ಪುತ್ತೂರು: ಪುತ್ತೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಪಿಡಬ್ಲ್ಯೂಡಿ ರಸ್ತೆಯ ಮುಚ್ಚುವ ಕಾಮಗಾರಿಗೆ ಮಂಗಳವಾರ ಚಾಲನೆ ನೀಡಲಾಗಿದೆ.
ಮಳೆಯ ಕಾರಣಕ್ಕೆ ಕೆಲವು ಕಡೆಗಳಲ್ಲಿ ರಸ್ತೆ ಹೊಂಡಬಿದ್ದಿದ್ದು, ಅವುಗಳಿಗೆ ವೆಟ್ಮಿಕ್ಸ್ ಹಾಕುವ ಮೂಲಕ ಹೊಂಡ ಮುಚ್ಚುವ ಕೆಲಸಕ್ಕೆ ಚಾಲನೆ ನೀಡಲಾಯಿತು. ಕ್ಷೇತ್ರ ವ್ಯಾಪ್ತಿಯ ಸುಮಾರು 200 ಕಿ.ಮೀ ಪಿಡಬ್ಲ್ಯೂಡಿ ರಸ್ತೆಗಳಲ್ಲಿ ಹೊಂಡ ಮುಚ್ಚುವ ಕಾಮಗಾರಿ ನಡೆಯಲಿದೆ. ಕಾಮಗಾರಿಗೆ ಕಿ.ಮೀ ಒಂದಕ್ಕೆ ಒಂದು ಲಕ್ಷದಂತೆ ಅನುದಾನ ಬಿಡುಗಡೆಯಾಗಿದೆ. ವಾರದೊಳಗೆ ಎಲ್ಲಾ ಕಡೆಗಳಲ್ಲಿ ತೇಪೆ ಹಾಗೂ ಹೊಂಡ ಮುಚ್ಚುವ ಕಾಮಗಾರಿ ನಡೆಯಲಿದೆ. ಸೋಮವಾರ ಪಿಡಬ್ಲ್ಯೂಡಿ ಇಂಜಿನಿಯರ್ ಗಳನ್ನು ಕರೆಸಿ ಹೊಂಡ ಮುಚ್ಚುವಂತೆ ಶಾಸಕ ಅಶೋಕ್ ರೈ ಸೂಚನೆ ನೀಡಿದ್ದರು.