ಬೊಳುವಾರುನಲ್ಲಿ ಟೈಟಾನ್ ವರ್ಲ್ಡ್ ಶೋರೂಮ್ ಉದ್ಘಾಟನೆ

0

ಪುತ್ತೂರು: ಪ್ರತಿಷ್ಠಿತ ವಾಚ್ ತಯಾರಕ ಕಂಪನಿ ಟೈಟಾನ್‌ನ ಎಕ್ಸ್‌ಕ್ಲೂಸಿವ್ ಶೋರೂಮ್ ಟೈಟಾನ್ ವರ್ಲ್ಡ್ ಸೆ.24ರಂದು ಬೊಳುವಾರುನಲ್ಲಿರುವ ಇನ್‌ಲ್ಯಾಂಡ್ ಮಯೂರ ಕಮರ್ಷಿಯಲ್ ಕಾಂಪ್ಲೆಕ್ಸ್‌ನಲ್ಲಿ ಉದ್ಘಾಟನೆಗೊಂಡಿದ್ದು ಬೆಳೆಯುತ್ತಿರುವ ಪುತ್ತೂರಿಗೆ ಮತ್ತೊಂದು ಗರಿಯಾಗಲಿದೆ.


ಟೈಟಾನ್ ಕಂಪನಿಯ ರೀಜನಲ್ ಬ್ಯುಸಿನೆಸ್ ಮ್ಯಾನೇಜರ್ ಪ್ರಶಾಂತ್ ಜಯಪ್ರಕಾಶ್ ರಿಬ್ಬನ್ ಕತ್ತರಿಸಿ ಶೋರೂಮ್ ಉದ್ಘಾಟಸಿ ಮಾತನಾಡಿ ಟೈಟಾನ್ ವಾಚ್ ಕಂಪೆನಿಯು ಪ್ರತಿಷ್ಠಿತ ಟಾಟಾ ಗ್ರೂಪ್‌ನ ಸಹಸಂಸ್ಥೆಯಾಗಿದೆ. ಜಗತ್ತಿನಾದ್ಯಂತ ಹಲವಾರು ಗ್ರಾಹಕರನ್ನು ಹೊಂದಿರುವ ಟೈಟಾನ್ ಮಳಿಗೆಯು ಪುತ್ತೂರಿನಲ್ಲಿ ಕೂಡ ಶುಭಾರಂಭಗೊಂಡಿದ್ದು ನಮಗೆ ಹೆಮ್ಮೆಯಾಗಿದೆ. ನಿಮ್ಮ ಮೆಚ್ಚಿನ ವಿವಿಧ ಬಗೆಯ ಆಧುನಿಕ ಶೈಲಿಯ ವಾಚುಗಳು ಲಭ್ಯವಿದೆ ಎಂದು ಹೇಳಿ ಮಳಿಗೆಗೆ ಶುಭಹಾರೈಸಿದರು.
ಪುತ್ತೂರು ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಮಾಜಿ ಅಧ್ಯಕ್ಷ ಪಿ. ವಾಮನ್ ಪೈ ದೀಪ ಬೆಳಗಿಸಿ ಮಾತನಾಡಿ ಇಂದು ಪುತ್ತೂರಿಗೆ ಹೆಮ್ಮೆಯ ದಿನವಾಗಿದೆ. ಒಂದೂವರೆ ತಿಂಗಳ ಹಿಂದೆಯೇ ಶೋರೂಮ್ ಆರಂಭವಾಗಿದೆ. ಆದರೆ ಇಂದು ಅಧಿಕೃತವಾಗಿ ಉದ್ಘಾಟನೆಗೊಂಡಿದೆ.

ಈ ಕಾರ್ಯಕ್ರಮದಲ್ಲಿ ಭಾಗಿಯಾಗಲು ಅವಕಾಶ ಮಾಡಿಕೊಟ್ಟ ಸಂಸ್ಥೆಗೆ ಕೃತಜ್ಞತೆ ತಿಳಿಸಿದ ಅವರು ಶೋರೂಮ್ ಯಶಸ್ಸು ಹೊಂದಲಿ ಎಂದು ಶುಭಹಾರೈಸಿದರು.

ಟೈಟಾನ್ ಕಂಪೆನಿಯ ಏರಿಯಾ ಬ್ಯುಸಿನೆಸ್ ಮ್ಯಾನೇಜರ್ ಐಶ್ವರ್ಯ ಕೆ. ವೇದಿಕೆಯಲ್ಲಿ ಉಪಸ್ಥಿತರಿದ್ದರು. ಶೋರೂಮ್ ಪಾಲುದಾರರಾದ ಪ್ರಸನ್ನ ಕೆ. ಆರ್. ವಂದಿಸಿದರು. ವಿ.ಜೆ.ವಿಖ್ಯಾತ್ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಟೈಟಾನ್ ಕಂಪೆನಿಯ ಸರ್ವಿಸ್ ಹೆಡ್ ಮಧುಸೂಧನ್, ಉಡುಪಿ ಟೈಟಾನ್ ಶೋರೂಮ್‌ನ ಮ್ಯಾಕ್ಸಿಮ್ ಸಲ್ಡಾನ, ಕನಿಷ್ಕ್ ಶೋರೂಮ್‌ನ ಏರಿಯಾ ಬ್ಯುಸಿನೆಸ್ ಮ್ಯಾನೇಜರ್ ಸಂದೇಶ್ ಪೈ, ಪುತ್ತೂರು ಜಿ.ಎಲ್.ಸಮೂಹ ಸಂಸ್ಥೆಯ ಆಡಳಿತ ನಿರ್ದೇಶಕ ಬಲರಾಮ ಆಚಾರ್ಯ, ನಗರಸಭಾ ಸದಸ್ಯೆ ವಿದ್ಯಾ ಆರ್. ಗೌರಿ, ವಿಜಯ ಸುಪಾರಿ ಮಾಲಕ ರಾಮ ಭಟ್, ನಯಾ ಚಪ್ಪಲ್ ಬಜಾರ್ ಮಾಲಕ ರಪೀಕ್, ವಿಘ್ನೇಶ್ ಮಾರುತಿ ಸ್ಪೇರ‍್ಸ್‌ನ ದಿನೇಶ್, ಇನ್‌ಲ್ಯಾಂಡ್ ಮಯೂರದ ಮ್ಯಾನೇಜರ್ ಮಹೇಶ್, ಆರ್ಕಿಟೆಕ್ಟ್ ಮಯ್ಯೂರ್ ಜಾಧವ್ ಹಾಗೂ ಟೈಟಾನ್ ಶೋರೂಮ್ ಇನ್ನೋರ್ವ ಪಾಲುದಾರ ಪ್ರವೀಣ್ ಕೆ.ಆರ್., ರಾಜಗೋಪಾಲ ಹಾಗೂ ಕುಟುಂಬಸ್ಥರು ಉಪಸ್ಥಿತರಿದ್ದರು.

ಪ್ರತೀ ಖರೀದಿಗೆ ಆಕರ್ಷಕ ಗಿಫ್ಟ್- ಶೇ.30ರವರೆಗೆ ರಿಯಾಯಿತಿ
ಮಳಿಗೆಯಲ್ಲಿ ಟೈಟಾನ್ ಕಂಪೆನಿಯ ಹಲವು ಬಗೆಯ ವಾಚುಗಳು ಲಭ್ಯವಿದೆ. ಕನಿಷ್ಠ ಬೆಲೆ ರೂ.795 ರಿಂದ ಪ್ರಾರಂಭಿಸಿ ಗರಿಷ್ಠ 49,999ರ ಬೆಲೆಯ ವಿವಿಧ ಮಾದರಿಯ ವಾಚ್‌ಗಳು ಹಾಗೂ ಬ್ರ್ಯಾಂಡೆಡ್ ಸ್ಕಿನ್ ಪರ್ಫ್ಯೂಮ್ ಲಭ್ಯವಿದೆ. ಟೈಟಾನ್ ವರ್ಲ್ಡ್ ಶೋರೂಮ್ ಉದ್ಘಾಟನೆಯ ಪ್ರಯುಕ್ತ ಗ್ರಾಹಕರಿಗೆ ಆಫರ್ ಘೋಷಿಸಲಾಗಿದೆ. ಪ್ರತಿ ಖರೀದಿ ಮೇಲೆ ಗ್ರಾಹಕರು ಆಕರ್ಷಕ ಗಿಫ್ಟ್ ತಮ್ಮದಾಗಿಸಿಕೊಳ್ಳಬಹುದು ಮತ್ತು ಶೇ.೩೦ರವರೆಗೆ ರಿಯಾಯಿತಿ ಪಡೆಯಬಹುದು.

ಪ್ರಸನ್ನ ಕೆ. ಆರ್.
ಪಾಲುದಾರರು, ಟೈಟಾನ್ ವರ್ಲ್ಡ್ ಶೋರೂಮ್

LEAVE A REPLY

Please enter your comment!
Please enter your name here