ಪುತ್ತೂರು: ಪವಿತ್ರ ಮೆಕ್ಕಾ ಉಮ್ರಾ ತೀರ್ಥಯಾತ್ರೆ ಕೈಗೊಳ್ಳುತ್ತಿರುವ ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಉಪಾಧ್ಯಕ್ಷ ಅಬೂಬಕ್ಕರ್ ಕೊರೆಂಗಿಲ ಹಾಗೂ ಬೆಟ್ಟಂಪಾಡಿ ಗ್ರಾ.ಪಂ ಸದಸ್ಯ ಮೊದು ಕುಂಞ ಕೋನಡ್ಕ ಇವರಿಗೆ ಇರ್ದೆ-ಬೆಟ್ಟಂಪಾಡಿ ವಲಯ ಕಾಂಗ್ರೆಸ್‌ನಿಂದ ಅಭಿನಂದನಾ ಕಾರ್ಯಕ್ರಮವು ವಲಯ ಸೆ.16ರಂದು ಇರ್ದೆ ಬೆಟ್ಟಂಪಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸಭಾಂಗಣದಲ್ಲಿ ನಡೆಯಿತು.
ಅಭಿನಂದಿಸಿದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣಪ್ರಸಾದ್ ಆಳ್ವ ಮಾತನಾಡಿ, ಚೆಲ್ಯಡ್ಕ ಸೇತುವೆ, ರಸ್ತೆ ಕಾಂಕ್ರಿಟೀಕರಣ ಸೇರಿದಂತೆ ಇರ್ದೆ ಬೆಟ್ಟಂಪಾಡಿಗೆ ಶಾಸಕರಿಂದ ಅತೀ ಹೆಚ್ಚು ಅನುದಾನ ಬಂದಿದೆ. ಇನ್ನೂ ಎರಡೂವರೆ ವರ್ಷದಲ್ಲಿ ಇನ್ನಷ್ಟು ಅನುದಾನಗಳು ಬರಲಿದೆ. ಮುಂಬರುವ ತಾ.ಪಂ ಜಿ.ಪಂ ಚುನಾವಣೆಯಲ್ಲಿ ಅತೀ ಹೆಚ್ಚ ಸ್ಥಾನಗಳಿಸುವ ಮೂಲಕ ಶಾಸಕ ಅಶೋಕ್ ಕುಮಾರ್ ರೈಯವರ ಕೈ ಬಲಪಡಿಸಬೇಕು. ಯುವ ಕಾರ್ಯಕತರ್ಯರು ಪಕ್ಷ ಸಂಘಟನೆಯಲ್ಲಿ ಒಗ್ಗಟ್ಟಿನಿಂದ ಶಕ್ತಿ ಮೀರಿ ಶ್ರಮಿಸಿ ಪಂಚಾಯತ್‌ನಲ್ಲಿ ಕಾಂಗ್ರೆಸ್ ಪಕ್ಷ ಮತ್ತೆ ಅಧಿಕಾರಕ್ಕೆ ಬರಬೇಕು, ವಲಯ ಅಧ್ಯಕ್ಷ ನವೀನ್ ರೈಯವರ ನೇತೃತ್ವದಲ್ಲಿ ಇನ್ನಷ್ಟು ಪಕ್ಷ ಸಂಘಟನಾ ಕಾರ್ಯಕ್ರಮಗಳು ನಡೆಯಲಿ ಎಂದರು.
ವಲಯ ಅಧ್ಯಕ್ಷ ನವೀನ್ ರೈ ಚೆಲ್ಯಡ್ಕ ಮಾತನಾಡಿ, ಬೆಟ್ಟಂಪಾಡಿ ಗ್ರಾ.ಪಂನಲ್ಲಿ 2 ಸ್ಥಾನದಲ್ಲಿದ್ದ ಕಾಂಗ್ರೆಸ್ ಬೆಂಬಲಿತ ಸದಸ್ಯರ ಸಂಖ್ಯೆ 5ಕ್ಕೆ ಏರಿಕೆಯಾಗಿದೆ. ಮುಂದಿನ ದಿನಗಳಲ್ಲಿ ಬಹುಮತ ಪಡೆದು ಅಧಿಕಾರಕ್ಕೆ ಬರಬೇಕು. ಪಕ್ಷದ ಕಾರ್ಯಕರ್ತರು ಯಾವುದೇ ಟೀಕೆಗಳಿಗೆ ಕಿವಿಗೊಡದೆ ಶಕ್ತಿ ಮೀರಿ ಪ್ರಯತ್ನಿಸುವ ಮೂಲಕ ಇರ್ದೆ ಬೆಟ್ಟಂಪಾಡಿಯಲ್ಲಿ ಕಾಂಗ್ರೆಸ್‌ನ್ನು ಬಲಪಡಿಸಬೇಕು ಎಂದು ಹೇಳಿದರು.
ಕಾಂಗ್ರೆಸ್ ರಾಜ್ಯ ಪ್ರಚಾರ ಸಮಿತಿ ಸಂಯೋಜಕ ಶಶಿಕಿರಣ್ ರೈ ನೂಜಿಬೈಲ್, ವಲಯ ಉಸ್ತುವಾರಿ ಮೈಮೂನ ಪಾಣಾಜೆ, ಕೊರೆಂಗಿಲ ಜಮಾತ್ ಅಧ್ಯಕ್ಷ ಮೊಹಮ್ಮದ್ ಕುಂಞ ಕೊರೆಂಗಿಲ, ಮಾಜಿ ವಲಯ ಅಧ್ಯಕ್ಷ ಮಾಧವ ಪೂಜಾರಿ ರೆಂಜ, ಸಂಘಟನಾ ಕಾರ್ಯದರ್ಶಿ ಕೊಮ್ಮೆಮಾರ್ ಅಬ್ದುಲ್ ಹಮೀದ್, ಉಪಾಧ್ಯಕ್ಷ ಅಬ್ದುಲ್ ಅಝೀಝ್, ಇರ್ದೆ ವಿಷ್ಣುಮೂರ್ತಿ ದೇವಾಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯೆ ಭವಾನಿ ಹುಕ್ರಪ್ಪ ಗೌಡ, ಬೆಟ್ಟಂಪಾಡಿ ಗ್ರಾ.ಪಂ ಸದಸ್ಯರಾದ ಲಲಿತ ಚಿದಾನಂದ್, ಸುಮಲತಾ ಆನಂದ, ವಲಯ ಯುವ ಕಾಂಗ್ರೇಸ್ ಅಧ್ಯಕ್ಷ ಅವಿನಾಶ್ ಟೆಲಿಸ್, ಬೂತ್ ಅಧ್ಯಕ್ಷ ಯಾಕೂಬ್ ಕೂಟತ್ತಾನ, ದಾಮೋದರ ಆರಂತ್ನಡ್ಕ, ಎಸ್ಸಿ ಘಟಕದ ಅಚ್ಚುತ ಉಪ್ಪಲಿಗೆ ಮತ್ತಿತರರು ಉಪಸ್ಥಿತರಿದ್ದರು.
ಬೆಟ್ಟಂಪಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮಾಜಿ ನಿರ್ದೇಶಕ ಸದಾಶಿವ ರೈ ಚೆಲ್ಯಡ್ಕ ಸ್ವಾಗತಿಸಿ, ಬ್ಲಾಕ್ ಕಾಂಗ್ರೆಸ್ ಎಸ್ಸಿ ಘಟಕದ ಸದಸ್ಯ ಐತ್ತಪ್ಪ ಪೇರಳ್ತಡ್ಕ ವಂದಿಸಿದರು.