ಮಂಗಳೂರು : ದ.ಕ. ಮತ್ತು ಉಡುಪಿ ಜಿಲ್ಲಾ ಜಮೀಯ್ಯತುಲ್ ಫಲಾಹ್ ನ 2025-27 ನೇ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆ .ಕೆ.ಸಾಹುಲ್ ಹಮೀದ್ ಅಧ್ಯಕ್ಷತೆಯಲ್ಲಿ ಕಂಕನಾಡಿಯ ಜಮೀಯ್ಯತುಲ್ ಫಲಾಹ್ ಸಭಾಭವನದಲ್ಲಿ ನಡೆದ ಸಂಸ್ಥೆಯ ವಾರ್ಷಿಕ ಮಹಾಸಭೆಯಲ್ಲಿ ನಡೆಯಿತು.
ನೂತನ ಅಧ್ಯಕ್ಷರಾಗಿ ಅಶ್ಫಾಕ್ ಅಹ್ಮದ್ ಕಾರ್ಕಳ ಆಯ್ಕೆಯಾದರು. ಉಪಾಧ್ಯಕ್ಷರಾಗಿ ಎಲ್.ಟಿ. ಅಬ್ದುಲ್ ರಝಾಕ್ ಹಾಜಿ ಪುತ್ತೂರು, ಮೊಹಿದಿನ್ ಅಹ್ಮದ್ ಸಾಹೇಬ್ (ಎನ್ನಾರ್ಸಿಸಿ), ಪ್ರಧಾನ ಕಾರ್ಯದರ್ಶಿಯಾಗಿ ಮೊಹಮ್ಮದ್ ಹನೀಫ್ ಮಂಗಳೂರು, ಕೋಶಾಧಿಕಾರಿಯಾಗಿ ಅಬ್ದುಲ್ ನಾಸಿರ್ ಕೆ.ಕೆ. ಉಳ್ಳಾಲ, ಪತ್ರಿಕಾ ಕಾರ್ಯದರ್ಶಿಯಾಗಿ ಅಬ್ದುಲ್ ಲತೀಫ್ ನೇರಳಕಟ್ಟೆ ಹಾಗೂ ಸಂಘಟನಾ ಕಾರ್ಯದರ್ಶಿಯಾಗಿ ಜೆ.ಪಿ.ಮುಹಮ್ಮದ್ ಗುಲ್ವಾಡಿ ಕುಂದಾಪುರ ಆಯ್ಕೆಯಾದರು.
ಅಧ್ಯಕ್ಷ, ಪ್ರಧಾನ ಕಾರ್ಯದರ್ಶಿ ಹಾಗೂ ಜೊತೆ ಕಾರ್ಯದರ್ಶಿ ಹುದ್ದೆಗೆ ತಲಾ ಇಬ್ಬರು ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದರು. ಈ ಪೈಕಿ ತಲಾ ಒಂದು ನಾಮಪತ್ರಗಳು ತಿರಸ್ಕ್ರತಗೊಂಡಿದೆ. ಜೊತೆ ಕಾರ್ಯದರ್ಶಿ ಮತ್ತು ಸಂಘಟನಾ ಕಾರ್ಯದರ್ಶಿ ಹುದ್ದೆಗೆ ತಲಾ ಇಬ್ಬರು ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದು, ತಲಾ ಒಬ್ಬರು ನಾಮಪತ್ರ ವಾಪಸ್ ಪಡೆದಿದ್ದಾರೆ. ಉಪಾಧ್ಯಕ್ಷ ಹುದ್ದೆಯ ಒಂದು ಸ್ಥಾನ ಎನ್ನಾರ್ಸಿಸಿ ಗೆ ನಾಮ ನಿರ್ದೇಶನಗೊಂಡಿದ್ದು, ಇನ್ನೊಂದು ಉಪಾಧ್ಯಕ್ಷ ಹಾಗೂ ಪತ್ರಿಕಾ ಕಾರ್ಯದರ್ಶಿ ಹುದ್ದೆಗೆ ತಲಾ ಒಬ್ಬರೇ ನಾಮಪತ್ರ ಸಲ್ಲಿಸಿದ್ದರು.
ಚುನಾವಣಾಧಿಕಾರಿಗಳಾಗಿ ನಿವೃತ್ತ ಎಸಿಎಫ್ ಮಹಮ್ಮದ್ ಬ್ಯಾರಿ ಹಾಗೂ ಸುಜಾಹ್ ಮುಹಮ್ಮದ್ ಕಾರ್ಯ ನಿರ್ವಹಿಸಿದರು. ಸಂಸ್ಥೆಯ ಆಡಳಿತಾಧಿಕಾರಿ ಜಲಾಲುದ್ದೀನ್ ವಿಟ್ಲ ಮತ್ತು ಸಿಬ್ಬಂದಿ ಪಿ.ಮಹಮ್ಮದ್ ಪಾಣೆಮಂಗಳೂರು ಸಹಕರಿಸಿದರು.