ಪುತ್ತೂರು: ಕುಂಬ್ರ ಮರ್ಕಝುಲ್ ಹುದಾ ಮಹಿಳಾ ಕಾಲೇಜಿನ ಹಾಸ್ಟೆಲ್ ವಿಭಾಗದ ವಿದ್ಯಾರ್ಥಿನಿಯರ ಬ್ರೀಝ್ ಆಫ್ ಮದೀನ ಮಿಲಾದ್ ಕಾರ್ಯಕ್ರಮ ನಡೆಯಿತು. ಕಾಲೇಜಿನ ಆಡಳಿತ ಸಮಿತಿಯ ಉಪಾಧ್ಯಕ್ಷ ಡಾ.ಎಂಎಸ್‌ಎಂ ಅಬ್ದುರ್ರಶೀದ್ ಝೈನಿ ಕಾಮಿಲ್ ಅವರು ಪ್ರವಾದಿಯವರ ಜೀವನ ಸಂದೇಶಗಳ ಬಗ್ಗೆ ಮಾತನಾಡಿದರು.
ಸಭೆಯ ಅಧ್ಯಕ್ಷತೆಯನ್ನು ಸಂಸ್ಥೆಯ ಸದಸ್ಯ ಯೂಸುಫ್ ಹಾಜಿ ಕೈಕಾರ ವಹಿಸಿದ್ದರು. ಅತಿಥಿಯಾಗಿ ಬಿ.ಜೆ ಕನ್ಸ್ಟ್ರಕ್ಷನ್ ನ ಮಾಲಕ ಜುನೈದ್ ಸಾಲ್ಮರ ಶುಭ ಹಾರೈಸಿದರು. ಕಾರ್ಯದರ್ಶಿ ಯೂಸುಫ್ ಮೈದಾನಿಮೂಲೆ, ಆಡಳಿತ ಸಹಾಯಕಿ ಶಬ್ನಾ ಉಪಸ್ಥಿತರಿದ್ದರು.