ಬೆಟ್ಟಂಪಾಡಿ: ಬೆಟ್ಟಂಪಾಡಿ ಸರಕಾರಿ ಪದವಿ ಕಾಲೇಜಿನಲ್ಲಿ ಸೆ. 24ರಂದು ರಾಷ್ಟೀಯ ಸೇವಾ ಯೋಜನಾ ದಿನಾಚರಣೆಯನ್ನು ಆಚರಿಸಲಾಯಿತು.
ಸಂಪನ್ಮೂಲ ವ್ಯಕ್ತಿ, ಗೋವಿಂದ ಪೈ ಮೆಮೋರಿಯಲ್ ಸರಕಾರಿ ಕಾಲೇಜು ಮಂಜೇಶ್ವರ ಇಲ್ಲಿನ ಪ್ರಾಂಶುಪಾಲ ಡಾ ಮೊಹಮ್ಮದ್ ಅಲಿ ಕೆ ಭಾಗವಹಿಸಿ ಮಾತನಾಡಿ, ಸಮಾಜದಲ್ಲಿ ಜನರ ಕಷ್ಟಗಳಿಗೆ ಸ್ಪಂದಿಸುವುದರ ಮೂಲಕ ವ್ಯಕ್ತಿತ್ವ ವಿಕಸನ ಆಗಬೇಕು. ನಮ್ಮ ಸಾಮರ್ಥ್ಯವನ್ನು ಬಳಸಿ ಸಂತೋಷದಿಂದ ಹಾಗೂ ನೆಮ್ಮದಿಯಿಂಂದ ಇರಬೇಕೆ ಹೊರತು ಮತ್ತೊಂದು ವಸ್ತುವನ್ನು ಅವಲಂಬಿಸಿ ಸಂತೋಷದಿಂದ ಇದ್ದರೆ ಅದು ಶಾಶ್ವತವಲ್ಲ. ಹಾಗೆಯೇ ಪ್ರಕೃತಿಯ ಬಗ್ಗೆ ಕೂಡ ಕಾಳಜಿ ಇರಬೇಕು ಮತ್ತು ಉತ್ತಮ ಪ್ರಜೆಯನ್ನಾಗಿ ಉತ್ತಮ ವ್ಯಕ್ತಿತ್ವ ರೂಪಿಸಲು ಎನ್ಎಸ್ಎಸ್ ಒಂದು ಒಳ್ಳೆಯ ವೇದಿಕೆ ಎಂದರು.

ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಡಾ ಸುಬ್ರಹ್ಮಣ್ಯ ಕೆ, ನಮ್ಮ ಬದುಕನ್ನು ಸಮಾಜಕ್ಕೆ ಮುಡಿಪಾಗಿಡುವುದರೊಂದಿಗೆ ಸಮಾಜಮುಖಿ ಕೆಲಸಕ್ಕೆ ತಮ್ಮನ್ನು ತೊಡಗಿಸಿಕೊಳ್ಳುವುದರ ಮೂಲಕ ಸಮಾಜವನ್ನು ಕಟ್ಟುವ ಕೆಲಸ ಮಾಡಬೇಕು ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಾಂಶುಪಾಲ ಪ್ರೊ.ದಾಮೋದರ ಕಣಜಾಲು ವಹಿಸಿ ಎನ್ ಎಸ್ ಎಸ್ ನಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡರೆ ಹೊಸ ಹೊಸ ಅವಕಾಶಗಳು ಸಿಗುವುದಲ್ಲದೆ ನಮ್ಮಲ್ಲಿ ನಾವು ಒಳ್ಳೆಯ ಬದಲಾವಣೆಯನ್ನು ಕಾಣಲು ಸಾಧ್ಯ. ಭೇದಭಾವ ಮರೆತು ಸಕ್ರಿಯವಾಗಿ ನಮ್ಮನ್ನು ತೊಡಗಿಸಿಕೊಂಡಾಗ ಸಮಾಜದ ಸಮಸ್ಯೆಗಳಿಗೂ ಸ್ಪಂದಿಸಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು. ವೇದಿಕೆಯಲ್ಲಿ ಉಪಸ್ಥಿತರಿದ್ದ ಗಣ್ಯರು ಸ್ವಯಂಸೇವಕರ ಟೀ ಶರ್ಟ್ ಅನ್ನು ಬಿಡುಗಡೆಗೊಳಿಸಿದರು.
ರಾಷ್ಟ್ರೀಯ ಸೇವಾ ಯೋಜನಾ ವತಿಯಿಂದ ಆಯೋಜಿಸಿದ್ದ ರಸಪ್ರಶ್ನೆ, ಚರ್ಚಾ ಸ್ಪರ್ಧೆ, ಪ್ರಬಂಧ ಹಾಗೂ ಪೋಸ್ಟರ್ ಮೇಕಿಂಗ್ ಸ್ಪರ್ಧೆಯ ವಿಜೇತರಿಗೆ ಬಹುಮಾನವನ್ನು ಮುಖ್ಯ ಅತಿಥಿ ಡಾ. ಮೊಹಮ್ಮದ್ ಆಲಿ ವಿತರಿಸಿದರು.
ಕಾಲೇಜು ಸಭಾಂಗಣದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಐ ಕ್ಯೂ ಎ ಸಿ ಸಂಚಾಲಕ ಪ್ರೊ. ರಾಮಚಂದ್ರ ಡಿ, ಗ್ರಂಥಪಾಲಕ ಶ್ರೀ ರಾಮ ಕೆ, ಪ್ರೊ. ಅನಂತ ಭಟ್, ಘಟಕ ನಾಯಕರುಗಳು ಹಾಗೂ ಸ್ವಯಂಸೇವಕರು ಉಪಸ್ಥಿತರಿದ್ದರು.

ಸ್ವಯಂ ಸೇವಕಿಯರಾದ ವೀಕ್ಷಿತ ಜಿ, ತನುಶ್ರೀ ಜಿ, ಚೈತ್ರ, ಭವ್ಯ, ವರ್ಷ ಪ್ರಾರ್ಥಿಸಿದರು.ಎನ್ ಎಸ್ ಎಸ್ ಘಟಕದ ಯೋಜನಾಧಿಕಾರಿ ಡಾ.ಲಾಯ್ಡ್ ವಿಕ್ಕಿ ಡಿಸೋಜ ಪ್ರಸ್ತಾವಿಸಿ ಸ್ವಾಗತಿಸಿದರು. ಯೋಜನಾಧಿಕಾರಿಯಾಗಿ ಪ್ರೊ ಉದಯಶಂಕರ್ ವಂದಿಸಿದರು. ಘಟಕ ನಾಯಕ ತನುಷ್ ನಿರೂಪಿಸಿದರು.