ರೋಟರಿ ಪುತ್ತೂರು ಬಿರುಮಲೆ ಹಿಲ್ಸ್‌ಗೆ ಜಿಲ್ಲಾ ಗವರ್ನರ್ ಅಧಿಕೃತ ಭೇಟಿ

0

ರೋಟರಿಯಿಂದ ವಿಶ್ವದಲ್ಲಿ ಅಮೂಲಾಗ್ರ ಬದಲಾವಣೆ-ರಾಮಕೃಷ್ಣ ಪಿ.ಕೆ

ಪುತ್ತೂರು:ರೋಟರಿ ಅಂದರೆ ಏನು?, ರೋಟರಿಗೆ ಯಾಕೆ ಸೇರ್ಪಡೆಗೊಳ್ಳಬೇಕು?, ಎಂಬ ಪ್ರಶ್ನೆಗಳು ಉದ್ಭವಿಸುವುದು ಸಹಜ. ಆದರೆ ಅಂತರ್ರಾಷ್ಟ್ರೀಯ ಪ್ರತಿಷ್ಠಿತ ಸಂಸ್ಥೆಯಾಗಿರುವ ರೋಟರಿ ಸಂಸ್ಥೆಯು ಅನೇಕ ಸಮಾಜಮುಖಿ ಕಾರ್ಯಗಳನ್ನು ಮಾಡುವ ಮೂಲಕ ಇಡೀ ವಿಶ್ವದಲ್ಲೇ ಅಮೂಲಾಗ್ರ ಬದಲಾವಣೆ ಮಾಡಿರುತ್ತದೆ ಎಂದು ರೋಟರಿ ಜಿಲ್ಲಾ ಗವರ್ನರ್ ರಾಮಕೃಷ್ಣ ಪಿ.ಕೆರವರು ಹೇಳಿದರು.


ಸೆ.೨೬ ರಂದು ರೋಟರಿ ಕ್ಲಬ್ ಬಿರುಮಲೆ ಹಿಲ್ಸ್ ಪುತ್ತೂರಿಗೆ ರೋಟರಿ ಜಿಲ್ಲಾ ಗವರ್ನರ್ ಅಧಿಕೃತ ಭೇಟಿ ಸಂದರ್ಭದಲ್ಲಿ ರೋಟರಿ ಮನೀಷಾ ಸಭಾಂಗಣದಲ್ಲಿ ಜರಗಿದ ಸಭಾ ಕಾರ್ಯಕ್ರಮದಲ್ಲಿ ಕ್ಲಬ್‌ನ ವಿವಿಧ ಸಮಾಜಮುಖಿ ಚಟುವಟಿಕೆಗಳಿಗೆ ಚಾಲನೆ ನೀಡಿ ಮಾತನಾಡಿದರು.


ರೋಟರಿ ವಲಯ ಐದರ ಅಸಿಸ್ಟೆಂಟ್ ಗವರ್ನರ್ ಪ್ರಮೋದ್ ಕುಮಾರ್ ಮಾತನಾಡಿ, ಕ್ಲಬ್ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವರವರ ಉತ್ಸಾಹದಿಂದ ಕ್ಲಬ್ ಅತ್ಯಲ್ಪ ಅವಧಿಯಲ್ಲಿ ಸಮಾಜಮುಖಿ ಕಾರ್ಯಗಳನ್ನು ಮಾಡಲು ಸಾಧ್ಯವಾಗಿರುವುದು ಶ್ಲಾಘನೀಯ. ಈ ಸಮಾಜಮುಖಿ ಕಾರ್ಯಗಳು ಮುಂದಿನ ದಿನಗಳಲ್ಲೂ ಮುಂದುವರೆಯಲಿ ಎಂದರು.

ಚಿತ್ರ:ನವೀನ್ ರೈ ಪಂಜಳ


ರೋಟರಿ ವಲಯ ಐದರ ವಲಯ ಸೇನಾನಿ ಶಶಿಧರ್ ಬೆಳ್ಳಾರೆ ಮಾತನಾಡಿ, ಬಿರುಮಲೆ ಬೆಟ್ಟವು ಹೇಗೆ ಎತ್ತರದಲ್ಲಿದ್ದು ಇದು ಎಲ್ಲರಿಗೂ ಕಂಗೊಳಿಸುವಂತೆ ಮಾಡುತ್ತಿದೆಯೋ ಹಾಗೆಯೇ ಕ್ಲಬ್ ಕೂಡ ಸಮಾಜಮುಖಿ ಕಾರ್ಯಗಳ ಮುಖೇನ ಸಮಾಜದಲ್ಲಿ ಕಂಗೊಳಿಸುವಂತಾಗಲಿ ಅಲ್ಲದೆ ಈ ಕ್ಲಬ್ ಸರ್ವಪಕ್ಷಗಳ ಸಮ್ಮಿಲನವಾಗಿದೆ ಎಂದರು.


ಅಧ್ಯಕ್ಷತೆ ವಹಿಸಿದ ರೋಟರಿ ಕ್ಲಬ್ ಬಿರುಮಲೆ ಹಿಲ್ಸ್ ಪುತ್ತೂರು ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವರವರು ಮಾತನಾಡಿ, ನಮ್ಮ ಕ್ಲಬ್ ಇದೀಗ ಎರಡನೇ ವರ್ಷವನ್ನು ಕಾಣುತ್ತಿದ್ದರೂ, ಕ್ಲಬ್‌ನಲ್ಲಿನ ಪದಾಧಿಕಾರಿಗಳು ಹಾಗೂ ಸದಸ್ಯರು ಕ್ಲಬ್‌ನ ಬೆಳವಣಿಗೆಯಲ್ಲಿ ನನ್ನೊಂದಿಗೆ ನಿರಂತರ ಕೈಜೋಡಿಸಿರುತ್ತಾರೆ. ಕ್ಲಬ್ ಪದಪ್ರದಾನ ಕಾರ್ಯ ಮುಗಿದು ಅತ್ಯಲ್ಪ ಅವಧಿಯಲ್ಲಿಯೇ ಜಿಲ್ಲಾ ಗವರ್ನರ್ ಅಧಿಕೃತ ಭೇಟಿ ಸಂದರ್ಭದಲ್ಲಿ ಕ್ಲಬ್‌ನಿಂದ ಅನೇಕ ಸಮಾಜಮುಖಿ ಕಾರ್ಯಗಳನ್ನು ಹಮ್ಮಿಕೊಂಡಿರುವುದು ಖುಶಿ ತಂದಿದೆ ಎಂದರು.


ಅಭಿನಂದನೆ:
ಸಾಜ ಸರಕಾರಿ ಶಾಲೆಯ 25 ಮಕ್ಕಳಿಗೆ ಒಂದು ವರ್ಷ ಉಚಿತ ಯಕ್ಷಗಾನ ತರಬೇತಿ ನೀಡಲಾಗುತ್ತಿದ್ದು ಈ ತರಬೇತಿಯನ್ನು ನೀಡುವ ಸುಧಾಕರ್ ನಾಯಕ್‌ರವರಿಗೆ ಜಿಲ್ಲಾ ಗವರ್ನರ್ ರಾಮಕೃಷ್ಣ ಪಿ.ಕೆರವರು ಹೂ ನೀಡಿ ಅಭಿನಂದಿಸಿದರು.


ರಸ್ತೆ ಸುರಕ್ಷತೆ ಚಿತ್ರಕಲಾ ಸ್ಪರ್ಧೆ:
ಮಕ್ಕಳ ದಿನಾಚರಣೆ ಪ್ರಯುಕ್ತ ರೋಟರಿ ಸಂಸ್ಥೆಯು ರಸ್ತೆ ಸುರಕ್ಷತಾ ಚಿತ್ರಕಲಾ ಸ್ಪರ್ಧೆಯನ್ನು ತಾಲೂಕು ಮಟ್ಟದಲ್ಲಿ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಆಯೋಜಿಸಲಾಗಿದ್ದು, ಈ ಸ್ಪರ್ಧೆಯ ಬ್ಯಾನರ್ ಅನ್ನು ರೋಟರಿ ರಸ್ತೆ ಸುರಕ್ಷತೆಯ ಜಿಲ್ಲಾ ಚೇರ್ಮನ್ ಡಾ.ಹರ್ಷಕುಮಾರ್ ರೈ ಮಾಡಾವುರವರು ಜಿಲ್ಲಾ ಗವರ್ನರ್‌ರವರಿಗೆ ಹಸ್ತಾಂತರಿಸಿ ಅನಾವರಣಗೊಳಿಸಲಾಯಿತು.
ವೇದಿಕೆಯಲ್ಲಿ ರೋಟರಿ ಕ್ಲಬ್ ಬಿರುಮಲೆ ಹಿಲ್ಸ್ ಪುತ್ತೂರು ಸ್ಥಾಪಕಾಧ್ಯಕ್ಷ ಕೃಷ್ಣಪ್ರಸಾದ್ ಆಳ್ವ ಉಪಸ್ಥಿತರಿದ್ದರು. ಸದಸ್ಯೆ ಪರಮೇಶ್ವರಿ ಭಟ್ ಪ್ರಾರ್ಥಿಸಿದರು. ಕ್ಲಬ್ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ ಸ್ವಾಗತಿಸಿದರು. ಕಾರ್ಯದರ್ಶಿ ರುಕ್ಮಯ ಕುಲಾಲ್ ವರದಿ ಮಂಡಿಸಿ, ವಂದಿಸಿದರು. ಕಮ್ಯೂನಿಟಿ ಸರ್ವಿಸ್ ನಿರ್ದೇಶಕ ಸಂದೀಪ್ ರೈ, ವೊಕೇಶನಲ್ ಸರ್ವಿಸ್ ನಿರ್ದೇಶಕ ದಾಮೋದರ ಪಾಟಾಳಿ, ಅಂತರ್ರಾಷ್ಟ್ರೀಯ ಸರ್ವಿಸ್ ನಿರ್ದೇಶಕ ನಿತಿನ್ ಪಕ್ಕಳ, ಯೂತ್ ಸರ್ವಿಸ್ ನಿರ್ದೇಶಕಿ ಸುಚಿತಾ ಶೆಟ್ಟಿ, ಸಾರ್ಜಂಟ್ ಎಟ್ ಆರ್ಮ್ಸ್ ರಾಕೇಶ್ ರೈ ಬಿ. ವಿವಿಧ ಕಾರ್ಯಕ್ರಮ ನಿರ್ವಹಿಸಿದರು. ದಾಮೋದರ್ ಪಾಟಾಳಿ ಹಾಗೂ ಶರತ್ ಕುಮಾರ್ ರೈರವರು ಕಾರ್ಯಕ್ರಮ ನಿರೂಪಿಸಿದರು.


ಡಿ.ಜಿ ಭೇಟಿ..ಸ್ವಾಗತ..
ಕಾರ್ಯಕ್ರಮಕ್ಕೆ ಆಗಮಿಸಿದ ರೋಟರಿ ಜಿಲ್ಲಾ ಗವರ್ನರ್ ರಾಮಕೃಷ್ಣ ಪಿ.ಕೆ ಸಹಿತ ಅತಿಥಿಗಳನ್ನು ಬೈಪಾಸ್ ಬಳಿಯ ಬಪ್ಪಳಿಗೆ ಜಂಕ್ಷನ್(ನಾಯರ್ ಕನ್ಸ್ಟ್ರಕ್ಷನ್ ಆಫೀಸ್) ಬಳಿ ಅತಿಥಿಗಳನ್ನು ಕ್ಲಬ್ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ ಹಾಗೂ ಪದಾಧಿಕಾರಿಗಳು ಸ್ವಾಗತಿಸಿದರು. ಸದಸ್ಯೆ ಪರಮೇಶ್ವರಿ ಭಟ್ ರವರ ಬಲ್ನಾಡು ಬಬ್ಬಿಲಿ ನಿವಾಸದಲ್ಲಿ ಉಪಹಾರ ಸೇವಿಸಿದ ಬಳಿಕ ವನಮಹೋತ್ಸವದಲ್ಲಿ ಭಾಗಿ, ಬಲ್ನಾಡು ಅಂಗನವಾಡಿ ಹಾಗೂ ಸರಕಾರಿ ಶಾಲೆಗೆ ಕೊಡುಗೆಗಳ ಹಸ್ತಾಂತರ, ಬಿರುಮಲೆ ಬೆಟ್ಟದ ದಾರಿಯಲ್ಲಿ ಡಸ್ಟ್ ಬಿನ್‌ಗಳ ಅಳವಡಿಸುವಿಕೆ, ಬೀರಮಲೆ ಪ್ರಜ್ಞಾ ಆಶ್ರಮಕ್ಕೆ ದಿನಸಿ ಕಿಟ್ ಕೊಡುಗೆ, ರೋಟರಿ ಮನೀಷ ಸಭಾಂಗಣದಲ್ಲಿ ಕ್ಲಬ್ ಅಸೆಂಬ್ಲಿ ಬಳಿಕ ಸಭಾ ಕಾರ್ಯಕ್ರಮಲ್ಲಿ ಜಿಲ್ಲಾ ಗವರ್ನರ್ ರಾಮಕೃಷ್ಣ ಪಿ.ಕೆರವರು ಭಾಗವಹಿಸಿರುತ್ತಾರೆ.

ಸನ್ಮಾನ..
ಶೈಕ್ಷಣಿಕ ಕ್ಷೇತ್ರದಲ್ಲಿ ರಾಷ್ಟ್ರಮಟ್ಟದಲ್ಲಿ ಸಾಧನೆಗೈದ ವೀರಮಂಗಲ ಪಿಎಂಶ್ರೀ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕರಾಗಿದ್ದು ಪ್ರಸ್ತುತ ಸಾಲಿನಲ್ಲಿ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತರಾಗಿರುವ ತಾರಾನಾಥ ಸವಣೂರುರವರನ್ನು ಕ್ಲಬ್ ವೊಕೇಶನಲ್ ಸರ್ವಿಸ್ ವತಿಯಿಂದ ಅಲ್ಲದೆ ರೋಟರಿ ಜಿಲ್ಲಾ ಗವರ್ನರ್ ರಾಮಕೃಷ್ಣ ಪಿ.ಕೆರವರನ್ನೂ ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.

LEAVE A REPLY

Please enter your comment!
Please enter your name here