ಕಾಣಿಯೂರಿನ ಪ್ರಗತಿಗೆ ರಾಜ್ಯಮಟ್ಟದ ಮುಕ್ತ ಯೋಗಾಸನ ಸ್ಪರ್ಧೆಯಲ್ಲಿ ಬಹುಮಾನ – ವಿದ್ಯಾರ್ಥಿನಿ ಶ್ರೀಮಾ ಕೆ ಎಚ್ ಅವರಿಗೆ ’ಯೋಗಶಾರದೆ’ ಪ್ರಶಸ್ತಿ

0

ಕಾಣಿಯೂರು: ಶ್ರೀ ವೀರ ಮಾರುತಿ ಸೇವಾ ಟ್ರಸ್ಟ್ ಮೂಡಬಿದ್ರೆ ಇವರ ಆಶ್ರಯದಲ್ಲಿ 36ನೇ ವರ್ಷದ ಶ್ರೀ ಶಾರದೋತ್ಸವ ಪ್ರಯುಕ್ತ ಯೋಗಶ್ರೀ ಯೋಗ ಬಳಗ ಮಂಗಳೂರು ಇದರ ಸಹಯೋಗದಲ್ಲಿ ರಾಜ್ಯಮಟ್ಟದ ಮುಕ್ತ ಯೋಗಾಸನ ಸ್ಪರ್ಧೆಯಲ್ಲಿ ಕಾಣಿಯೂರಿನ ಪ್ರಗತಿ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳು ಭಾಗವಹಿಸಿ ಬಹುಮಾನಗಳನ್ನು ಪಡೆದುಕೊಂಡಿರುತ್ತಾರೆ.

ಪ್ರೌಢಶಾಲಾ ಬಾಲಕಿಯರ ವಿಭಾಗದಲ್ಲಿ ಶ್ರೀಮಾ ಕೆ ಎಚ್ (9ನೇ ಆಂ ಮಾ) ಪ್ರಥಮ ಸ್ಥಾನ, ಸಾನ್ವಿಕ ಎಚ್(9ನೇ ಆಂ ಮಾ) ತೃತೀಯ ಸ್ಥಾನ, ಮೋನಿಷ್ ಟಿ (9ನೇ ಆಂ ಮಾ) ತೃತೀಯ ಸ್ಥಾನ ಹಾಗೂ ಕಿರಿಯ ಪ್ರಾಥಮಿಕ ವಿಭಾಗದಲ್ಲಿ ಆಶ್ಲೇಷ್ ಕೆ ಎ ಎಂ (4ನೇ ಆಂ ಮಾ) ತೃತೀಯ ಸ್ಥಾನವನ್ನು ಪಡೆದುಕೊಂಡಿರುತ್ತಾರೆ.
ಬಾಲಕಿಯರ ವಿಭಾಗದಲ್ಲಿ ಶ್ರೀಮಾ ಕೆ ಎಚ್ ಅತ್ಯುತ್ತಮ ಪ್ರದರ್ಶನವನ್ನು ನೀಡಿ ’ಯೋಗಶಾರದೆ’ ಪ್ರಶಸ್ತಿಯನ್ನು ಪಡೆದುಕೊಂಡಿರುತ್ತಾರೆ. ಇವರಿಗೆ ಸಂಸ್ಥೆಯ ಯೋಗ ಶಿಕ್ಷಕಿ ಶಶಿಕಲಾ ಕೆ ತರಬೇತು ನೀಡಿರುತ್ತಾರೆ. ಶಿಕ್ಷಕಿ ಸುಷ್ಮಾ ರೈ ಸಹಕರಿಸಿರುತ್ತಾರೆ.

LEAVE A REPLY

Please enter your comment!
Please enter your name here