ಪುತ್ತೂರು: ಬನ್ನೂರು ಕರ್ಮಲದ ಶ್ರೀ ಮಹಮ್ಮಾಯಿ ದೇವಸ್ಥಾನದಲ್ಲಿ ನವರಾತ್ರಿ ಉತ್ಸವವು ಸೆ.22ನೇ ಸೋಮವಾರದಿಂದ ಸೆ.30ನೇ ಮಂಗಳವಾರ ತನಕ ವಿಜೃಂಭಣೆಯಿಂದ ಜರಗಲಿರುವುದು.
ಸೆ.22ನೇ ಸೋಮವಾರ ನವರಾತ್ರಿ ಪೂಜೆಯ ಪ್ರಥಮ ದಿನ ಬೆಳಿಗ್ಗೆ ಗಣಹೋಮ ನಂತರ ಗದ್ದಿಗೆ ಏರಿಸುವುದು. ಸೆ.26ನೇ ಶುಕ್ರವಾರ ಮಹಾಪೂಜೆ ಬಳಿಕ ಆಯುಧ ಪೂಜೆ ನಡೆಯಲಿದೆ. ಪ್ರತೀ ದಿನ ಸಂಜೆ ಗಂಟೆ 6 ರಿಂದ ಭಜನೆ ರಾತ್ರಿ ಗಂಟೆ 8.30ಕ್ಕೆ ಮಹಾಪೂಜೆ, ಪ್ರಸಾದ ವಿತರಣೆ ನಂತರ ಅನ್ನ ಸಂತರ್ಪಣೆ ನಡೆಯಲಿದೆ. ಭಕ್ತಾದಿಗಳು ಈ ಪುಣ್ಯ ಕಾರ್ಯದಲ್ಲಿ ಪಾಲ್ಗೊಂಡು ಶ್ರೀ ದೇವಿಯ ಅನುಗ್ರಹಕ್ಕೆ ಪಾತ್ರರಾಗಬೇಕೆಂದು ಆಡಳಿತ ಮಂಡಳಿಯವರು ವಿನಂತಿಸಿದ್ದಾರೆ.