ಮಂಗಳೂರಿನಲ್ಲಿ ಶ್ರೇಷ್ಟ್ ಐ ಕೇರ್ ಶುಭಾರಂಭ

0

ಮಂಗಳೂರು: ಕಂಕನಾಡಿಯ ಬೆಂದೂರ್ವೆಲ್ ವೃತ್ತದ ಬಳಿ ಇರುವ ರಾಧಾ ಮೆಡಿಕಲ್ಸ್ ಮೇಲ್ಭಾದಲ್ಲಿ ಡಾ.ವೈಶಾಖ ಶೆಟ್ಟಿ ಅವರ ಶ್ರೇಷ್ಟ್ ಐ ಕೇರ್ ಸೆ.24 ರಂದು ಶುಭಾರಂಭಗೊಂಡಿತು.


ಉಡುಪಿಯ ಕಾಪುವಿನಲ್ಲಿ ಅರವಳಿಕೆ ತಜ್ಞರಾಗಿರುವ ವೈಶಾಖ ಅವರ ತಂದೆ ಡಾ. ಬಾವಗುತ್ತು ಸುರೇಶ್ ಶೆಟ್ಟಿ, ನಿವೃತ್ತ ಉಪನ್ಯಾಸಕಿಯಾಗಿರುವ ತಾಯಿ ಮಮತಾ ಶೆಟ್ಟಿ, ಎಲ್‌ಐಸಿ ಆಫ್ ಇಂಡಿಯಾ ಪುತ್ತೂರು ಇದರ ನಿವೃತ್ತ ಅಭಿವೃದ್ಧಿ ಅಧಿಕಾರಿಯಾಗಿರುವ ಮಾವ ಟಿ. ಸದಾನಂದ ಶೆಟ್ಟಿ ಹಾಗೂ ಅತ್ತೆ ಶಕೀಲಾ ಎಸ್. ಶೆಟ್ಟಿ ಅವರು ದೀಪಬೆಳಗಿಸುವ ಮೂಲಕ ಐ ಕೇರ್ ಉದ್ಘಾಟಿಸಿದರು.


ದೇರಳಕಟ್ಟೆ ಕೆ.ಎಸ್. ಹೆಗ್ಡೆ ಆಸ್ಪತ್ರೆಯ ನೇತ್ರಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ಹೃಷಿಕೇಶ್ ಅಮೀನ್, ಫರಂಗಿಪೇಟೆಯ ಸೇವಾಂಜಲಿ ಟ್ರಸ್ಟ್‌ನ ಕೃಷ್ಣ ಕುಮಾರ್ ಪೂಂಜಾ ಅವರು ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು.


ಡಾ.ಸುಬ್ರಹ್ಮಣ್ಯ ಭಟ್, ಡಾ.ಪುನೀತ್ ಹೆಗಡೆ, ಡಾ.ವಿಜಯ ನಾಗಪ್ಪ, ಡಾ.ಶಮಂತ ವಿಜಯ್, ಡಾ.ಅನಂತ್ ಸೋಮಯಾಜಿ, ಡಾ.ಮೇಘನಾ ಸೋಮಯಾಜಿ, ಡಾ.ಶುಭದಾ ಶೆಟ್ಟಿ, ಡಾ.ಲೋರೈನ್, ಡಾ ಸುವೀರ್, ಸ್ನೇಹಿತರು ಮತ್ತು ಸಂಬಂಧಿಕರು ಉಪಸ್ಥಿತರಿದ್ದರು.


ಪುತ್ತೂರಿನ ಬೊಳುವಾರಿನಲ್ಲಿರುವ ಪುತ್ತೂರು ಸ್ಕಿನ್ ಕ್ಲಿನಿಕ್ ಮತ್ತು ಲೇಸರ್ ಕೇಂದ್ರವನ್ನು ಹೊಂದಿರುವ ವೈಶಾಖ ಅವರ ಪತಿ .ಡಾ.ಸಚಿನ್ ಮನೋಹರ್ ಶೆಟ್ಟಿ ಸಹಕರಿಸಿದರು.
ಕಣ್ಣಿನ ಶಸ್ತ್ರಚಿಕಿತ್ಸೆಯಲ್ಲಿ 7 ವರ್ಷಗಳ ಅನುಭವ ಹೊಂದಿರುವ ವೈಶಾಖ ಶೆಟ್ಟಿ ಅವರು ಕೆ.ಎಸ್. ಹೆಗ್ಡೆ ಆಸ್ಪತ್ರೆಯಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಕಣ್ಣಿನ ಪೊರೆ ಸಮಸ್ಯೆ ಮತ್ತು ದೃಷ್ಟಿ ಕಡಿಮೆಯಾಗುವುದು ಸೇರಿದಂತೆ ಎಲ್ಲಾ ರೀತಿಯ ಕಣ್ಣಿನ ಕಾಯಿಲೆಗಳಿಗೆ ಇಲ್ಲಿ ಆಧುನಿಕ ಉಪಕರಣಗಳ ಮೂಲಕ ಚಿಕಿತ್ಸೆ ನೀಡಲಾಗುತ್ತದೆ. ಸೋಮವಾರದಿಂದ ಶನಿವಾರದವರೆಗೆ ಸಂಜೆ 4:೦೦ ರಿಂದ 6:30ರ ವರೆಗೆ ಐ ಕೇರ್ ತೆರೆದಿರುತ್ತದೆ. ಹೆಸರು ನೋಂದಾಯಿಸಲು 9606510523 ಸಂಪರ್ಕಿಸುವಂತೆ ಡಾ.ವೈಶಾಖ ಶೆಟ್ಟಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here