ಪುತ್ತೂರು: ಇನ್ನರ್ ವೀಲ್ ಕ್ಲಬ್ ಅಧ್ಯಕ್ಷೆ ರೂಪಲೇಖಾ ಅವರ ನಿಲಯ ‘ಕೃಷ್ಣಾ’ದಲ್ಲಿ ಶಿಕ್ಷಕರ ದಿನಾಚರಣೆ ಹಾಗೂ ಇಂಜಿನಿಯರ್ ದಿನಾಚರಣೆಗಳ ಪ್ರಯುಕ್ತ ಕ್ಲಬ್ ನಲ್ಲಿರುವ ಶಿಕ್ಷಕಿಯರನ್ನು ಹಾಗೂ ಇಂಜಿನಿಯರ್ಸ್ ನ್ನು ಗುರುತಿಸಿ ಗೌರವಿಸಲಾಯಿತು.
ಕ್ಲಬ್ ನ ಐ ಎಸ್ ಒ ವೇದ ಲಕ್ಷ್ಮೀಕಾಂತ್ ಹಾಗೂ ಕ್ಲಬ್ ನ ಹಿರಿಯ ಸದಸ್ಯೆ ವಿದ್ಯಾಗೌರಿ ಸದಸ್ಯರಿಗೆ ಕೆಲವು ಸ್ಪರ್ಧೆಗಳನ್ನು ನಡೆಸಿದರು. ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಕ್ಲಬ್ ನ ಸದಸ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಶೋಭಾ ಕೊಳತ್ತಾಯ ಕಾರ್ಯಕ್ರಮ ನಿರ್ವಹಣೆ ಮಾಡಿದರು.