
ರಾಮಕುಂಜ: ಎರಡು ದಿನ ರಾಮಕುಂಜ ಶ್ರೀ ರಾಮಕುಂಜೇಶ್ವರ ವಿದ್ಯಾ ಸಂಸ್ಥೆ ಕ್ರೀಡಾಂಗಣದಲ್ಲಿ ನಡೆಯಲಿರುವ ಮೈಸೂರು ವಿಭಾಗ ಮಟ್ಟದ 14 ಮತ್ತು 17 ರೈ ವಯೋಮಾನದ ಬಾಲಕ ಹಾಗೂ ಬಾಲಕಿಯರ ಕಬಡ್ಡಿ ಪಂದ್ಯಾಟದ ಅದ್ದೂರಿ ಮೆರವಣಿಗೆ ಸೆ. 27 ರಂದು ಬೆಳಿಗ್ಗೆ ಆತೂರಿನಿಂದ ಕ್ರೀಡಾಂಗಣದ ತನಕ ನಡೆಯಿತು.


ರಾಮಕುಂಜ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸುಚೇತಾ ಮೆರವಣಿಗೆಗೆ ಚಾಲನೆ ನೀಡಿದರು. ವಿವಿಧ ಜಿಲ್ಲೆಗಳ ಆಟಗಾರರು, ಜಾನಪದ ತಂಡಗಳು, ಕಬಡ್ಡಿ ಪಂದ್ಯಾಟ ಆಯೋಜನಾ ಸಮಿತಿಯವರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.
