ಆರ್ಯಾಪು ಗ್ರಾ.ಪಂನಲ್ಲಿ ಸ್ವಚ್ಚತಾ-ಹಿ-ಸೇವಾ ಕಾರ್ಯಕ್ರಮ

0

ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಎಸೆಯುವುದು ಭವಿಷ್ಯದಲ್ಲಿ ಬಹಳಷ್ಟು ಅಪಾಯಕಾರಿ-ನ್ಯಾ|ಶಿವಣ್ಣ ಎಚ್.ಆರ್

ಪುತ್ತೂರು: ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಎಲ್ಲೆಂದರಲ್ಲಿ ಎಸೆಯುವುದು ಭವಿಷ್ಯದಲ್ಲಿ ಬಹಳಷ್ಟು ಅಪಾಯಕಾರಿ. ಸ್ವಚ್ಚತೆ ಕಾಪಾಡುವುದು ನಮ್ಮ ಕೆಲಸವಲ್ಲ ಎಂಬ ಭಾವನೆ ಯಾರಲ್ಲಿಯೂ ಇರಬಾರದು. ನಾವು, ನಮ್ಮ ಮನೆ, ನಮ್ಮ ಪರಿಸರ, ಹಳ್ಳಿ, ನಗರಗಳಲ್ಲಿ ಸ್ವಚ್ಚತೆ ಕಾಪಾಡುವ ಮೂಲಕ ಇತರರಿಗೂ ಜಾಗೃತಿ ಹಾಗೂ ಪ್ರೇರಣೆ ನೀಡಬೇಕು. ನಮ್ಮ ನಗರದ ಸ್ವಚ್ಚತೆ ಕಂಡು ಹೊರಗಿನವರಿಗೆ ಕಸ ಎಸೆಯಲು ಭಯ ಪಡುವಷ್ಟು ಸ್ವಚ್ಚತೆಯಿರಬೇಕು ಎಂದು ಹೆಚ್ಚುವರಿ ವ್ಯವಹಾರಿಕ ನ್ಯಾಯಾಧೀಶ ಶಿವಣ್ಣ ಎಚ್.ಆರ್ ಹೇಳಿದರು.


ಜಿಲ್ಲಾ ಕಾನೂನು ಸೇವೆಗಳ ಪ್ರಾಧೀಕಾರ ಮಂಗಳೂರು, ತಾಲೂಕು ಕಾನೂನು ಸೇವೆಗಳ ಸಮಿತಿ, ವಕೀಲರ ಸಂಘ ಪುತ್ತೂರು ಹಾಗೂ ಆರ್ಯಾಪು ಗ್ರಾಮ ಪಂಚಾಯತ್‌ನ ಸಹಯೋಗದಲ್ಲಿ ಗಾಂಧೀ ಜಯಂತಿ ದಿನಾಚರಣೆಯ ಅಂಗವಾಗಿ ಆರ್ಯಾಪು ಗ್ರಾ.ಪಂನಲ್ಲಿ ನಡೆದ ಸ್ವಚ್ಚತಾ-ಹಿ-ಸೇವಾ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಸ್ವಚ್ಚತೆ ಮನೆಯಿಂದ ಪ್ರಾರಂಭವಾಗಬೇಕು. ಮನೆಯ ಸ್ವಚ್ಚತೆ ಕಾಪಾಡಿದಂತೆ ಸಮಾಜ, ನಗರದ ಸ್ಚಚ್ಚತೆ ಕಾಪಾಡಬೇಕು. ಪೌರ ಕಾರ್ಮಿಕರು ಕಷ್ಟುಪಟ್ಟು ಸ್ವಚ್ಚಗೊಳಿಸಿದ ನಗರದಲ್ಲಿ ನಾವು ಮತ್ತೆ ಕಸ ಎಸೆಯುವುದಲ್ಲ. ನಮ್ಮ ಮನೆಯ ಸ್ವಚ್ಚತೆಯ ಬಗ್ಗೆ ಕಾಳಜಿಯಿರುವಂತೆ ನಮ್ಮ ಪರಿಸರ, ನಗರದ ಮೇಲೂ ಸ್ವಚ್ಚತೆಯ ಬಗ್ಗೆ ಕಾಳಜಿಯರಬೇಕು. ಪರಿಸರ, ಸಮಾಜದ, ನಗರ ನಮ್ಮದು ಎಂಬ ಭಾವನೆ ಪ್ರತಿ ನಾಗರಿಕರಲ್ಲಿರಬೇಕು. ಮನೆಯ ತ್ಯಾಜ್ಯವನ್ನು ಸಾರ್ವಜನಿಕ ಸ್ಥಳಗಳಲ್ಲಿ ಎಸೆಯಬಾರದು. ಸ್ವಚ್ಚತೆ ಕಾಪಾಡುವುದು ನಮ್ಮೆಲ್ಲರ ಕರ್ತವ್ಯ ಎಂಬ ಭಾವನೆ ಪ್ರತಿಯೊಬ್ಬರಲ್ಲಿರಬೇಕು ಎಂದು ಹೇಳಿದರು.


ತಾ.ಪಂ ಮಾಜಿ ಅಧ್ಯಕ್ಷರು, ನವದುರ್ಗರಾಧನಾ ಸಮಿತಿಯ ಅಧ್ಯಕ್ಷರಾಗಿರುವ ರಾಧಾಕೃಷ್ಣ ಬೋರ್ಕರ್ ಮಾತನಾಡಿ, ತ್ಯಾಜ್ಯ ಎಸೆಯುವವರು ಯಾರೂ ಅವಿದ್ಯಾವಂತರಲ್ಲ. ನಮ್ಮಲ್ಲಿರುವ ತ್ಯಾಜ್ಯವನ್ನು ಎಲ್ಲಿಯೂ ಬಿಸಾಡುವುದಿಲ್ಲ ಎಂಬ ಮನೋಭಾರ ಎಲ್ಲರಲ್ಲಿಯೂ ಬರಬೇಕು. ಸ್ವಚ್ಚತಾ ಅಭಿಯಾನ ಸರಕಾರದ ಕಾರ್ಯಕ್ರಮ ಮಾತ್ರವಲ್ಲ. ಅದು ನಮ್ಮೆಲ್ಲರ ಕಾರ್ಯಕ್ರಮ. ತ್ಯಾಜ್ಯ ಎಸೆಯುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕಾದ ಆವಶ್ಯಕತೆಯಿದೆ. ಆಗ ಗಾಂಧೀ ಕಂಡ ಸ್ವಚ್ಚತೆಯ ಕನಸು ನನಸಾಗಲು ಸಾಧ್ಯ ಎಂದರು.


ವಕೀಲರ ಸಂಘದ ಅಧ್ಯಕ್ಷ ಜಗನ್ನಾಥ ರೈ ಮಾತನಾಡಿ, ಕಾನೂನಿನ ಮಾಹಿತಿ ಪ್ರತಿಯೊಬ್ಬರಿಗೂ ತಿಳಿದಿರಬೇಕು. ಕಾನೂನಿನ ಮಾಹಿತಿ ಇಲ್ಲದಿರುವುದು ಅಪರಾದ. ಅದರಂತೆ ಸ್ವಚ್ಚತೆಯ ಬಗ್ಗೆಯೂ ಎಲ್ಲರಿಗೂ ಅರಿವಿರಬೇಕು. ಸ್ವಚ್ಚತೆಯನ್ನು ಅರ್ಥವತ್ತಾಗಿ ಅನುಷ್ಠಾನವಾಗಬೇಕು. ಸ್ವಚ್ಚತಾ ಅಭಿಯಾನದ ಜೊತೆಗೆ ಸರಕಾರ ಪ್ಲಾಸ್ಟಿಕ್‌ಗೆ ಪರ್ಯಾಯ ಉತ್ಪನ್ನಗಳನ್ನು ತಯಾರಿಸಬೇಕು ಎಂದರು.


ಅಧ್ಯಕ್ಷತೆ ವಹಿಸಿದ್ದ ಆರ್ಯಾಪು ಗ್ರಾ.ಪಂ ಅಧ್ಯಕ್ಷೆ ಗೀತಾ ಮಾತನಾಡಿ, ಸ್ವಚ್ಚತೆ ಕಾಪಾಡುವುದು ಪ್ರತಿಯೊಬ್ಬ ನಾಗರೀಕರ ಕರ್ತವ್ಯ. ಈ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಕೈ ಜೋಡಿಸುವಂತೆ ವಿನಂತಿಸಿದರು.


ಪುತ್ತೂರು ವಕೀಲರ ಸಂಘದ ಜೊತೆ ಕಾರ್ಯದರ್ಶಿ ಮಮತಾ ಸುವರ್ಣ, ಕಾರ್ಯಕ್ರಮದ ಸಂಯೋಜಕಿ ಜ್ಯೋತಿ, ಆರ್ಯಾಪು ಗ್ರಾ.ಪಂ ಸದಸ್ಯರಾದ ನೇಮಾಕ್ಷ ಸುವರ್ಣ, ಹರೀಶ್ ನಾಯಕ್, ಯಾಕೂಬ್ ಯಾನೆ ಸುಲೈಮಾನ್, ಸಾಮಾಜಿಕ ಕಾರ್ಯಕರ್ತ ಕೇಶವ ಸುವರ್ಣ, ಗಿರೀಶ್ ರೈ ಮೂಲೆ, ಅಂಗನವಾಡಿ, ಆಶಾ ಕಾರ್ಯಕರ್ತರು, ಸಂಜೀವಿನಿ ಒಕ್ಕೂಟ, ಕೃಷಿ ಸಖಿ, ಪಶು ಸಖಿಯರು, ಪಂಚಾಯತ್ ಸಿಬ್ಬಂದಿಗಳು, ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಸಭಾ ಕಾರ್ಯಕ್ರಮದ ಬಳಿಕ ಸಂಪ್ಯ ಮುಖ್ಯರಸ್ತೆಯಲ್ಲಿ ಸ್ವಚ್ಚತೆ ನಡೆಸಿದರು.


ಆರ್ಯಾಪು ಗ್ರಾ.ಪಂ ಅಭಿವೃದ್ಧಿ ಅಧಿಕಾರಿ ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು. ಕಾರ್ಯದರ್ಶಿ ಮೋನಪ್ಪ ವಂದಿಸಿದರು. ವಕೀಲರ ಸಂಘದ ಉಪಾಧ್ಯಕ್ಷ ಮೋನಪ್ಪ ಕಾರ್ಯಕ್ರಮ ನಿರೂಪಿಸಿದರು. ಗ್ರಾ.ಪಂ ಸಿಬಂದಿಗಳು ಸಹಕರಿಸಿದರು.

LEAVE A REPLY

Please enter your comment!
Please enter your name here