ಪುತ್ತೂರು : “Raspberry Pi Foundation” ಇದರ ವತಿಯಿಂದ ಹೈದರಾಬಾದ್ ನ ವರಾಹಿ ಬಾಂಕ್ವೆಟ್ ಹಾಲ್, ಗಚ್ಚಿಬೌಲಿಯಲ್ಲಿ ಸೆ.20ರಂದು ನಡೆದ ರಾಷ್ಟ್ರಮಟ್ಟದ “ಕೂಲೆಸ್ಟ್ ಪ್ರಾಜೆಕ್ಟ್ಸ್ ಇಂಡಿಯಾ” ವಿಜ್ಞಾನ ಸಮಾವೇಶದಲ್ಲಿ ವಿವೇಕಾನಂದ ಸೆಂಟ್ರಲ್ ಸ್ಕೂಲ್ ನ ವಿದ್ಯಾರ್ಥಿನಿಯರು ಎರಡು ತಂಡಗಳಲ್ಲಿ ಭಾಗವಹಿಸಿ ಉತ್ತಮ ಸಾಧನೆಗೈದಿರುವರು.
8ನೇ ತರಗತಿಯ ವಿದ್ಯಾರ್ಥಿನಿಯರಾದ ಮೇಧಾ ಭಟ್ ( ಕೃಷ್ಣಮೂರ್ತಿ ಪಟ್ಲ ಮತ್ತು ಶ್ವೇತಾ ಸರಸ್ವತಿ ಬಂಗಾರಡ್ಕ ದಂಪತಿ ಪುತ್ರಿ), ಪ್ರಣಮ್ಯ ಜೆ (ಜಯಪ್ರಕಾಶ್ ಬಿ ಮತ್ತು ಮಾಧವಿ ಕೆ.ಎ ದಂಪತಿ ಪುತ್ರಿ), ಮಾನ್ವಿ ಕಜೆ ( ಡಾ. ಚರಣ್ ಕಜೆ ಮತ್ತು ರಮ್ಯಾ ಕಜೆ ದಂಪತಿ ಪುತ್ರಿ), ಆರಾಧನಾ ಬಿ.(ಡಾ. ಶ್ರೀ ಪ್ರಕಾಶ್ ಬಿ. ರವರ ಪುತ್ರಿ) ಇವರ ತಂಡ ತಯಾರಿಸಿದ “ಅನ್‌ಸ್ಪೋಕನ್ ಟ್ರುಥ್ಸ್” ಎಂಬ ಮೊಬೈಲ್ ಆ್ಯಪ್ ಯೋಜನೆಗಾಗಿ ರಾಷ್ಟ್ರಮಟ್ಟದ games ವಿಭಾಗದಲ್ಲಿ ಮೂರನೇ “Best Favourite Award”ಪಡೆದಿರುತ್ತಾರೆ . ಅಲ್ಲದೆ, 9ನೇ ತರಗತಿಯ ಸೃಷ್ಟಿ ಎಂ. ಸಾಲಿಯಾನ್ ( ಮಹೇಶ್ ಪಿ ಮತ್ತು ಸುಜಾತಾ ದಂಪತಿ ಪುತ್ರಿ), ಶ್ರಾವಣಿ ಪಿ.ಎಲ್ ( ಪಿ. ಲೋಕೇಶ್ವರ ಮತ್ತು ರಶ್ಮಿ ಕೆ .ಎಸ್. ದಂಪತಿ ಪುತ್ರಿ) ಮತ್ತು ಶ್ರೀ ರಾಮಕೃಷ್ಣ ಪ್ರೌಢ ಶಾಲೆಯ ಮೂವರು ವಿದ್ಯಾರ್ಥಿನಿಯರು ಜೊತೆಗೂಡಿ ತಯಾರಿಸಿದ ” ನೃತ್ಯ ದೀಪ” ಮೊಬೈಲ್ ಆ್ಯಪ್ ವಿಜ್ಞಾನ ಯೋಜನೆಗಳಿಗೆ ಪ್ರಮಾಣಪತ್ರ ಪಡೆದಿರುತ್ತಾರೆ ಎಂದು ಶಾಲಾ ಪ್ರಕಟಣೆ ತಿಳಿಸಿದೆ.

ವಿದ್ಯಾರ್ಥಿಗಳಲ್ಲಿ ಕಂಪ್ಯೂಟರ್, ಡಿಜಿಟಲ್ ತಂತ್ರಜ್ಞಾನ ಮತ್ತು ಕೌಶಲವನ್ನು ಹೆಚ್ಚಿಸುವ ಉದ್ದೇಶದಿಂದ ರಾಸ್ಬೇರಿ ಪೈ ಫೌಂಡೇಶನ್ “ಕೂಲೆಸ್ಟ್ ಪ್ರಾಜೆಕ್ಟ್ “ ಎಂಬ ಸಮಾವೇಶವನ್ನು, ಸುಮಾರು 41 ವಿವಿಧ ದೇಶಗಳಲ್ಲಿ ಆಯೋಜಿಸುತ್ತಿದೆ. ಪ್ರಾಥಮಿಕ ಶಾಲಾ ಮಕ್ಕಳಿಂದ ಪ್ರಾರಂಭಿಸಿ , ಪದವಿ ಹಾಗೂ ಇಂಜಿನಿಯರಿಂಗ್ ವಿದ್ಯಾರ್ಥಿಗಳೂ ಈ ಸಮಾವೇಶದಲ್ಲಿ ಭಾಗವಹಿಸಿರುವರು. ಇದರಲ್ಲಿ ವಿದ್ಯಾರ್ಥಿಗಳು ಒಟ್ಟು ಏಳು ವಿಭಾಗಗಳಲ್ಲಿ ಭಾಗವಹಿಸಬಹುದಾಗಿದ್ದು , ಪ್ರತಿ ವಿಭಾಗದಲ್ಲಿ ಅತ್ಯುತ್ತಮ ಮೂರು ಯೋಜನೆಗಳಿಗೆ ಬಹುಮಾನ ನೀಡಲಾಗಿದೆ. ಈ ವರ್ಷ ಪ್ರಥಮ ಬಾರಿಗೆ ನಮ್ಮ ದೇಶದಲ್ಲಿ ನಡೆದ ಈ ರಾಷ್ಟ್ರೀಯ ಸಮಾವೇಶದಲ್ಲಿ, ದಕ್ಷಿಣ ಕನ್ನಡ ಜಿಲ್ಲೆಯಿಂದ, ಮೇಲಿನ ಎರಡು ವಿದ್ಯಾಸಂಸ್ಥೆಗಳು ಮಾತ್ರ ಭಾಗವಹಿಸಿ ಬಹುಮಾನ ಗಳಿಸಿರುವುದು ವಿಶೇಷ ಸಾಧನೆಯಾಗಿದೆ. ಇದಕ್ಕಾಗಿ ಶಾಲಾ ಆಡಳಿತ ಮಂಡಳಿಯು ವಿದ್ಯಾರ್ಥಿಗಳನ್ನು ಮತ್ತು ಶಿಕ್ಷಕರನ್ನು ಅಭಿನಂದಿಸುತ್ತದೆ
ಮೂಲತಃ ಪುತ್ತೂರಿನವರಾಗಿದ್ದು, ಪ್ರಸ್ತುತ ಅಮೆರಿಕದಲ್ಲಿ ನೆಲೆಸಿರುವ ಶ್ರೀಯುತ ಆನಂದವರ್ಧನ ಇವರು, ಭಾಗವಹಿಸಿದ ಎಲ್ಲಾ ವಿದ್ಯಾರ್ಥಿಗಳಿಗೆ ತರಬೇತಿಯನ್ನು ನೀಡಿರುತ್ತಾರೆ. ಅಲ್ಲದೆ ಅಮೆರಿಕದ Portlandನ “Optimistic Club of Hillsboro” ಎಂಬ ಸಂಸ್ಥೆಯು, ಭಾಗವಹಿಸಿದ ವಿದ್ಯಾರ್ಥಿಗಳಲ್ಲಿ ಮೂವರಿಗೆ ಲ್ಯಾಪ್ ಟಾಪ್ ನೀಡುವುದರ ಜೊತೆಗೆ ಸಾಫ್ಟ್ ವಾರ್ ಲೈಸನ್ಸ್ .ಮತ್ತು ಬೆಳವಣಿಗೆಗೆ ಸಹಾಯ ಮಾಡಿರುತ್ತದೆ.
ಪ್ರಾಂಶುಪಾಲರಾದ ಸಿಂಧು ವಿ.ಜಿ ಇವರ ಪ್ರೋತ್ಸಾಹ ಹಾಗೂ ಶಾಲಾ ಕಂಪ್ಯೂಟರ್ ಶಿಕ್ಷಕಿ ಹೇಮಾ ಭಟ್ ಇವರ ಮಾರ್ಗದರ್ಶನವನ್ನು ಸ್ಪರ್ಧಾಳುಗಳು ಪಡೆದಿರುತ್ತಾರೆ.
The Raspberry Pi Foundation is organizing the “Coolest Project” conference in about 41 different countries with the aim of increasing computer, digital technology and skills among students. This year, the first edition was held in our country. The science project of the students of Vivekananda Central School won the “Best Favorite Award” at the national level. We are very grateful to the The Optimistic Club of Hillsboro in Portland, USA, which has helped financially disadvantaged students by providing laptops and fully licensed software development platform.