ಪುತ್ತೂರು: ಪುತ್ತೂರಿನ ಪ್ರತಿಷ್ಠಿತ ವಿದ್ಯಾಸಂಸ್ಥೆ ಶ್ರೀ ರಾಮಕೃಷ್ಣ ಪ್ರೌಢಶಾಲೆಯ ವಿದ್ಯಾರ್ಥಿಗಳು ಸೆ.20ರಂದು ಹೈದರಾಬಾದ್ನ ವಾರಾಹಿ ಬ್ಯಾಂಕ್ವೆಟ್ ಹಾಲ್ ನಲ್ಲಿ ರಾಸ್ಬೇರಿ ಪೈ ಫೌಂಡೇಶನ್ ಆಯೋಜಿಸಿರುವ ರಾಷ್ಟ್ರಮಟ್ಟದ ’ಕೂಲೆಸ್ಟ್ ಪ್ರಾಜೆಕ್ಟ್ಸ್ಇಂಡಿಯಾ’ ವಿಜ್ಞಾನ ಸಮಾವೇಶಕ್ಕೆ ವಿದ್ಯಾರ್ಥಿನಿಯರಾದ 9ನೇ ತರಗತಿಯ ದ್ರಿಶಾ ಪಿ (ನರಿಮೊಗರು ಪ್ರಶಾಂತ್ ಎಂ. ಪಿ ಮತ್ತುತ್ರಿವೇಣಿಯವರ ಪುತ್ರಿ), ಲಾವಣ್ಯ ನಾಯಕ್ ಕೆ (ಮುಂಡೂರು ಲವ ಕುಮಾರ್ ಮತ್ತು ನಳಿನಾಕ್ಷಿ ನಾಯಕ್ರವರ ಪುತ್ರಿ), ಬೃಂದಾ ಆರ್ ಕೆ (ಕೆಮ್ಮಿಂಜೆ ರಮೇಶ್ ಕೆ ಮತ್ತು ಶೋಭಾರವರ ಪುತ್ರಿ) ಹಾಗೂ ವಿವೇಕಾನಂದ ಸೆಂಟ್ರಲ್ ಸ್ಕೂಲ್ ನ ಇಬ್ಬರು ವಿದ್ಯಾರ್ಥಿನಿಯರು ಜೊತೆಗೂಡಿ ತಯಾರಿಸಿದ ನೃತ್ಯ ದೀಪ ವಿಜ್ಞಾನ ಯೋಜನೆಯು ಕೂಲೆಸ್ಟ್ ಪ್ರಾಜೆಕ್ಟ್ಸ್ಇಂಡಿಯಾ ಕ್ಕೆ ಆಯ್ಕೆಗೊಂಡಿದೆ.

ವಿದ್ಯಾರ್ಥಿಗಳಲ್ಲಿ ಕಂಪ್ಯೂಟರ್ ಮತ್ತು ಡಿಜಿಟಲ್ ತಂತ್ರಜ್ಞಾನದ ಜ್ಞಾನ, ಕೌಶಲವನ್ನು ಹೆಚ್ಚಿಸುವ ಉದ್ದೇಶದಿಂದ ರಾಸ್ಬೇರಿ ಪೈ ಫೌಂಡೇಶನ್ ’ಕೂಲೆಸ್ಟ್ ಪ್ರಾಜೆಕ್ಟ್ಸ್’ ಎಂಬ ಸಮಾವೇಶವನ್ನು ವಿವಿಧ ದೇಶಗಳಲ್ಲಿ (ಸುಮಾರು 41 ದೇಶಗಳು) ಆಯೋಜಿಸುತ್ತಿದೆ. ನಮ್ಮ ದೇಶದಲ್ಲಿ ಪ್ರಥಮ ಭಾರಿಗೆ ಈ ಸಮಾವೇಶವು ನಡೆಯಲಿದೆ.
ಇವರಿಗೆ ಮೂಲತಃ ಪುತ್ತೂರಿನವರಾಗಿದ್ದ ಪ್ರಸ್ತುತ ಅಮೇರಿಕದಲ್ಲಿ ನೆಲೆಸಿರುವ ಆನಂದ ವರ್ಧನರವರು ತರಬೇತಿಯನ್ನು ನೀಡಿರುತ್ತಾರೆ ಎಂದು ಶಾಲಾ ಸಂಚಾಲಕರಾದ ಹೇಮನಾಥ ಶೆಟ್ಟಿ ಕಾವು ಹಾಗೂ ಪ್ರಭಾರ ಮುಖ್ಯೋಪಾಧ್ಯಾಯಿನಿಯಾದ ಗಾಯತ್ರಿ ಎಸ್ ರವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.