ಪುತ್ತೂರು;ಪುತ್ತೂರು ತಾಲೂಕು ಪರವನಾಗಿ ಭೂಮಾಪಕರು ಅನುಬಂಧ(1) (ದರ್ಖಸ್ತು ಪ್ರಕರಣ)ರದಲ್ಲಿ ಸರ್ವೆ ಮಾಡಿದ ಬಗ್ಗೆ ಮಾರ್ಚ್ 2025 ರಿಂದ ವೇತನ ಪಾವತಿ ಬಾಕಿ ಇದ್ದು ಈ ಬಗ್ಗೆ ಸರ್ವೆಯರ್ ಗಳು ಶಾಸಕ ಅಶೋಕ್ ರೈ ಗೆ ಮನವಿ ಮಾಡಿದ್ದರು.
ಈ ವಿಚಾರವನ್ನು ಕಂದಾಯ ಸಚಿವ ಕೃಷ್ಣ ಬೈರೇ ಗೌಡರ ಗಮನಕ್ಕೆ ತಂದ ಶಾಸಕರು ಬಾಕಿ ವೇತನವನ್ನು ವಿಳಂಬ ಮಾಡದೆ ಪಾವತಿಸುವಂತೆ ಕೇಳಿಕೊಂಡ ಮೇರೆಗೆ 15 ದಿವಸದೊಳಗೆ ಬಾಕಿ ವೇತನವನ್ನು ಪಾವತಿಸುವಂತೆ ಕಂದಾಯ ಇಲಾಖೆಗೆ ಸೂಚನೆ ನೀಡಿದರು.
ಪುತ್ತೂರು ವಿಧಾನ ಸಭಾ ಕ್ಷೇತ್ರದ ಪುತ್ತೂರು ತಾಲೂಕಿನಲ್ಲಿ ದರ್ಖಸ್ತು ಪ್ರಕರಣಕ್ಕೆ ಸುಮಾರು 40 ಜನ ಪರವನಾಗಿ ಭೂಮಾಪಕರನ್ನು ಅಳತೆ ಕೆಲಸಕ್ಕೆ ಬೇರೆ-ಬೇರೆ ತಾಲೂಕಿನಿಂದ ನಿಯೋಜಿಸಲಾಗಿತ್ತು. ಮುಖ್ಯ ಮಂತ್ರಿಯವರ ಮಂಗಳೂರು ಭೇಟಿ ಕಾರ್ಯಕ್ರಮದ ವೇಳೆ ಸಾವಿರಾರು ಮಂದಿಗೆ ಆರದ ಟಿ ಸಿ ವಿತರಣೆ ಮಾಡಲಾಗಿತ್ತು. ಈ ವೇಳೆ ಸಿ ಎಂ ಕಾರ್ಯಕ್ರಮದ ಅನುಸಾರ 40 ಭೂಮಾಪಕರು 1500 ಆರ್.ಟಿ.ಸಿ ಯನ್ನು 3 ತಿಂಗಳೊಳಗೆ ದುರಸ್ತಿ ಪಡಿಸಿದ್ದು ,ಇವರಿಗೆ ನಿಗದಿಪಡಿಸಲಾಗಿದ್ದ ವೇತನ ವಿಳಂಬವಾಗಿತ್ತು. ನಿಗದಿಯಾದಂತೆ 1 ಪ್ರಕರಣಕ್ಕೆ 1200 ರೂಗಳನ್ನು ಕೆಲ ನಿರ್ವಹಿಸಿದ ಭೂಮಾಪಕರಿಗೆ ಪಾವತಿ ಮಾಡುವಂತೆ ಶಾಸಕರು ಮನವಿ ಮಾಡಿದ್ದರು.