ಪುತ್ತೂರು: ಹುಸೈನ್ ಕೆಮ್ಮಿಂಜೆ ಹಾಗೂ ಸಾಧಿಕ್ ಕೂರ್ನಡ್ಕ ಇವರ ಪಾಲುದಾರಿಕೆಯಲ್ಲಿ ಮನೆ ನಿರ್ಮಾಣ, ಕಟ್ಟಡ ನಿರ್ಮಾಣ ಅಥವಾ ಕಚೇರಿಗಳಿಗೆ ಬೇಕಾಗುವಂತಹ ಅತ್ಯುತ್ತಮ ಗುಣಮಟ್ಟದ ಅಲ್ಯೂಮಿನಿಯಂ ಸಾಮಗ್ರಿಗಳು, ಎಸಿಪಿ ಶೀಟ್ಸ್, ಪಿವಿಸಿ ಶೀಟ್ಸ್, ಲ್ಯಾಮಿನೇಟ್, ಡೋರ್ ಆ್ಯಂಡ್ ಹಾರ್ಡ್ವೇರ್ ಹಾಗೂ ಪ್ಲೈವುಡ್ ಮತ್ತು ಲುವರ್ಸ್ ಸಾಮಗ್ರಿಗಳನ್ನೊಳಗೊಂಡಿರುವ ಮಳಿಗೆ ಬಾವ ಟ್ರೇಡರ್ಸ್ ಇಲ್ಲಿನ ಬೊಳುವಾರು ತಿರುಮಲ ಹೋಂಡಾ ಶೋರೂಮ್ ಮುಂಭಾಗದಲ್ಲಿನ ಸಂಕೀರ್ಣದಲ್ಲಿ ಸೆ.17ರಂದು ಧಾರ್ಮಿಕ ಕೈಂಕರ್ಯದೊಂದಿಗೆ ಶುಭಾರಂಭಗೊಂಡಿತು.


ಕೂರ್ನಡ್ಕ ಪೀರ್ ಮೊಹಲ್ಲಾ ಮುಹಿಯುದ್ದಿನ್ ಜುಮ್ಮಾ ಮಸೀದಿಯ ಖತೀಬರಾದ ಅಬ್ದುಲ್ ಬಾಶಿದ್ ಹುದವಿ ಮಂಗಳೂರು ಇವರು ನೂತನ ಸಂಸ್ಥೆಯ ಉದ್ಘಾಟನೆ ನೆರವೇರಿಸಿ, ದುವಾ ಆಶೀರ್ವಚನ ನೀಡಿ, ಸಂಸ್ಥೆಯ ಶ್ರೇಯೋಭಿವೃದ್ಧಿಗೆ ಹರಸಿದರು.
ಬಾವಾ ಹಾಜಿ ಕೂರ್ನಡ್ಕ, ಗಲ್ಫ್ ಟೂರ್ ಅ್ಯಂಡ್ ಟ್ರಾವೆಲ್ಸ್ ನ ಸುಲೈಮಾನ್ ಹಾಜಿ, ಹಸೈನಾರ್ ಡ್ರೀಮ್ಸ್, ಪಿ ಸಿ ಎನ್ ಕೇಬಲ್ ನೆಟ್ವರ್ಕ್ ನ ಅಬೂಬಕ್ಕರ್, ಅಬೂಬಕ್ಕರ್ ಮದನಿ, ಫ್ಯಾಶನ್ ಲೈನ್ ಬುರ್ಖಾ ಹೌಸ್ ನ ಇಕ್ಬಾಲ್, ಅಬ್ದುಲ್ ಖಾದರ್ ಕೂರ್ನಡ್ಕ ಹಾಗೂ ಸಂಕೀರ್ಣದ ಮಾಲೀಕ ಸದಾನಂದ ಸಹಿತ ಹಲವರು ಅತಿಥಿಗಳು ಆಗಮಿಸಿ ಹಾರೈಸಿದರು.
ಪಾಲುದಾರರಾದ ಹುಸೈನ್ ಕೆಮ್ಮಿಂಜೆ ಮತ್ತು ಸಾದಿಕ್ ಕೂರ್ನಡ್ಕ ಎಲ್ಲರನ್ನೂ ಸ್ವಾಗತಿಸಿ, ವಂದಿಸಿದರು.