ಕಡಬ: ಅರಿವು ಕೇಂದ್ರದ ಮೇಲ್ವಿಚಾರಕರಿಗೆ, ಗ್ರಾಮೀಣ ಪುನರ್ವಸತಿ ಕಾರ್ಯಕರ್ತರಿಗೆ ’ದರ್ಶಿನಿ’ ಕಾರ್ಯಕ್ರಮ

0

ಕಡಬ: ಅರಿವು ಕೇಂದ್ರದ ಮೇಲ್ವಿಚಾರಕರಿಗೆ ಮತ್ತು ವಿಶೇಷಚೇತನರ ಹಾಗೂ ಹಿರಿಯ ನಾಗರೀಕರ ಸಬಲೀಕರಣ ಇಲಾಖೆಯಡಿ ಕಡಬ ತಾಲೂಕಿನ ಗ್ರಾಮ ಪಂಚಾಯತ್‌ಗಳಲ್ಲಿ ಸೇವೆ ಸಲ್ಲಿಸುತ್ತಿರುವ ಗ್ರಾಮೀಣ ಪುನರ್ವಸತಿ ಕಾರ್ಯಕರ್ತರಿಗೆ ’ದರ್ಶಿನಿ’ ಕಾರ್ಯಕ್ರಮ ಸೆ.23ರಂದು ಕಡಬ ತಾ.ಪಂ.ನಲ್ಲಿ ನಡೆಯಿತು.


ಸಂಪನ್ಮೂಲ ವ್ಯಕ್ತಿಯಾಗಿ ಪೆರಾಬೆ ಗ್ರಾ.ಪಂ.ನ ಗ್ರಂಥಾಲಯ ಮೇಲ್ವಿಚಾರಕಿ ಜಯಕುಮಾರಿ ಅವರು, ದ್ರಷ್ಟಿದೋಷವುಳ್ಳ ವಿಶೇಷಚೇತನರಿಗೆ ಅರಿವು ಕೇಂದ್ರಗಳಿಗೆ ವಿತರಿಸಲಾದ ಅಬಾಕಸ್ ಬ್ರೈಲ್ ಸ್ಲೇಟ್ ಮತ್ತು ಸೈಲಸ್ ಹಾಗೂ ಪಜಲ್ ಬೋರ್ಡ್‌ನ ಬಳಕೆ ಮತ್ತು ಅದರ ನಿರ್ವಹಣೆ ಮಾಡುವ ಬಗ್ಗೆ ಮಾಹಿತಿ ನೀಡಿದರು. ಸರಕಾರಿ ಕಟ್ಟಡಗಳಲ್ಲಿ ವಿಶೇಷಚೇತನರಿಗೆ ಅನುಕೂಲವಾಗುವಂತೆ ವ್ಹೀಲ್ ಚೆಯರ್ ಮತ್ತು ರ‍್ಯಾಂಪ್ ವ್ಯವಸ್ಥೆ ಆಗಬೇಕೆಂದು ತಿಳಿಸಿದರು.


ಪುತ್ತೂರು ತಾಲೂಕು ಪಂಚಾಯತ್‌ನ ವಿವಿದೋದ್ದೇಶ ಪುನರ್ವಸತಿ ಕಾರ್ಯಕರ್ತ ನವೀನ್ ಕುಮಾರ್‌ರವರು ವಿಶೇಷಚೇತನರ 2016ರ ಅಧಿನಿಯಮದ ಮಾಹಿತಿ ನೀಡಿದರು. ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಸಂಸ್ಥೆಯ ಮಲ್ಲಿಕಾ ತರಬೇತಿಯಲ್ಲಿ ಭಾಗವಹಿಸಿದವರಿಗೆ ಪ್ರಮಾಣ ಪತ್ರ ನೀಡಿದರು. ಗ್ರಾಮೀಣ ಪುನರ್ವಸತಿ ಕಾರ್ಯಕರ್ತರು ಮತ್ತು ಅರಿವು ಕೇಂದ್ರದ ಮೇಲ್ವಿಚಾರಕರು ಶಿಬಿರದ ಬಗ್ಗೆ ಅನಿಸಿಕೆ ವ್ಯಕ್ತಪಡಿಸಿದರು. ಕಡಬ ತಾಲೂಕು ಪಂಚಾಯತ್‌ನ ಸಿಬ್ಬಂದಿಗಳು ಸಹಕರಿಸಿದರು.

LEAVE A REPLY

Please enter your comment!
Please enter your name here