ಪಿಹೆಚ್‌ಡಿ ಪದವೀಧರೆ ಸವಿತ ಎಸ್ ರೈಯವರಿಗೆ ’ಸಾಧನ ರತ್ನ ಪ್ರಶಸ್ತಿ’ ಪ್ರಧಾನ
ಪುತ್ತೂರು: ಶ್ರೀ ಶಾರದಾ ಯುವ ವೇದಿಕೆ ಸೇವಾ ಟ್ರಸ್ಟ್ (ರಿ.) ಮಾಣಿ ಇದರ ವತಿಯಿಂದ ನವರಾತ್ರಿ ಮಹೋತ್ಸವದ ಅಂಗವಾಗಿ “ದಸರಾ ಕ್ರೀಡಾಕೂಟ” ಸೆ.21ರಂದು ಮಾಣಿ ಗಾಂಧಿ ಮೈದಾನದಲ್ಲಿ ನಡೆಯಿತು.

ನಿವೃತ್ತ ದೈಹಿಕ ಶಿಕ್ಷಕರು ಗಂಗಾಧರ ರೈ ತುಂಗೆರೆಕೋಡಿ, ಉದ್ಯಮಿ ಹರಿಯಪ್ಪ ಕುಲಾಲ್ ಶಂಭುಗ, ಇಸ್ರೋ ಇಂಜಿನಿಯರ್ ನವೀನ್ ಕುಮಾರ್, ಶ್ರೀ ಶಾರದಾ ಯುವ ವೇದಿಕೆ ಸೇವಾ ಟ್ರಸ್ಟ್ (ರಿ.) ಮಾಣಿ ಅಧ್ಯಕ್ಷರಾದ ಭರತ್ ಶೆಟ್ಟಿ, ಸೇರಿದಂತೆ ಹಲವು ಗಣ್ಯರು ದೀಪ ಪ್ರಜ್ವಲಿಸಿ, ಭಾರತ ಮಾತೆ ಹಾಗೂ ಸ್ವಾತಂತ್ರ್ಯ ಹೋರಾಟಗಾರ ವೀರ ಸಾವರ್ಕರ್ ರವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಕ್ರೀಡಾಕೂಟವನ್ನು ಉದ್ಘಾಟಿಸಿದರು.

ಜ್ಯೂನಿಯರ್, ಸಬ್ ಜ್ಯೂನಿಯರ್ ಮತ್ತು ಸೀನಿಯರ್ ಹಾಗೂ ಮಹಿಳೆಯರಿಗೆ ವಿವಿಧ ಆಟೋಟ ಸ್ಪರ್ಧೆ ನಡೆಯಿತು. ಮಧ್ಯಾಹ್ನ ಬಂಟ್ವಾಳ ಶಾಸಕ ರಾಜೇಶ್ ನಾೖಕ್ ಉಳಿಪ್ಪಾಡಿಗುತ್ತು, ಬಂಟ್ವಾಳ ಬಿಜೆಪಿ ಮಂಡಲದ ಅಧ್ಯಕ್ಷರಾದ ಚೆನ್ನಪ್ಪ ಕೋಟ್ಯಾನ್, ಬಿಜೆಪಿ ಮಂಡಲ ಪ್ರಧಾನ ಕಾರ್ಯದರ್ಶಿ ಶಿವಪ್ರಸಾದ್ ಕರೋಪಾಡಿ, ಬಿಜೆಪಿ ಜಿಲ್ಲಾ ಪ್ರಮುಖ್ ಮಾಧವ ಮಾವೆ ಆಗಮಿಸಿ ಕ್ರೀಡಾಕೂಟಕ್ಕೆ ಶುಭಹಾರೈಸಿದರು.

ದ.ಕ ಜಿಲ್ಲಾ ಮಾಜಿ ಸಂಸದ, ಬಿಜೆಪಿ ಮಾಜಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಇವರ ಅಧ್ಯಕ್ಷತೆಯಲ್ಲಿ ನಡೆದ ಸಮಾರೋಪ ಸಮಾರಂಭದಲ್ಲಿ ದುರ್ಗಾದಾಸ್ ಶೆಟ್ಟಿ ಗಡಿಪ್ರಧಾನರು ಶ್ರೀ ಬಲಚಂಡಿ, ಪಿಲಿಚಂಡಿ ದೈವಸ್ಥಾನ ಮಾವಂತೂರು, ಸಚಿನ್ ರೈ ಮಾಣಿಗುತ್ತು ಆಡಳಿತ ಮೊಕ್ತೇಸರರು ಶ್ರೀ ಉಳ್ಳಾಲ್ತಿ ದೈವಸ್ಥಾನ ಮಾಣಿ, ಸಂದೀಪ್ ಶೆಟ್ಟಿ, ಅರಿಯಡ್ಕ, ರತ್ನಾಕರ ಶೆಟ್ಟಿ ಕಲ್ಲಡ್ಕ ಹಿಂದೂ ಜಾಗರಣ ವೇದಿಕೆ ಪ್ರಮುಖರು, ಬಿಜೆಪಿ ಬಂಟ್ವಾಳ ಮಂಡಲ ಪ್ರಧಾನ ಕಾರ್ಯದರ್ಶಿ ಸುದರ್ಶನ್ ಬಜ, ಶ್ರೀ ಶಾರದಾ ಯುವ ವೇದಿಕೆ ಸೇವಾ ಟ್ರಸ್ಟ್ (ರಿ.) ಮಾಣಿ ಇದರ ಗೌರವ ಸಲಹೆಗಾರ ನಾರಾಯಣ ಭಟ್ ಬಪ್ಪಕೋಡಿ, ಮಾಣಿ ಗ್ರಾಮ ಪಂಚಾಯತ್ ಮಾಜಿ ಸದಸ್ಯ ಗಣೇಶ್ ರೈ ಸಾಗು, ಹಿಂದೂ ಜಾಗರಣ ವೇದಿಕೆ ಪ್ರಾಂತ ಕಾರ್ಯಕಾರಿಣಿ ಸದಸ್ಯ ಪ್ರಶಾಂತ್ ಕೆಂಪುಗುಡ್ಡೆ, ಹಿಂದೂ ಜಾಗರಣ ವೇದಿಕೆ ಜಿಲ್ಲಾ ಕಾರ್ಯಕಾರಿಣಿ ಸದಸ್ಯ ಅನೂಪ್ ಮಯ್ಯ , ಹಿಂದೂ ಜಾಗರಣಾ ವೇದಿಕೆ ಮುಖಂಡ ಅಜಿತ್ ರೈ ಹೊಸಮನೆ, ಸನತ್ ರೈ ಅನಂತಾಡಿ, ಡಾ. ಶ್ರೀನಾಥ್ ಅಳ್ವ ಮಾಣಿ, ದೈವದ ಪಾತ್ರಿ ಯಶೋಧರ ಪೂಜಾರಿ, ಸುಳ್ಯ ಮಂಡಲ ಉಪಾಧ್ಯಕ್ಷ ಶ್ರೀನಾಥ್ ಆಳ್ವ ಸುಳ್ಯ, ಸವಣೂರು ಗ್ರಾಮ ಪಂಚಾಯತ್ ಸದಸ್ಯ ಭರತ್, ಬಿಜೆಪಿ ಜಿಲ್ಲಾ ಮಹಿಳಾ ಪ್ರಮುಖ್ ಭವಾನಿ ಶೆಟ್ಟಿ, ಮಾಣಿ ಬಿಜೆಪಿ ಮಹಿಳಾ ಪ್ರಮುಖ್ ಸುಶೀಲ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಮಣಿಪಾಲ ವಿಶ್ವ ವಿದ್ಯಾನಿಲಯದಿಂದ ಪಿಹೆಚ್‌ಡಿ ಪದವಿ ಪಡೆದ ಮಾಣಿಗುತ್ತು ಸಚಿನ್ ರೈಯವರ ಪತ್ನಿ ಸವಿತ ಎಸ್ ರೈಯವರಿಗೆ ಅವರ ಹೆತ್ತವರ ಸಮ್ಮುಖದಲ್ಲಿ ’ಸಾಧನ ರತ್ನ ಪ್ರಶಸ್ತಿ’ ನೀಡಿ ಸನ್ಮಾನಿಸಿ ಗೌರವಿಸಲಾಯಿತು.

ಶ್ರೀ ಶಾರದಾ ಯುವ ವೇದಿಕೆ ಸೇವಾ ಟ್ರಸ್ಟ್ (ರಿ.) ಇದರ ಹಿತೈಷಿಗಳಾದ ದಿ.ನಾಗೇಶ್ ಶೆಟ್ಟಿ ಕೊಡಾಜೆ, ಹಾಗೂ ಹಿರಿಯ ಕಬಡ್ಡಿ ಆಟಗಾರ ದಿ. ದಾಮೋದರ ಪೈ ಮಾಣಿ ಇವರ ಸಂಸ್ಮರಣಾ ಕಾರ್ಯಕ್ರಮ ನಡೆಯಿತು. ವಿಶೇಷ ಆಕರ್ಷಣೆಯಾಗಿ ಸಾರ್ವಜನಿಕರಿಗೆ ಹಗ್ಗಜಗ್ಗಾಟ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು. ಈ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಗಳಿಸಿದ ಕ್ವಾಲಿಟಿ ಫ್ರೆಂಡ್ಸ್ ಮಾಣಿ ಹಾಗೂ ದ್ವಿತೀಯ ಸ್ಥಾನ ಗಳಿಸಿದ ವೈದ್ಯನಾಥ ಫ್ರೆಂಡ್ಸ್ ಧರ್ಮನಗರ ತಂಡಗಳಿಗೆ ಹಾಗೂ ವಿವಿಧ ಆಟೋಟ ಸ್ಪರ್ಧೆಗಳಲ್ಲಿ ವಿಜೇತರಾದ ಕ್ರೀಡಾಪಟುಗಳಿಗೆ ಬಹುಮಾನ ವಿತರಿಸಲಾಯಿತು. ಶ್ರೀ ಶಾರದಾ ಯುವ ವೇದಿಕೆ ಸೇವಾ ಟ್ರಸ್ಟ್ (ರಿ.) ಪ್ರಧಾನ ಕಾರ್ಯದರ್ಶಿ ನರಸಿಂಹ ಶೆಟ್ಟಿ ಮಾಣಿ ಕಾರ್ಯಕ್ರಮ ನಿರ್ವಹಿಸಿದರು.

ಕಾರ್ಯಕ್ರಮದಲ್ಲಿ ಕೋಡಿ ಫ್ರೆಂಡ್ಸ್ ಇದರ ಅಧ್ಯಕ್ಷರು, ಪದಾಧಿಕಾರಿಗಳು, ಸದಸ್ಯರು ಸೇರಿದಂತೆ ಕ್ರೀಡಾಭಿಮಾನಿಗಳು ಭಾಗವಹಿಸಿದ್ದರು.

