ಕಬಕ ಶ್ರೀ ಮಹಾದೇವಿ ಯುವಕ ಮಂಡಲ, ಶ್ರೀ ಮಹಾದೇವಿ ಮಹಿಳಾ ಮಂಡಳಿಯ ಸಹಕಾರದೊಂದಿಗೆ ತುಳುನಾಡ ಪೆರ್ಮೆದ ಕೆಸರ್ಡ್ ಒಂಜಿದಿನ ಕಾರ್ಯಕ್ರಮ

0

ಪುತ್ತೂರು: ಶ್ರೀ ಮಹಾದೇವಿ ಯುವಕ ಮಂಡಲ (ರಿ.)ಕಬಕ ಹಾಗೂ ಶ್ರೀ ಮಹಾದೇವಿ ಮಹಿಳಾ ಮಂಡಳಿಯ ಸಹಕಾರದೊಂದಿಗೆ 2ನೇ ವರ್ಷದ ತುಳುನಾಡ ಪೆರ್ಮೆದ ಕೆಸರ್ಡ್ ಒಂಜಿದಿನ ಕಾರ್ಯಕ್ರಮ ನಡೆಯಿತು.

ಆರಂಭದಲ್ಲಿ ಕಬಕ ಶ್ರೀ ಮಹಾದೇವಿ ದೇವಸ್ಥಾನಲ್ಲಿ ಪ್ರಾರ್ಥನೆ ಸಲ್ಲಿಸಿ ಕ್ರೀಡಾ ಜ್ಯೋತಿಯೊಂದಿಗೆ ಕಬಕ ಸೀಗೆತ್ತಡಿ ಗದ್ದಗೆ ಮೆರವಣಿಗೆ ನಡೆಯಿತು. ಪ್ರಗತಿಪರ ಕೃಷಿಕರು ಲಿಂಗಪ್ಪ ಗೌಡ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಲಕ್ಷ್ಮೀ ಸೀಗೆತ್ತಾಡಿ ಕೆಸರುಗದ್ದೆ ಉದ್ಘಾಟನೆ ನಡೆಸಿದರು.

ಮಹಾದೇವಿ ಧರ್ಮ ಸೇವಾ ವಿಶ್ವಸ್ಥ ಮಂಡಳಿಯ ಅಧ್ಯಕ್ಷರು ವಿ. ಚಂದ್ರಶೇಖರ್ ರವರು ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ವಿಧಾನ ಪರಿಷತ್ ಸದಸ್ಯರು ಕಿಶೋರ್ ಕುಮಾರ್ ಬೊಟ್ಯಾಡಿ, ಕುಂಡಡ್ಕ ಶ್ರೀ ವಿಷ್ಣು ಮೂರ್ತಿ ದೇವಸ್ಥಾನದ ಅಧ್ಯಕ್ಷರಾದ ವೇಣುಗೋಪಾಲ್ ಶೆಟ್ಟಿ ಮರುವಳ, ಮಾಜಿ ಶಾಸಕರು ಸಂಜೀವ ಮಠoದೂರು, ಕಬಕ ಗ್ರಾಮ ಪಂಚಾಯತ್ ಅಧ್ಯಕ್ಷರು ಸುಶೀಲ ನೆಕ್ಕರೆ, ಉಪಾಧ್ಯಕ್ಷರು ಗೀತಾ ಪದ್ನಡ್ಕ, ಅಡ್ಯಾಲಯ, ಶ್ರೀ ಅಡ್ಯಾಲಯ ಸೇವಾ ಸಮಿತಿ ಕಬಕ ಇದರ ಗೌರವಾಧ್ಯಕ್ಷರಾದ ಪಿ.ರಾಜಾರಾಮ ಶೆಟ್ಟಿ ಕೋಲ್ಪೆಗುತ್ತು, ಅಧ್ಯಕ್ಷರಾದ ಸತೀಶ್ ರೈ ಡಿಂಬ್ರಿಗುತ್ತು, ಕಬಕ ಶ್ರೀ ಮಹಾದೇವಿ ಧರ್ಮ ಸೇವಾ ವಿಶ್ವಸ್ಥ ಮಂಡಳಿಯ ಕಾರ್ಯದರ್ಶಿ ಜತ್ತಪ್ಪ ಗೌಡ ಅಡ್ಯಾಲು, ವಿವೇಕಾನಂದ ವಿದ್ಯಾವರ್ಧಕ ಸಂಘದ ಉಪಾಧ್ಯಕ್ಷರಾದ ಸತೀಶ್ ರಾವ್ , ಬೆಳ್ತಂಗಡಿ ಪೊಲೀಸ್ ಠಾಣಾ ಎ.ಎಸ್.ಐ. ರವೀಶ್ ಹೊಸಳಿಕೆ, ಕೊಡಿಪಾಡಿ ಗ್ರಾ.ಪಂ. ಅಧ್ಯಕ್ಷರಾದ ಸೋಮಪ್ಪ ಪೂಜಾರಿ ಓಜಲ, ಇಡ್ಕಿದು ಗ್ರಾ.ಪಂ. ಸದಸ್ಯರಾದ ಚಿದಾನಂದ ಪೆಲತಿಂಜ, ರುಕ್ಮಯ ಗೌಡ ಪೋಳ್ಯ, ಮಹಾಬಲ ಪೂಜಾರಿ, ತಿಮ್ಮಪ್ಪ ಗೌಡ ಹೊಸಳಿಕೆ, ನೀಲಪ್ಪ ಕೋಡಂಚಾರಪಲು, ನವೀನ್ ಪೆಲತಿಂಜ, ದಾಮೋಧರ್ ನೆಕ್ಕರೆ, ದಿನೇಶ್ ಶ್ರೀ ಶಾಂತಿ, ಸಂಜೀವ ಪೆಲತಿಂಜ, ದಾಮೋದರ ಗೌಡ ಜೇಡರಕೋಡಿ, ರಾಮಣ್ಣ ಪೂಜಾರಿ, ಶಿವರಾಮ್ ನಾಯ್ಕ್, ಭೀಮ್ ಭಟ್ ಪದೆಂಜಾರು, ಮನೋರಂಜನ್ ಕಾಯರ್ಮಾರ್, ಗಣೇಶ್ ನಾಯ್ಕ್ ಕರ್ಗಲ್ಲು, ರವೀಂದ್ರ ಕಲ್ಲಂದಡ್ಕ, ವಸಂತ್ ದೇವಸ್ಯ, ನವೀನ್ ಪಂಡೆಲ್, ಪೂವಪ್ಪ ಅಡ್ಯಾಲು, ಬಾಲಕೃಷ್ಣ ಅಡ್ಯಾಲು, ಆನಂದ ಅಡ್ಯಾಲು, ಚಂದ್ರಶೇಖರ ಹನಿಯೂರು, ಧರ್ನಪ್ಪ ಸೀಗೆತ್ತಾಡಿ, ರಮ್ಯಾ ಹೊಸಳಿಕೆ, ರೇಷ್ಮಾ ನೆಕ್ಕರೆ, ನಾರಾಯಣ ಪ್ರಸಾದ್ ಪೋಳ್ಯ ಮೊದಲಾದವರು ಉಪಸ್ಥಿತರಿದ್ದರು ಸಮಾರೋಪ ಸಮಾರಂಭ ಕಾರ್ಯಕ್ರಮದಲ್ಲಿ ಯುವಕ ಮಂಡಲದ ಸ್ಥಾಪಕ ಪ್ರಧಾ‌ನ ಕಾರ್ಯದರ್ಶಿ ಲೋಕೇಶ್ ಶೆಟ್ಟಿ ಕಲ್ಲಂದಡ್ಕ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಬಿಜೆಪಿ ಪುತ್ತೂರು ಗ್ರಾಮಾಂತರ ಮಂಡಲದ ಅಧ್ಯಕ್ಷರು ದಯಾನಂದ ಉಜಿರೆಮಾರ್ ಯುವಕ ಮಂಡಲದ ಸ್ಥಾಪಕ ಅಧ್ಯಕ್ಷರು ಆನಂದ್ ನೆಕ್ಕರೆ, ಹಿಂದೂ ಮುಖಂಡರು ಅರುಣ್ ಕುಮಾರ್ ಪುತ್ತಿಲ, ಹಿಂದೂ ಧರ್ಮ ಶಿಕ್ಷಣ ಸಮಿತಿ ಕಬಕ ಇದರ ಅಧ್ಯಕ್ಷರಾದ ಬಾಲಕೃಷ್ಣ ಅನುಗ್ರಹ , ಇಡ್ಕಿದು ಸೇವಾ ಸಹಕಾರಿ ಸಂಘದ ಉಪಾಧ್ಯಕ್ಷರಾದ ರಾಮ್ ಭಟ್ ನೀರಪಳಿಕೆ ಮೊದಲಾದವರು ಉಪಸ್ಥಿತರಿದ್ದರು. ಯುವಕ ಮಂಡಲದ ಅಧ್ಯಕ್ಷರು ರಕ್ಷಿತ್ ಅಡ್ಯಾಲು ಸ್ವಾಗತಿಸಿದರು, ಯುವಕ ಮಂಡಲದ ಕಾರ್ಯದರ್ಶಿ ಯತೀಶ್ ಪದ್ನಡ್ಕ ವಂದಿಸಿದರು, ಜಯರಾಮ್ ನೆಕ್ಕರೆ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here