ಸೆ.18: ಪುತ್ತೂರು ಜಿ.ಎಲ್.ವನ್ ಮಾಲ್’ನಲ್ಲಿ ಖ್ಯಾತ ಪತ್ರಕರ್ತ ಪಾರ್ವತೀಶ ಬಿಳಿದಾಳೆ ಅವರಿಂದ ಉಪನ್ಯಾಸ-ಸಂವಾದ

0

ಪುತ್ತೂರು: ವೈವಿಧ್ಯಮಯ ಮಾಹಿತಿ-ಸಂವಾದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಅನೌಪಚಾರಿಕ ಸಂಸ್ಥೆ ಸುವಿಚಾರ ಬಳಗದ ಆಶ್ರಯದಲ್ಲಿ ಕರ್ನಾಟಕ ಪತ್ರಕರ್ತರ ಸಂಘ ಪುತ್ತೂರು ಘಟಕ ಮತ್ತು ಸುದ್ದಿ ಬಿಡುಗಡೆ ಸಮೂಹ ಸಂಸ್ಥೆಗಳ ಸಹಯೋಗದಲ್ಲಿ ಸೆಪ್ಟೆಂಬರ್ 18ರಂದು ಸಂಜೆ 5 ಗಂಟೆಗೆ ಪುತ್ತೂರು ಜಿ.ಎಲ್.ವನ್ ಮಾಲ್’ನ ಒಂದನೇ ಮಹಡಿಯಲ್ಲಿ ಖ್ಯಾತ ಪತ್ರಕರ್ತ ಪಾರ್ವತೀಶ್ ಬಿಳಿದಾಳೆ ಅವರಿಂದ “ತನಿಖಾ ವರದಿ ಮಾಡುವ ಪತ್ರಕರ್ತರು ಎದುರಿಸುವ ಸವಾಲುಗಳು” ವಿಷಯದಲ್ಲಿ ಉಪನ್ಯಾಸ-ಸಂವಾದ ಕಾರ್ಯಕ್ರಮ ಏರ್ಪಡಿಸಲಾಗಿದೆ.

ಜಿ.ಎಲ್. ಆಚಾರ್ಯ ಸಮೂಹ ಸಂಸ್ಥೆಯ ಮುಖ್ಯಸ್ಥ ಬಲರಾಮ ಆಚಾರ್ಯ ಮತ್ತು ಸುದ್ದಿ ಸಮೂಹ ಸಂಸ್ಥೆಗಳ ಮುಖ್ಯಸ್ಥ ಡಾ. ಯು.ಪಿ. ಶಿವಾನಂದ ಅವರುಗಳ ಗೌರವ ಉಪಸ್ಥಿತಿ ಇರಲಿದೆ. ಸಾರ್ವಜನಿಕರಿಗೆ ಮುಕ್ತ ಪ್ರವೇಶ ಇರಲಿದ್ದು ಪತ್ರಿಕಾಸಕ್ತರು ಭಾಗವಹಿಸಬೇಕೆಂದು ಸುವಿಚಾರ ಬಳಗದ ಸಂಚಾಲಕ ಪ್ಯಾಟ್ರಿಕ್ ಸಿಪ್ರಿಯನ್ ಮಸ್ಕರೇನಸ್, ಕರ್ನಾಟಕ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀಧರ ರೈ ಕೋಡಂಬು ಮತ್ತು ಸುದ್ದಿ ಸಂಸ್ಥೆಗಳ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸೃಜನ್ ಊರುಬೈಲು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here