ಸವಣೂರು : ಸವಣೂರು ಗ್ರಾ.ಪಂ.ವತಿಯಿಂದ ಸೆ.17ರಿಂದ ಅ.2 ರ ತನಕ ನಡೆಯಲಿರುವ ಸ್ವಚ್ಚತಾ ಹೀ ಸೇವಾ ಕಾರ್ಯಕ್ರಮಕ್ಕೆ ಕುಮಾರಧಾರ ಸಭಾಂಗಣದಲ್ಲಿ ಸೆ.17ರಂದು ಚಾಲನೆ ನೀಡಲಾಯಿತು.
ಗ್ರಾ.ಪಂ.ಉಪಾಧ್ಯಕ್ಷೆ ಜಯಶ್ರೀ ಅವರ ಅಧ್ಯಕ್ಷತೆ ವಹಿಸಿದ್ದರು. ಗ್ರಾ.ಪಂ.ಅಭಿವೃದ್ಧಿ ಅಧಿಕಾರಿ ವಸಂತ ಶೆಟ್ಟಿ ಅವರು ಸ್ವಚ್ಚತಾ ಹೀ ಸೇವಾ ಕುರಿತಂತೆ ಪ್ರತಿಜ್ಞಾ ವಿಧಿ ಬೋಧಿಸಿದರು.

ಕಾರ್ಯಕ್ರಮದಲ್ಲಿ ಗ್ರಾ.ಪಂ.ಸದಸ್ಯರಾದ ಅಬ್ದುಲ್ ರಜಾಕ್, ಗಿರಿಶಂಕರ ಸುಲಾಯ, ರಫೀಕ್ ಎಂ.ಎ,ರಾಜೀವಿ ಶೆಟ್ಟಿ, ಸತೀಶ್ ಅಂಗಡಿಮೂಲೆ, ತಾರಾನಾಥ ಬೊಳಿಯಾಲ,ಚಂದ್ರಾವತಿ ಸುಣ್ಣಾಜೆ, ಗ್ರಾ.ಪಂ.ಸಿಬ್ಬಂದಿಗಳಾದ ಪ್ರಮೋದ್ ಕುಮಾರ್, ದಯಾನಂದ ಎಂ.,ಜಯಶ್ರೀ, ಜಯಾ ಕೆ.,ಶಾರದಾ ಎಂ.,ಯತೀಶ್ ಕುಮಾರ್, ದೀಪಿಕಾ ಹಾಗೂ ಸಾರ್ವಜನಿಕರು ಪಾಲ್ಗೊಂಡಿದ್ದರು.
ಸ್ವಚ್ಚತಾ ಹೀ ಸೇವಾ ಆಂದೋಲನ
ಸವಣೂರು ಗ್ರಾ.ಪಂ.ವತಿಯಿಂದ ಸೆ.17 ಪ್ರತಿಜ್ಞಾ ಸ್ವೀಕಾರ,ಸೆ.18ರಂದು ಕರಪತ್ರ ವಿತರಣೆ ,ಸೆ.19ರಂದು ಗ್ರಾ.ಪಂ.ವ್ಯಾಪ್ತಿಯ ಎಲ್ಲಾ ಶಾಲೆಗಳಲ್ಲಿ ಸ್ವಚ್ಚತಾ ಕಾರ್ಯಕ್ರಮ, ಸೆ.22ರಂದು ಪುಣ್ಚಪ್ಪಾಡಿ ಗೌರಿಸದನದಲ್ಲಿ ಹರ್ ಘರ್ ಜಲ್ ಘೋಷಣೆ, ಸೆ.23ರಂದು ಸವಣೂರು ಬಸ್ ತಂಗುದಾಣ ಸ್ವಚ್ಚತೆ, ಸೆ.24ರಂದು ಪಾಲ್ತಾಡಿ ಗ್ರಾಮದ ಅಂಕತಡ್ಕದಲ್ಲಿ ಸ್ವಚ್ಚತಾ ಕಾರ್ಯಕ್ರಮ, ಸೆ.25ರಂದು ಗ್ರಾ.ಪಂ.ಕಚೇರಿ ಸ್ವಚ್ಚತೆ,ಸೆ.26ರಂದು ಪುಣ್ಚಪ್ಪಾಡಿ ಗ್ರಾಮದ ಕೊಂಬಕೆರೆ ಸ್ವಚ್ಚತೆ,ಸೆ.27ರಂದು ಪಾಲ್ತಾಡಿ ಗ್ರಾಮದ ನಾಡೋಳಿ ಘನತ್ಯಾಜ್ಯ ಘಟಕದ ಸುತ್ತ ಸ್ವಚ್ಚತೆ,ಸೆ.29ರಂದು ಸವಣೂರು ಗ್ರಾ.ಪಂ.ವ್ಯಾಪ್ತಿಯ ಎಲ್ಲಾ ನೀರಿನ ಟ್ಯಾಂಕ್ ಸ್ವಚ್ಚತೆ,ಸೆ.30 ಎಲ್ಲಾ ಅಂಗನವಾಡಿಗಳ ಸ್ವಚ್ಚತೆ,ಅ.1ರಂದು ಸವಣೂರು ಗ್ರಾ.ಪಂ.ನಲ್ಲಿ ಸ್ವಚ್ಚತಾ ಸ್ಪರ್ಧೆಗಳು,ಅ.2ರಂದು ಸವಣೂರು ಗ್ರಾ.ಪಂ.ನಲ್ಲಿ ಸ್ವಚ್ಚತಾ ಸಮಾರೋಪ ಹಾಗೂ ಗ್ರಾಮ ಸಭೆ ನಡೆಯಲಿದೆ ಎಂದು ಗ್ರಾ.ಪಂ.ಅಭಿವೃದ್ಧಿ ಅಧಿಕಾರಿ ವಸಂತ ಶೆಟ್ಟಿ ಅವರು ಮಾಹಿತಿ ನೀಡಿದರು.
ಕರಪತ್ರ ವಿತರಣೆ
ಸವಣೂರು ಗ್ರಾಮ ಪಂಚಾಯತ್ ಸವಣೂರು ಹಾಗೂ ಶ್ರೀರಾಮ ಸಂಜೀವಿನಿ ಗ್ರಾಮ ಪಂಚಾಯತ್ ಮಟ್ಟದ ಒಕ್ಕೂಟ( ರಿ )ಇದರ ಸಹಯೋಗದೊಂದಿಗೆ ಸ್ವಚ್ಚತಾ ಹೀ ಸೇವಾ -2025 ಇದರ ಅಂಗವಾಗಿ ಸವಣೂರು ಪಂಚಾಯತ್ ನ ವಠಾರದಲ್ಲಿ ಅಂಗಡಿಗಳಿಗೆ ಕರ ಪತ್ರ ಹಂಚಿಕೆ ಸೆ.18ರಂದು ನಡೆಯಿತು.

ಈ ಸಂದರ್ಭದಲ್ಲಿ ಗ್ರಾ.ಪಂ.ಅಧ್ಯಕ್ಷೆ ಸುಂದರಿ ಬಿ.ಎಸ್, ಉಪಾಧ್ಯಕ್ಷೆ ಜಯಶ್ರೀ,ಸದಸ್ಯರಾದ ಗಿರಿಶಂಕರ ಸುಲಾಯ,ರಾಜೀವಿ ಶೆಟ್ಟಿ, ಚೆನ್ನು ಮುಂಡೋತಡ್ಕ, ಶಬೀನಾ ಅಂಕತಡ್ಕ,ಇಂದಿರಾ ಬೇರಿಕೆ,ಯಶೋಧಾ ,ಸತೀಶ್ ಅಂಗಡಿಮೂಲೆ, ಭರತ್ ರೈ ,ತಾರಾನಾಥ ಬೊಳಿಯಾಲ,ರಫೀಕ್ ಎಂ.ಎ., ಸಂಜೀವಿನಿ ಒಕ್ಕೂಟದ ಅಧ್ಯಕ್ಷೆ ವಿಜಯ ಈಶ್ವರ ಗೌಡ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ವಸಂತ ಶೆಟ್ಟಿ,ಪಂಚಾಯತ್ ಸಿಬ್ಬಂದಿಗಳು, ಸಂಜೀವಿನಿ ಒಕ್ಕೂಟದ ಪ್ರತಿನಿಧಿಗಳು, ಸವಣೂರಿನ ವರ್ತಕರು ಪಾಲ್ಗೊಂಡಿದ್ದರು.