ವತಿ ಪದ್ಮನಾಭ ರೈಯವರು ಸೌಮ್ಯ, ಸರಳ ವ್ಯಕ್ತಿತ್ವದ ಸುಗುಣವಂತೆಯಾಗಿದ್ದು, ೮೭ ವರ್ಷಗಳ ಸಾರ್ಥಕ ಜೀವನವನ್ನು ನಡೆಸಿಕೊಂಡು ಬಂದಿದ್ದರು. ಕುಂಬ್ರ ಜನನ ಹಾಗೂ ಅಗ್ರಾಳ ತರವಾಡು ಕುಟುಂಬದ ಎಲ್ಲರ ಅಚ್ಚುಮೆಚ್ಚಿನವರಾಗಿ, ಕುಟುಂಬ ಮತ್ತು ಸಮಾಜದಲ್ಲಿ ಒಳ್ಳೆಯ ಹೆಸರನ್ನು ಪಡೆದಿದ್ದರು. ಸರಸ್ವತಿ ರೈಯವರ ಪತಿ ಅಗ್ರಾಳ ಪದ್ಮನಾಭ ರೈಯವರು ಸಾಮಾಜಿಕ, ಧಾರ್ಮಿಕ ಹಾಗೂ ರಾಜಕೀಯ ಕ್ಷೇತ್ರದಲ್ಲಿ ಒಳ್ಳೆಯ ಕೆಲಸವನ್ನು ಮಾಡಿದವರು, ಅವರು ಪುಣಚ ದೇವಾಲಯದ ಅಭಿವೃದ್ಧಿ ಕಾರ್‍ಯದಲ್ಲಿ ತುಂಬಾ ಒಳ್ಳೆಯ ಸೇವೆ ಸಲ್ಲಿಸಿದ್ದರು, ಇವರ ಎಲ್ಲಾ ಕಾರ್‍ಯಗಳಿಗೆ ಸರಸ್ವತಿ ರೈಯವರ ಪ್ರೋತ್ಸಾಹ ನಿರಂತರವಾಗಿತ್ತು. ಸರಸ್ವತಿ ರೈಯವರ ಆದರ್ಶಗುಣಗಳನ್ನು ಅವರ ಮಕ್ಕಳು ಪಾಲಿಸಿಕೊಂಡು ಬರುತ್ತಿರುವುದು ತುಂಬಾ ಸಂತೋಷದ ವಿಚಾರವಾಗಿದೆ ಎಂದು ಹೇಳಿದರು.

ಸರಸ್ವತಿ ಪದ್ಮನಾಭ ರೈಯವರ ಪುತ್ರರಾದ ಬಂಟರ ಯಾನೆ ನಾಡವರ ಮಾತೃ ಸಂಘದ ಪುತ್ತೂರು ತಾಲೂಕು ಸಮಿತಿ ಸಂಚಾಲಕರಾದ ನ್ಯಾಯವಾದಿ ಕುಂಬ್ರ ದುರ್ಗಾಪ್ರಸಾದ್ ರೈ, ಸಿವಿಲ್ ಇಂಜಿನಿಯರ್ ವಿನೋದ್ ಪ್ರಸಾದ್ ರೈ, ಪುತ್ರಿ ಭಾರತಿ ನಾರಾಯಣ ಆಳ್ವ, ಅಳಿಯ ನಿವೃತ್ತ ವಾಲಿಬಾಲ್ ಕೋಚ್ ನಾರಾಯಣ ಆಳ್ವ, ಸೊಸೆಯಂದಿರಾದ ಹೀರಾ ರೈ, ಪೂರ್ಣಿಮಾ ರೈ ಹಾಗೂ ಮೊಮ್ಮಕ್ಕಳು, ಕುಂಬ್ರ ಜನನ ತರವಾಡು ಮತ್ತು ಅಗ್ರಾಳ ಕುಟುಂಬಸ್ಥರು ಉಪಸ್ಥಿತರಿದ್ದರು.

ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್, ಶಾಸಕ ಅಶೋಕ್‌ಕುಮಾರ್ ರೈ, ಹಿರಿಯ ಉದ್ಯಮಿ ಅರಿಯಡ್ಕ ಚಿಕ್ಕಪ್ಪ ನಾಕ್, ಮಾಜಿ ಶಾಸಕರುಗಳಾದ ಶಕುಂತಳಾ ಟಿ.ಶೆಟ್ಟಿ, ಮಲ್ಲಿಕಾ ಪ್ರಸಾದ್, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಮಾಜಿ ಅಧ್ಯಕ್ಷ ಬಿ.ಎ.ವಿವೇಕ್ ರೈ, ದ.ಕ, ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಶಶಿಕುಮಾರ್ ರೈ ಬಾಲ್ಯೊಟ್ಟು, ಬಂಟರ ಯಾನೆ ನಾಡವರ ಮಾತೃ ಸಂಘದ ಪುತ್ತೂರು ತಾಲೂಕು ಸಮಿತಿಯ ಸಹಸಂಚಾಲಕ ಸಾಜ ರಾಧಾಕೃಷ್ಣ ಆಳ್ವ ಮತ್ತು ನಿರ್ದೇಶಕರುಗಳು, ಹಿರಿಯ ನ್ಯಾಯವಾದಿಗಳಾದ ಮಹೇಶ್ ಕಜೆ, ನಿರ್ಮಲ್ ಕುಮಾರ್ ಜೈನ್, ಪುತ್ತೂರು ಪುಡಾ ಅಧ್ಯಕ್ಷ ಅಮಳ ರಾಮಚಂದ್ರ, ರಾಜಕೀಯ ಮುಂದಾಳು ಎಂ.ಬಿ. ಸದಾಶಿವ ಸುಳ್ಯ, ಪುತ್ತೂರು ಸುಧಾನ ವಿದ್ಯಾಸಂಸ್ಥೆಯ ಸಂಚಾಲಕ ರೆ.ವಿಜಯ ಹಾರ್ವಿನ್, ಜಿ.ಪಂ, ಮಾಜಿ ಸದಸ್ಯ ಎಂ.ಎಸ್.ಮಹಮ್ಮದ್, ಲೇಖಕ ಡಾ.ನರೇಂದ್ರ ರೈ ದೇರ್ಲ, ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣಪ್ರಸಾದ್ ಆಳ್ವ ಉಪ್ಪಳಿಗೆ, ಪುತ್ತೂರು ತಾಲೂಕು ಅಡಿಕೆ ವರ್ತಕರ ಸಂಘದ ಅಧ್ಯಕ್ಷ ಕೆ.ಎಸ್.ರವೀಂದ್ರನಾಥ ರೈ ಬಳ್ಳಮಜಲುಗುತ್ತು, ಕಡಬ ತಾಲೂಕು ಯಕ್ಷಧ್ರುವ ಪಟ್ಲ ಫೌಂಡೇಶನ್ ಘಟಕದ ಅಧ್ಯಕ್ಷ ದಯಾನಂದ ರೈ ಮನವಳಿಕೆಗುತ್ತು, ಪುತ್ತೂರು ತಾಲೂಕು ಯಕ್ಷಧ್ರುವ ಪಟ್ಲ ಫೌಂಡೇಶನ್ ಘಟಕದ ಅಧ್ಯಕ್ಷ ಕರುಣಾಕರ್ ರೈ ದೇರ್ಲ, ಪುತ್ತೂರು ತಾಲೂಕು ವಕೀಲರ ಸಂಘದ ಅಧ್ಯಕ್ಷ ಜಿ. ಜಗನ್ನಾಥ ರೈ ಮತ್ತು ಸಂಘದ ಪದಾಧಿಕಾರಿಗಳು ಹಾಗೂ ನ್ಯಾಯವಾದಿಗಳು, ದಂಬೆಕ್ಕಾನ ಸದಾಶಿವ ರೈ, ಅರಿಯಡ್ಕ ಕೃಷ್ಣ ರೈ ಪುಣ್ಚಪ್ಪಾಡಿ, ಎ.ಕೆ.ಜಯರಾಮ ರೈ ಕೆಯ್ಯೂರು, ಮಾರಪ್ಪ ಶೆಟ್ಟಿ ಪುಣಚ, ಕಡಮಜಲು ಸುಭಾಸ್ ರೈ, ಕೆ.ಎಚ್.ದಾಸಪ್ಪ ರೈ, ಕೇನ್ಯ ರವೀಂದ್ರನಾಥ ಶೆಟ್ಟಿ, ನಾರಾಯಣ ರೈ ಪರ್ಪುಂಜಬಾರಿಕೆ, ಸುಬ್ಬಣ್ಣ ರೈ ಖಂಡಿಗ, ಮೋಹನ್ ರೈ ನರಿಮೊಗರು, ಅರಿಯಡ್ಕ ಲಕ್ಷ್ಮೀನಾರಾಯಣ ಶೆಟ್ಟಿ ಹಾಗೂ ಪುತ್ತೂರು ತಾಲೂಕು ಬಂಟರ ಸಂಘ, ಮಹಿಳಾ ಹಾಗೂ ಯುವ ಬಂಟರ ಸಂಘದ ಪದಾಧಿಕಾರಿಗಳು ಸೇರಿದಂತೆ ಧಾರ್ಮಿಕ, ಸಾಮಾಜಿಕ, ಪುತ್ತೂರು ತುಳು ಕೂಟದ ಅಧ್ಯಕ್ಷ ಪ್ಯಾಟ್ರಿಕ್ ಸಿಪ್ರಿಯನ್ ಮಸ್ಕರೇನಸ್, ಮಾಜಿ ಅಧ್ಯಕ್ಷ ವಿಜಯಕುಮಾರ್ ಭಂಡಾರಿ ಹೆಬ್ಬಾರಬೈಲು, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ತಾರಾನಾಥ ಗಟ್ಟಿ, ನ್ಯಾಯವಾದಿ ಶೀನಪ್ಪ ಗೌಡ ಬೈತಡ್ಕ, ಕುಂಬ್ರ ತರವಾಡು ಮನೆಯ ಯಜಮಾನ ಕೆ.ಎನ್ .ವಿಠಲ ಶೆಟ್ಟಿ, ಸಹಕಾರಿ ಧುರಿಣ ಕುಂಬ್ರ ದಯಾಕರ್ ಆಳ್ವ, ರಾಜಕೀಯ ಶೈಕ್ಷಣಿಕ ಮುಂದಾಳುಗಳ ಸಹಿತ ಸಾವಿರಾರು ಮಂದಿ ಭೇಟಿ ನೀಡಿ ಶ್ರದ್ಧಾಂಜಲಿ ಸಲ್ಲಿಸಿದರು.

LEAVE A REPLY

Please enter your comment!
Please enter your name here