ಪುತ್ತೂರು: ಮಾಣಿ-ಮೈಸೂರು ರಾಷ್ಟ್ರೀಯ ಹೆದ್ದಾರಿಯ ಪುತ್ತೂರು ಸಮೀಪದ ಸಂಪ್ಯದಲ್ಲಿ ಅತ್ಯಾಧುನಿಕ ಸೌಕರ್ಯಗಳೊಂದಿಗೆ ಸುಸಜ್ಜಿತವಾಗಿ ನಿರ್ಮಾಣಗೊಂಡಿರುವ ಮೆಡ್ಲ್ಯಾಂಡ್ ಸ್ಪೆಷಾಲಿಟಿ ಆಸ್ಪತ್ರೆಯ ಲೋಕಾರ್ಪಣಾ ಸಮಾರಂಭ ಸೆ.21ರಂದು ಬೆಳಿಗ್ಗೆ ಗಂಟೆ 10.30ಕ್ಕೆ ನಡೆಯಲಿದೆ. ಮೆಡ್ಲ್ಯಾಂಡ್ ಸ್ಪೆಷಾಲಿಟಿ ಆಸ್ಪತ್ರೆ 1೦೦ ಬೆಡ್ಗಳನ್ನು ಒಳಗೊಂಡಿರುವ ಆಸ್ಪತ್ರೆಯಾಗಿದ್ದು, ಇಲ್ಲಿ ಶೀಘ್ರದಲ್ಲೇ 24 ಗಂಟೆಗಳ ತುರ್ತು ಚಿಕಿತ್ಸೆ ಲಭ್ಯವಿರಲಿದೆ. ಅಲ್ಲದೇ ಒಂದೇ ಸೂರಿನಡಿ ತಜ್ಞ ವೈದ್ಯರಿಂದ ಸಮಗ್ರ ವೈದ್ಯಕೀಯ ಸೇವೆ ಸಿಗಲಿದೆ. ಆಸ್ಪತ್ರೆಯಲ್ಲಿ ಆಧುನಿಕ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಲಾಗಿದ್ದು ಗುಣಮಟ್ಟದ ಸೇವೆಗೆ ವಿಶೇಷ ಆದ್ಯತೆ ನೀಡಲಾಗಿದೆ.
ಆಸ್ಪತ್ರೆಯನ್ನು ಕರ್ನಾಟಕ ವಿಧಾನಸಭೆಯ ಸ್ಪೀಕರ್ ಯು.ಟಿ ಖಾದರ್ ಉದ್ಘಾಟಿಸಲಿದ್ದು ಒ.ಟಿ ಕಾಂಪ್ಲೆಕ್ಸ್ನ್ನು ರಾಜ್ಯ ಪೌರಾಡಳಿತ ಮತ್ತು ಹಜ್ ಸಚಿವ ರಹೀಂ ಖಾನ್ ಉದ್ಘಾಟಿಸಲಿದ್ದಾರೆ. ಶಾಸಕ ಅಶೊಕ್ ಕುಮಾರ್ ರೈ ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದಾರೆ. ಅತಿಥಿಗಳಾಗಿ ದ.ಕ ಸಂಸದ ಕ್ಯಾ.ಬ್ರಿಜೇಶ್ ಚೌಟ, ವಿಧಾನ ಪರಿಷತ್ ಸದಸ್ಯರಾದ ಕಿಶೋರ್ ಕುಮಾರ್ ಬೊಟ್ಯಾಡಿ, ಹಾಗೂ ಐವನ್ ಡಿಸೋಜಾ, ಸುಳ್ಯ ಶಾಸಕಿ ಕು.ಭಾಗೀರಥಿ ಮುರುಳ್ಯ, ಕಾಸರಗೋಡು ದೇಲಂಪಾಡಿ ಜಿ.ಪಂ ಸದಸ್ಯ ಮುಹಮ್ಮದ್ ಶಫೀಕ್, ಶ್ರೀ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಹರೀಶ್ ಇಂಜಾಡಿ, ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಈಶ್ವರ ಭಟ್ ಪಂಜಿಗುಡ್ಡೆ, SKY ಹಾಸ್ಪಿಟಲ್ ಗ್ರೂಪ್ ಕಣ್ಣೂರು ಇದರ ಚೇರ್ಮೆನ್ ಡಾ.ವಾಸುದೇವನ್ ಟಿ.ಪಿ, ಬೆಂಗಳೂರು ಮಿಲನ್ ಪ್ಲೈವುಡ್ನ ಮಿಲಪ್ ಚಂದ್ ಜೈನ್, ಆರ್ಯಾಪು ಗ್ರಾ.ಪಂ ಅಧ್ಯಕ್ಷೆ ಗೀತಾ ಮೊದಲಾದವರು ಭಾಗವಹಿಸಲಿದ್ದಾರೆ ಎಂದು ಮೆಡ್ಲ್ಯಾಂಡ್ ಸ್ಪೆಷಾಲಿಟಿ ಆಸ್ಪತ್ರೆಯ ಚೇರ್ಮೆನ್ ಡಾ.ಅಶ್ರಫ್ ಕಮ್ಮಾಡಿ ತಿಳಿಸಿದ್ದಾರೆ.