ಪುತ್ತೂರು: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಭಜನಾ ಪರಿಷತ್ ಇದರ ವತಿಯಿಂದ ನಡೆದ 27ನೇ ವರ್ಷದ ಭಜನಾ ಕಮ್ಮಟದಲ್ಲಿ ಮುಂಡೂರು ಉದಯಗಿರಿ ಶ್ರೀ ವಿಷ್ಣುಮೂರ್ತಿ ಭಜನಾ ಮಂಡಳಿಯು ತಾಲೂಕಿನ ಶ್ರೇಷ್ಠ ಭಜನಾ ಮಂಡಳಿ ಪುರಸ್ಕಾರ ಪಡೆದುಕೊಂಡಿದೆ.
ಧರ್ಮಸ್ಥಳದ ಅಮೃತವರ್ಷಿಣಿ ಸಭಾಭವನದಲ್ಲಿ ಸೆ.20ರಂದು ನಡೆದ ಕಾರ್ಯಕ್ರಮದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಶ್ರೇಷ್ಠ ಭಜನಾ ಮಂಡಳಿ ಪುರಸ್ಕಾರ ನೀಡಿ ಗೌರವಿಸಿದರು. ಮಾಣಿಲ ಮಹಾಲಕ್ಷ್ಮೀ ಕ್ಷೇತ್ರದ ಮೋಹನದಾಸ ಪರಮಹಂಸ ಸ್ವಾಮೀಜಿ, ಹೇಮಾವತಿ ಹೆಗ್ಗಡೆ ಹಾಗೂ ಹರ್ಷೆಂದ್ರ ಹೆಗ್ಗಡೆಯವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಭಜನಾ ಮಂದಿರದ ಅಧ್ಯಕ್ಷ ಚೇತನ್ ಕುಮಾರ್ ಬೊಳ್ಳಗುಡ್ಡೆ ಪುರಸ್ಕಾರ ಸ್ವೀಕರಿಸಿದರು. ಉಪಾಧ್ಯಕ್ಷ ಸಂತೋಷ್ ಕುಮಾರ್, ಕೋಶಾಧಿಕಾರಿ ಚಂದ್ರಹಾಸ ಕೊರುಂಗು, ಕುಣಿತ ಭಜನಾ ತಂಡ ಸಂಚಾಲಕರಾದ ಗಣೇಶ್ ಸುವರ್ಣ ಬೊಳ್ಳಗುಡ್ಡೆ, ದೇವದಾಸ ಕುರಿಯ, ಸದಾಶಿವ ಶೆಟ್ಟಿ ಪಟ್ಟೆ, ಬಾಲಕೃಷ್ಣ ಶೆಟ್ಟಿ ಪಂಜ, ಚಂದ್ರಶೇಕರ ಮುಂಡೂರು, ಕಾರ್ತಿಕ ಸಂಪ್ಯ, ವಿನೋದ್ ಶೆಟ್ಟಿ ಪಂಜಳ, ಸಂತೋಷ್ ಶೆಟ್ಟಿ ಪಂಜಳ, ಬಾಲಕೃಷ್ಣ ಪೆರಿಯಡ್ಕ, ಕೆಮ್ಮಿಂಜೆ ವಲಯ ಭಜನಾ ಪರಿಷತ್ ಅಧ್ಯಕ್ಷ ಸುಧಾಕರ ಕುಲಾಲ್ ಗೀತಾ ರಮೇಶ್ ಹಿಂದಾರು, ಆಶಾ ಬಾಲಕೃಷ್ಣ ಪೆರಿಯಡ್ಕ, ಸಿಂಚನಾ ಪೆರಿಯಡ್ಕ ಭಜನಾ ತಂಡದಲ್ಲಿದ್ದರು.