ನೆಲ್ಯಾಡಿ: ಇಲ್ಲಿನ ಹೊಸಮಜಲಿನಲ್ಲಿರುವ ಅಶ್ವಿನಿ ಆಸ್ಪತ್ರೆಯಲ್ಲಿ ಕಣ್ಣಿನ ಚಿಕಿತ್ಸೆಗೆ ಸಂಬಂಧಿಸಿದ ಆಪ್ತಲ್ಮೋಲಜಿ ವಿಭಾಗ ಸೆ.22ರಂದು ಶುಭಾರಂಭಗೊಂಡಿತು. ಆಸ್ಪತ್ರೆ ಆಡಳಿತ ವೈದ್ಯ ಡಾ.ಮುರಳೀಧರ ಅವರು ಈ ವಿಭಾಗವನ್ನು ಉದ್ಘಾಟಿಸಿದರು.
ಪುತ್ತೂರಿನ ಕಣ್ಣನ್ ಕಾಂಪ್ಲೆಕ್ಸ್‌ನಲ್ಲಿ ಕಾರ್ಯನಿವರ್ಹಸುತ್ತಿರುವ ಕಣ್ಣಿನ ಚಿಕಿತ್ಸಾಲಯದ ನೇತ್ರ ತಜ್ಞ ಡಾ.ಎಸ್.ಎಂ. ಅಶ್ವಿನ್ ಸಾಗರ್ ಮಾತನಾಡಿ, ಪ್ರಾರಂಭದ ಹಂತದಲ್ಲಿ ಕಣ್ಣಿನ ನ್ಯೂನ್ಯತೆಗಳನ್ನು ಗುರುತಿಸಿ ಚಿಕಿತ್ಸೆ ಪಡೆದಲ್ಲಿ ಅನೇಕ ಕಣ್ಣಿನ ರೋಗಗಳನ್ನು ನಿಯಂತ್ರಿಸಬಹುದು ಎಂದರು.
ನಿವೃತ್ತ ನೇತ್ರಾಧಿಕಾರಿ ಎಸ್.ಶಾಂತರಾಜ್ ಮಾತನಾಡಿ, ಅಶ್ವಿನಿ ಆಸ್ಪತ್ರೆಯ ಪರಿಸರದಲ್ಲಿ ನೇತ್ರ ವಿಭಾಗದ ಆರಂಭ ಸ್ತುತ್ಯಾರ್ಹವಾದದ್ದು ಎಂದರು. ಸ್ತ್ರೀ ರೋಗ ತಜ್ಞೆ ಡಾ.ಸುಧಾ ಅವರು ಸ್ವಾಗತಿಸಿ ಶುಭಹಾರೈಸಿದರು. ಎಲುಬು ತಜ್ಞ ಡಾ.ಶಮಂತ್ ಅವರು ಶುಭಹಾರೈಸಿ ವಂದಿಸಿದರು.
ಕಣ್ಣಿನ ಪರೀಕ್ಷೆಗೆ ನೋಂದಣಿ
ಅಶ್ವಿನಿ ಆಸ್ಪತ್ರೆಯಲ್ಲಿ ಕಣ್ಣಿನ ಚಿಕಿತ್ಸಾ ವಿಭಾಗ ಪ್ರಾರಂಭವಾಗಿದ್ದು, ನೇತ್ರತಜ್ಞರಾಗಿ ಅಶ್ವಿನ್ ಸಾಗರ್ ಹಾಗೂ ನೇತ್ರಾಧಿಕಾರಿ ಎಸ್.ಶಾಂತರಾಜ್ ಅವರು ಲಭ್ಯರಿರಲಿದ್ದಾರೆ. ಸೋಮವಾರ ಮತ್ತು ಗುರುವಾರದಂದು ಮುಂಗಡ ಕಾಯ್ದಿರಿಸಿದವರಿಗಾಗಿ ಮಧ್ಯಾಹ್ನ 1 ಗಂಟೆಯಿಂದ 3 ಗಂಟೆವರೆಗೆ ಸಂದರ್ಶನಕ್ಕೆ ಅವಕಾಶ ಇರಲಿದೆ. ಹೆಸರು ನೋಂದಾಯಿಸಲು 8861648237 ಸಂಪರ್ಕಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.