ಬೇರೊಬ್ಬರ ಜಮೀನಿನ ಆರ್‌ಟಿಸಿಯನ್ನು ಕೋರ್ಟ್‌ಗೆ ನೀಡಿ ಆರೋಪಿಗೆ ಜಾಮೀನು ನೀಡುವಂತೆ ಮಾಡಿ ವಂಚನೆ : ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು

0

ಪುತ್ತೂರು:ಬೇರೊಬ್ಬರ ಜಮೀನಿನ ಆರ್‌ಟಿಸಿಯನ್ನು ತಮ್ಮದೆಂದು ನಂಬಿಸಿ ನ್ಯಾಯಾಲಯಕ್ಕೆ ನೀಡಿ ಆರೋಪಿಗೆ ಜಾಮೀನು ನೀಡುವಂತೆ ಮಾಡಿ ವಂಚಿಸಿರುವ ಪ್ರಕರಣವೊಂದಕ್ಕೆ ಸಂಬಂಧಿಸಿ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.


ನೆಕ್ಕಿಲಾಡಿ ಗ್ರಾಮದ ಅಹ್ಮದ್ ಬ್ಯಾರಿ ಎಂಬವರ ಮಗ ಎನ್.ಅಬೂಬಕ್ಕರ್ ಎಂಬವರು ಈ ಕುರಿತು ಪೊಲೀಸರಿಗೆ ದೂರು ನೀಡಿದ್ದಾರೆ.‘ಪುತ್ತೂರು ತಾಲೂಕು 34ನೇ ನೆಕ್ಕಿಲಾಡಿ ಗ್ರಾಮದ ಸ.ನಂ. 33//9ರಲ್ಲಿ 0.08.50 ಎಕ್ರೆ ಜಮೀನಿನ ಮಾಲಿಕನಾಗಿರುರುವ ತಾನು ಸದ್ರಿ ಜಮೀನಿಗೆ ಸಂಬಂಽಸಿ ದಿನಾಂಕ 31.12.2024ರಂದು ಪುತ್ತೂರು ತಾಲೂಕು ಕಚೇರಿಯಲ್ಲಿರುವ ಆರ್‌ಟಿಸಿ ಕೇಂದ್ರದಿಂದ ತನ್ನ ಹಕ್ಕಿನ ಜಮೀನಿನ ಬಾಬ್ತು ಪಹಣಿ ಪತ್ರವನ್ನು ತೆಗೆದು ನೋಡಿದಾಗ, ಸದ್ರಿ ಪಹಣಿ ಪತ್ರದ ಕಾಲಂ 11ರ ಋಣಗಳು ಕಾಲಂನಲ್ಲಿ ಎಂಆರ್‌ಟಿ 4/2024-2025 ಸ್ಪೆಷಲ್ ಕೇಸ್ ನಂ. ನಂಬ್ರ 34/2025(ಕ್ರೈಂ ನಂ.30/2021 ಆಫ್ ಆಂಡ್ ಎನ್.ಕ್ರೈಂ ಪಿಎಸ್)ಮಾನ್ಯ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಽಶರು ದ.ಕ ಜಿಲ್ಲೆ ಮಂಗಳೂರು ಇವರಿಗೆ ರೂ. 2,೦೦,೦೦೦ಕ್ಕೆ ಮುಟ್ಟುಗೋಲು ಎಂಬುದಾಗಿ ದಾಖಲಾಗಿರುತ್ತದೆ.ಈ ಬಗ್ಗೆ ತಾನು ಮ್ಯೂಟೇಷನ್ ರಿಜಿಸ್ಟ್ರಾರ್ ಪ್ರತಿಯನ್ನು ಸಹ ಪಡಕೊಂಡಿದ್ದು ಅದರಲ್ಲೂ ಇದೇ ರೀತಿ ದಾಖಲು ಇರುತ್ತದೆ.ಆ ಬಳಿಕ ಅವರು ಸೈಬರ್‌ನ ಇ-ಕೋರ್ಟ್ ಸೇವೆಗಳ ವಿಭಾಗದಲ್ಲಿ ಸದ್ರಿ ಕೇಸ್‌ನ ಬಗ್ಗೆ ವಿವರವನ್ನು ನೋಡಿದಾಗ ಮೇಲ್ಕಾಣಿಸಿದ ಕೇಸಿನ 5ನೇ ಆರೋಪಿ ಸಯ್ಯದ್ ಮೊಹಮ್ಮದ್ ಯಾನೆ ಸಯ್ಯದ್ ಮೊಹಮ್ಮದ್ ನಾಸಿಮ್ ಎಂಬವರ ಪರವಾಗಿ ವಕೀಲರು 2 ಜನ ಜಾಮೀನುದಾರರನ್ನು ಹಾಜರುಪಡಿಸಿದ್ದು, ಆ ಪೈಕಿ ಒಬ್ಬ ಜಾಮೀನುದಾರರಾದ ಪಡ್ನೂರು ಗುನೂನಾರ್ ಹಮ್ಮದ್ ಬ್ಯಾರಿ ಎಂಬವರ ಮಗ ಅಬೂಬಕ್ಕರ್(32ವ.)ಎಂಬವರು ಹಾಜರುಪಡಿಸಿದ ಆರ್‌ಟಿಸಿಯು ತನ್ನ ಬಾಬ್ತು ಹಕ್ಕಿನ,34ನೇ ನೆಕ್ಕಿಲಾಡಿ ಗ್ರಾಮದ ಸ.ನಂ.32/9ರಲ್ಲಿ 0.08.50 ಎಕ್ರೆ ಜಮೀನಿನ ಆರ್‌ಟಿಸಿಯಾಗಿರುತ್ತದೆ.ಈ ನ್ಯಾಯಾಲಯದ, ತಾರೀಕು 14.06.2024ರ ಆದೇಶದ ಪ್ರತಿಯ ಹಾಳೆಯಲ್ಲಿ ತನ್ನ ಹಕ್ಕಿನ ಜಮೀನನ್ನು ಆಧಾರವಾಗಿಸಿದ ವ್ಯಕ್ತಿಯ ವಯಸ್ಸು, ವಿಳಾಸ ಮತ್ತು ಆಧಾರ್ ನಂಬ್ರಕ್ಕೂ, ತನ್ನ ವಯಸ್ಸು, ವಿಳಾಸ ಮತ್ತು ಆಧಾರ್ ನಂಬ್ರಕ್ಕೂ ತಾಳೆ ಬರುವುದು ಕಂಡು ಬರುವುದಿಲ್ಲ.

ಆರೋಪಿ ಅಬೂಬಕ್ಕರ್,ಗುನೂನಾರ್ ಎಂಬಾತ ನನ್ನ ಹೆಸರಿನಲ್ಲಿರುವ ಆರ್‌ಟಿಸಿಯನ್ನು ಆತನ ಹೆಸರಿನಲ್ಲಿರುವ ಜಮೀನಿನ ಆರ್‌ಟಿಸಿಯೆಂದು ಹೇಳಿ ನಂಬಿಸಿ, ನಟಿಸಿ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧಿಶರು ದ.ಕ ಜಿಲ್ಲೆ ಮಂಗಳೂರು ನ್ಯಾಯಾಲಯಕ್ಕೆ ನೀಡಿ ಆರೋಪಿಗೆ ಜಾಮೀನು ನೀಡುವಂತೆ ಮಾಡಿ ವಂಚಿಸಿದ್ದಾಗಿ’ನೆಕ್ಕಿಲಾಡಿ ಎನ್.ಅಬೂಬಕ್ಕರ್ ಅವರು ನೀಡಿದ ದೂರಿನ ಮೇರೆಗೆ ಆರೋಪಿ ಅಬೂಬಕ್ಕರ್ ಗುನೂನಾರ್ ಎಂಬಾತನ ವಿರುದ್ಧ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ: 48/2025 ಕಲಂ:417, 419 ಐಪಿಸಿಯಂತೆ ಪ್ರಕರಣ(ಅ.ಕ್ರ.48/2025)ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

LEAVE A REPLY

Please enter your comment!
Please enter your name here