ಅಧ್ಯಕ್ಷ ಧನಂಜಯ ಗೌಡ ಮಿನಾವು, ಗೌರವಾಧ್ಯಕ್ಷ ಚಂದ್ರಶೇಖರ್ ಗೌಡ, ಕಾರ್ಯದರ್ಶಿ ಬಾಲಕೃಷ್ಣ ಶೇರ
ಪುತ್ತೂರು: ಕಬಕದಲ್ಲಿರುವ ಜೈಹಿಂದ್ ಆಟೋ ರಿಕ್ಷಾ ಚಾಲಕ ಮಾಲಕರ ಸಂಘದ ನೂತನ ಪದಗ್ರಹಣ ಸಭೆಯು ಕಬಕ ಶ್ರೀ ಮಹಾದೇವಿ ಯುವಕ ಮಂಡದಲ್ಲಿ ಸೆ.19ರಂದು ನಡೆಯಿತು.
ಗೌರವಾಧ್ಯಕ್ಷರಾಗಿ ಚಂದ್ರಶೇಖರ ಗೌಡ ಪುನರಾಯ್ಕೆಗೊಂಡಿದ್ದಾರೆ. ಅಧ್ಯಕ್ಷರಾಗಿ ಧನಂಜಯ ಗೌಡ ಮೀನಾವು, ಉಪಾಧ್ಯಾಕ್ಷರಾಗಿ ಹರೀಶ್ ನಾಯ್ಕ ಕಾರ್ಯದರ್ಶಿಯಾಗಿ ಬಾಲಕೃಷ್ಣ ಶೆಟ್ಟಿ ಶೇರ, ಜೊತೆಕಾರ್ಯದರ್ಶಿಯಾಗಿ ಜಯಂತ ಓಜಾಳ, ಕೋಶಧಿಕಾರಿಯಾಗಿ ರಮೇಶ್ ನಾಯ್ಕ ಆಯ್ಕೆಯಾಗಿದ್ದಾರೆ. ನೂತನ ಪದಾಧಿಕಾರಿಗಳಿಗೆ ಸಂಘದ ಲೆಕ್ಕಪತ್ರಗಳ ಪುಸ್ತಕ ಹಸ್ತಾಂತರ ಮಾಡಲಾಯಿತು.
ಸನ್ಮಾನ: ನಿರ್ಗಮನ ಅಧ್ಯಕ್ಷ ಮಹಾಬಲ ಪೂಜಾರಿ, ನಿರ್ಗಮನ ಕಾರ್ಯದರ್ಶಿ ತಿಲಕ್ ಅರ್ಕ, ಗೌರವಾಧ್ಯಕ್ಷ ಚಂದ್ರಶೇಖರ ಹಣಿಯೂರು ಇವರಿಗೆ ಸಂಘದ ಸದಸ್ಯರು ಸೇರಿ ಸನ್ಮಾನಿಸಿದರು. ಬಾಲಕೃಷ್ಣ ಶೆಟ್ಟಿ ಸ್ವಾಗತಿಸಿದರು.