ಪುತ್ತೂರು; ಇಲ್ಲಿನ ವಿವೇಕಾನಂದ ಮಹಾವಿದ್ಯಾಲಯದ ವಾಣಿಜ್ಯ ವಿಭಾಗದ ಮಾಜಿ ವಿಭಾಗ ಮುಖ್ಯಸ್ಥರು, ನಿವೃತ್ತ ಹಿರಿಯ ಪ್ರಾಧ್ಯಾಪಕರೂ ಆದ ಪ್ರೊ| ಜಿ.ಟಿ.ಭಟ್(81ವ.)ರವರು ಸೆ.21ರಂದು ಮಧ್ಯಾಹ್ನ ನಿಧನರಾದರು.
ಪ್ರೊ| ವಿ.ಜಿ.ಭಟ್ ಅವರು 1967ರಲ್ಲಿ ವಿವೇಕಾನಂದ ಕಾಲೇಜಿನಲ್ಲಿ ವೃತ್ತಿಜೀವನ ಆರಂಭಿಸಿದ್ದರು. ಅವರ ವಿಶಿಷ್ಟ ಶೈಕ್ಷಣಿಕ ಶೈಲಿ, ಘನವಾದ ಧ್ವನಿ, ತತ್ವಪೂರ್ಣ ಉಪನ್ಯಾಸಗಳು ಹಾಗೂ ಸಹೋದ್ಯೋಗಿಗಳೊಂದಿಗೆ ಬೆರೆತುಕೊಳ್ಳುವ ನೈಪುಣ್ಯದಿಂದ ಅವರು ವಿದ್ಯಾರ್ಥಿಗಳ ಪ್ರಿಯ ಉಪಾನ್ಯಾಸಕರಾಗಿ ಗುರುತಿಸಿಕೊಂಡಿದ್ದರು.
ಅನೇಕ ತಲೆಮಾರುಗಳ ವಿದ್ಯಾರ್ಥಿಗಳು ಅವರಿಂದ ಪ್ರೇರಣೆಯುಳ್ಳ ಶಿಕ್ಷಣವನ್ನು ಪಡೆದಿದ್ದಾರೆ. ಸುಮಾರು 36ವರ್ಷದ ಸೇವೆಯ ಬಳಿಕ 2002 ಮಾ.31ರಂದು ಸೇವೆಯಿಂದ ನಿವೃತ್ತರಾದ ಬಳಿಕ ಶಿರಸಿಗೆ ಸ್ಥಳಾಂತರವಾಗಿ ಪತ್ನಿಯೊಂದಿಗೆ ಹಲವಾರು ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದರು. ಪ್ರಸ್ತುತ ಮಗ ಅವಿನಾಶ್‌ನೊಂದಿಗೆ ಶಿರಸಿಯಲ್ಲಿ ವಾಸವಾಗಿದ್ದರು.