ಪುತ್ತೂರು: ಕಳೆದ ಹಲವು ವರ್ಷಗಳಿಂದ ತಿಂಗಳಾಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಹೊಟೇಲ್ ಗುರುಭವನದ ಸುಂದರ ನಾಯಕ್ ಬಾಯಾರು(90ವ)ರವರು ಸೆ.18 ರಂದು ನಿಧನರಾದರು.
ಮೂಲತಃ ಉಪ್ಪಳ ಬಾಯಾರು ನಿವಾಸಿಯಾಗಿರುವ ಇವರು ಕಳೆದ 20 ವರ್ಷಗಳಿಂದ ತಿಂಗಳಾಡಿಯಲ್ಲಿ ತನ್ನ ಪುತ್ರರ ಜೊತೆಯಲ್ಲಿ ಹೊಟೇಲ್ ನಡೆಸುತ್ತಿದ್ದರು. ಮೃತರು ಪತ್ನಿ ವಿಜಯಲಕ್ಷ್ಮೀ, ಪುತ್ರರಾದ ವಿಕ್ರಂ, ಉಯದ್, ಭಾಸ್ಕರ್ ಹಾಗೂ ಪುತ್ರಿ ಗೀತಾ ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಮೃತರ ಅಂತ್ಯ ಸಂಸ್ಕಾರವನ್ನು ತಿಂಗಳಾಡಿ ಕಜೆಯಲ್ಲಿರುವ ಅವರ ಜಾಗದಲ್ಲಿ ನೆರವೇರಿಸಲಾಯಿತು.