ಬಡಗನ್ನೂರು: ಮದಕ ಶ್ರೀ ರಾಜರಾಜೇಶ್ವರೀ ಕ್ಷೇತ್ರದಲ್ಲಿ ಶರನ್ನವರಾತ್ರಿ ಮಹೋತ್ಸವವು ಅಂಗವಾಗಿ ಸೆ.28 ರಂದು ಸಂಜೆ ಶ್ರೀ ಕ್ಷೇತ್ರದಲ್ಲಿ ಸರ್ವಶಕ್ತಿ ಮಹಿಳಾ ಭಜನಾ ಸಂಘ ಪಡುಮಲೆ ಸದಸ್ಯರಿಂದ ಭಜನಾ ಕಾರ್ಯಕ್ರಮ ಹಾಗೂ ಸರ್ವಶಕ್ತಿ ಮಕ್ಕಳ ಕಣಿತ ಭಜನಾ ತಂಡದಿಂದ , ಕುಣಿತ ಭಜನಾ ಕಾರ್ಯಕ್ರಮ ನಡೆಯಿತು.

ಬಳಿಕ ಶ್ರೀ ದೇವಿಗೆ ಹೂವಿನ ಪೂಜೆ, ಮಹಾಪೂಜಾ ಪ್ರಸಾದ ವಿತರಣೆ ನಡೆಯಿತು.ಶ್ರೀ ಕೂವೆ ಶಾಸ್ತಾರ ವಿಷ್ಣುಮೂರ್ತಿ ದೇವಸ್ಥಾನದ ಪ್ರಧಾನ ಅರ್ಚಕ ಮಹಾಲಿಂಗ ಭಟ್ ನೇತೃತ್ವದಲ್ಲಿ ಧಾರ್ಮಿಕ ವಿಧಿ ವಿಧಾನಗಳು ನೆರವೇರಿಸಿದರು.

ಈ ಸಂಧರ್ಭದಲ್ಲಿ ಶರನ್ನವರಾತ್ರಿ ಮಹೋತ್ಸವ ಸಮಿತಿ ಅಧ್ಯಕ್ಷ ಚಂದ್ರಶೇಖರ ಆಳ್ವ ಪಡುಮಲೆ ಕೋಟಿ ಚೆನ್ನಯ ಸಂಚಾಲನ ಸಮಿತಿ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ, ಟ್ರಸ್ಟಿಗಳಾದ ಚರಣ್ ಕೆ, ಶ್ರೀಧರ ಪಟ್ಲ ಧಾರ್ಮಿಕ ದತ್ತಿ ಸದಸ್ಯೆ ಮಲ್ಲಿಕಾ ಶ್ರೀ ಕ್ಷೇತ್ರ ಪಡುಮಲೆ ವ್ಯವಸ್ಥಾಪನಾ ಸಮಿತಿ ಸದಸ್ಯೆ, ಶಂಕರಿ ಪಟ್ಟೆ ಗ್ರಾ. ಪಂ ಸದಸ್ಯರಾದ ರವಿರಾಜ ರೖೆ ಸಜಂಕಾಡಿ ಸಂತೋಷ ಆಳ್ವ ಗಿರಿಮನೆ, ವೆಂಕಟೇಶ್ ಕನ್ನಡ್ಕ, ಶರನ್ನವರಾತ್ರಿ ಮಹೋತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ಶೀಧರ ನಾಯ್ಕ ನೇರ್ಲಂಪ್ಪಾಡಿ, ಕೋಶಾಧಿಕಾರಿ ಶಿವಕುಮಾರ್ ಮೋಡಿಕೆ, ಶ್ರೀ ಕೂವೆ ಶಾಸ್ತಾರ ಸಾಂಸ್ಕೃತಿಕ ಸಮಿತಿ ಅಧ್ಯಕ್ಷ ರಾಮಣ್ಣ ಗೌಡ ಬಸವಹಿತ್ತಿಲು, ಮಾಜಿ ಅಧ್ಯಕ್ಷ ಸುಬ್ಬಯ್ಯ ರೖೆ ಹಲಸಿನಡಿ, ಬಡಗನ್ನೂರು ಶಾಲಾ ಹಿರಿಯ ಕುಂಬ್ರ ಕೃ. ಪ. ಸ. ಸಂಘದ ಉಪಾಧ್ಯಕ್ಷ ಸೂರ್ಯನಾರಾಯಣ ಭಟ್ ಸುಳ್ಯಪದವು, ಪಟ್ಟೆ,ಶ್ರೀಕೃಷ್ಣ ಹಿ.ಪ್ರಾ. ಶಾಲಾ ಮುಖ್ಯ ಶಿಕ್ಷಕ ರಾಜಗೋಪಾಲ್ ಭಟ್, ಪ್ರೌಢಶಾಲಾ ಮುಖ್ಯ ಶಿಕ್ಷಕಿ ಸುಮನಾ ಬಿ, ಗಣೇಶೋತ್ಸವ ಸಮಿತಿ ಅಧ್ಯಕ್ಷ ಗಂಗಾಧರ ರೖೆ ಮೇಗಿನಮನೆ ಕಾರ್ಯದರ್ಶಿ ರಾಜೇಶ್ ರೖೆ ಮೇಗಿನಮಸೆ ಸದಸ್ಯರುಗಳಾದ ಪದ್ಮನಾಭ ರೖೆ ಅರೆಪ್ಪಾಡಿ, ರಘುರಾಮ ಪಾಟಾಳಿ ಶರವು, ಕಿರಣ್ ಕುಮಾರ್ ಮೖಂದನಡ್ಕ , ಸತೀಶ್ ಕುಲಾಲ್ ಪೖೆರುಪುಣಿ, ಸೂರಾಜ್ ರೖೆ ಮೖಂದನಡ್ಕ, ರತ್ನಾಕರ ರೖೆ ಕುದ್ಕಾಡಿ, ಹಾಗೂ ವಿವಿಧ ಸಂಘ ಸಂಸ್ಥೆಗಳ ಅಧ್ಯಕ್ಷರು, ಪದಾಧಿಕಾರಿಗಳು ಮತ್ತು ಊರಿನವರು ಭಾಗವಹಿಸಿದ್ದರು.
ಶ್ರೀ ರಾಜರಾಜೇಶ್ವರಿ ಕ್ಷೇತ್ರದಲ್ಲಿ ಶ್ರೀ ದೇವಿಗೆ ಭಕ್ತಾದಿಗಳಿಂದ ಸುಮಾರು 100ಕ್ಕೂ ಮಿಕ್ಕಿ ಹೂವಿನ ಪೂಜೆ,ನಡೆಯಿತು. ಕಾರ್ಯಕ್ರಮ ಸಮಾರು 350ಕ್ಕೂ ಮಿಕ್ಕಿ ಭಕ್ತಾದಿಗಳು ಭಾಗವಹಿಸಿ ಅನ್ನ ಪ್ರಸಾದ ಸ್ವೀಕರಿಸಿದರು.