ಬಡಗನ್ನೂರು: ತಮಿಳುನಾಡಿನ ಕೊಯಂಬತೂರಿನಲ್ಲಿ ನಡೆದ ಈಶ ಗ್ರಾಮ ಉತ್ಸವ ರಾಷ್ಟ್ರಮಟ್ಟದ ಥ್ರೋಬಾಲ್ ಪಂದ್ಯಾಟದಲ್ಲಿ ಪಡುಮಲೆ ಶಾಸ್ತಾರ ತಂಡವು ಪ್ರಥಮ ಸ್ಥಾನ ಪಡೆದು ಈಶ ಟ್ರೋಫಿ ಹಾಗೂ 5 ಲಕ್ಷ ನಗದು ಬಹುಮಾನ ತನ್ನದಾಗಿಸಿಕೊಂಡಿದೆ.
ಪಂದ್ಯಾಟದಲ್ಲಿ ಆಟಗಾರರಾಗಿ ರಮಾಕಾಂತಿ ರೈ ಬಿ, ದೀಕ್ಷಾ ರೈ ಎ, ರೇಖಾ ರೈ ಪಿ ಯಸ್, ಶ್ವೇತಾ ಯಸ್ ರೈ, ಪ್ರಿಯಾ ಬಿ, ಆಶಾಲತಾ ಕೆ, ಹೇಮಾವತಿ ಸಿ ಹೆಚ್ ಸಾಕ್ಷಿ ರೈ ಭಾಗವಹಿಸಿದ್ದರು. ಪಟ್ಟೆ ಶ್ರೀಕೃಷ್ಣ ವಿದ್ಯಾಸಂಸ್ಥೆಗಳ ದೈಹಿಕ ಶಿಕ್ಷಣ ಶಿಕ್ಷಕ ಮೋನಪ್ಪ ಎಂ ರವರು ತಂಡಕ್ಕೆ ತರಬೇತಿ ನೀಡಿರುತ್ತಾರೆ.