ಪುತ್ತೂರು: ರೋಟರಿ ಕ್ಲಬ್ ಪುತ್ತೂರು ಇದರ ಆಶ್ರಯದಲ್ಲಿ ಪುತ್ತೂರು ರೋಟರಿ ಮಲ್ಟಿ ಸ್ಪೆಷಾಲಿಟಿ ಸ್ಯಾಟಲೈಟ್ ಡೆಂಟಲ್ ಕ್ಲಿನಿಕ್ ಆಯೋಜನೆಯಲ್ಲಿ ಸುಳ್ಯದ ಕೆವಿಜಿ ದಂತ ಮಹಾವಿದ್ಯಾಲಯದ ಸಹಯೋಗದೊಂದಿಗೆ ನಡೆದ ಪ್ರಥಮ ಉಚಿತ ದಂತ ಚಿಕಿತ್ಸಾ ಶಿಬಿರವು ಸೆ.23ರಂದು ಪುತ್ತೂರಿನಲ್ಲಿ ಯಶಸ್ವಿಯಾಗಿ ನಡೆಯಿತು.

ನಗರದ ಮಹಾವೀರ ವೆಂಚರ್ಸ್ ನಲ್ಲಿನ ಪುತ್ತೂರು ಪಾಲಿಕ್ಲಿನಿಕ್ ಆವರಣದಲ್ಲಿ ಬೆಳಿಗ್ಗೆಯಿಂದ ಸಂಜೆವರೆಗೆ ನಡೆದ ಶಿಬಿರದಲ್ಲಿ ಸುಮಾರು 40ಕ್ಕೂ ಹೆಚ್ಚು ಮಂದಿ ಭಾಗವಹಿಸಿ ಶಿಬಿರದ ಪ್ರಯೋಜನ ಪಡೆದುಕೊಂಡರು.


ಕೆವಿಜಿ ದಂತ ಮಹಾವಿದ್ಯಾಲಯದ ದಂತ ಶಸ್ತ್ರಚಿಕಿತ್ಸಾ ತಜ್ಞೆ ಸ್ಯಾಟಲೈಟ್ ಡೆಂಟಲ್ ಕ್ಲಿನಿಕ್ ನ ರೆಸಿಡೆಂಟ್ ವೈದ್ಯೆ ಡಾ. ಶ್ರೀದೇವಿ ನೇತೃತ್ವದಲ್ಲಿ ನಡೆದ ಶಿಬಿರದಲ್ಲಿ ಡಾ. ರಾಜರಾಜೇಶ್ವರಿ ಗುಡಲ, ಡಾ.ಪ್ರಣವ್ ರಾಜ್ ಗೋಪಾಲ್, ಡಾ.ಸ್ಪರ್ಶಿತ, ದಂತ ವೈದ್ಯಕೀಯ ಪ್ರಾಯೋಗಿಕ ತರತಬೇತಿ ಪಡೆಯುತ್ತಿರುವ ವಿದ್ಯಾರ್ಥಿಗಳಾದ ಸೆಲ್ವಿನ್, ಶ್ರೀ ಲಕ್ಷ್ಮೀ, ಶ್ರೇಯಾ ಎಸ್, ಸೋನು, ಸಿಬ್ಬಂದಿ ಗೀತಾ ಶಿಬಿರದಲ್ಲಿ ಭಾಗವಹಿಸಿದ್ದರು. ಡಾ.ಅಶೋಕ್ ಪಡಿವಾಳ್, ಪುತ್ತೂರು ರೋಟರಿ ಅಧ್ಯಕ್ಷ ಡಾ.ಶ್ರೀ ಪ್ರಕಾಶ್ ಬಂಗಾರಡ್ಕ ಉಪಸ್ಥಿತರಿದ್ದರು. ಕೆವಿಜಿ ದಂತ ಮಹಾವಿದ್ಯಾಲಯದ ಸಮುದಾಯ ಆರೋಗ್ಯ ವಿಭಾಗದ ಮುಖ್ಯಸ್ಥರಾದ ಡಾ.ನಸ್ರತ್ ಫರೀದ್ ನಿರ್ದೇಶನದಂತೆ ಶಿಬಿರವನ್ನು ಸಂಯೋಜಿಸಲಾಗಿತ್ತು. ಅಕ್ಟೋಬರ್ ತಿಂಗಳ 2ನೇ ಸೋಮವಾರದಂದು ಮುಂದಿನ ಉಚಿತ ದಂತ ಚಿಕಿತ್ಸಾ ಶಿಬಿರವು ನಡೆಯಲಿದೆ ಎಂದು ಡಾ.ಶ್ರೀ ಪ್ರಕಾಶ್ ತಿಳಿಸಿದ್ದಾರೆ.
