ಬಲ್ನಾಡು ಡಾ.ಅರ್ಜುನ್ ಆಳ್ವ ಸತತ ಮೂರನೇ ಬಾರಿಗೆ ರಾಜೀವಗಾಂಧಿ ಆರೋಗ್ಯ ವಿವಿ ಕಬಡ್ಡಿ ತಂಡಕ್ಕೆ ಆಯ್ಕೆ

0

ಪುತ್ತೂರು: ರಾಜೀವಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯ ಬೆಂಗಳೂರು ಇದರ ಕಬಡ್ಡಿ ತಂಡಕ್ಕೆ ಮೂಡಬಿದ್ರೆ ಆಳ್ವಾಸ್ ಬ್ಯಾಚುರಲ್ ಆಫ್ ನ್ಯಾಚುರೋಪತಿ ಮತ್ತು ಯೋಗಿಕ್ ಸೈನ್ಸ್‌ನ ಡಾ. ಅರ್ಜುನ್ ಆಳ್ವ ಬಲ್ನಾಡು ಸತತ ಮೂರನೇ ಬಾರಿಗೆ ಆಯ್ಕೆಯಾಗಿದ್ದಾರೆ.


ಜಮಖಂಡಿಯ ಬಿಎಲ್‌ಡಿಇಎ ನರ್ಸಿಂಗ್ ಕಾಲೇಜಿನಲ್ಲಿ ಸೆ.20 ನಡೆದ ಆಯ್ಕೆ ಪ್ರಕ್ರಿಯೆಯಲ್ಲಿ ಡಾ.ಅರ್ಜುನ್ ಆಳ್ವ ಆರ್‌ಜಿಯುಎಚ್‌ಎಸ್ ಕರ್ನಾಟಕ ಕಬಡ್ಡಿ ತಂಡಕ್ಕೆ ಆಯ್ಕೆಯಾಗಿದ್ದಾರೆ. ಸೆ.26ರಿಂದ ಅ.2 ತನಕ ಬಿಎಲ್‌ಡಿಇಎ ನರ್ಸಿಂಗ್ ಕಾಲೇಜ್, ಜಮಖಂಡಿಯಲ್ಲಿ ತರಬೇತಿ ಶಿಬಿರದಲ್ಲಿ ಭಾಗವಹಿಸಿ ಅ.4ರಿಂದ 7ರ ತನಕ ಬೆಳಗಾವಿ ಜಿಲ್ಲೆಯ ಐ.ಎಸ್ ಯಡವಾಡ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆಯಲಿರುವ ದಕ್ಷಿಣ ಭಾರತ ವಲಯದ ಅಂತರ್ ವಿಶ್ವವಿದ್ಯಾನಿಲಯ ಮಟ್ಟದ ಕಬಡ್ಡಿ ಪಂದ್ಯಾಟದಲ್ಲಿ ಅರ್ಜುನ್ ಆಳ್ವ ರಾಜೀವ ಗಾಂದಿ ಆರೋಗ್ಯ ವಿಜ್ಞಾನ ವಿ.ವಿ ಬೆಂಗಳೂರು ತಂಡವನ್ನು ಪ್ರತಿನಿಧಿಸಲಿದ್ದಾರೆ.


ಪುತ್ತೂರು ವಿವೇಕಾನಂದ ಪ್ರೌಢಶಾಲೆ, ಪ.ಪೂ.ಕಾಲೇಜು, ಪ್ರಶಾಂತಿ ವಿದ್ಯಾಕೇಂದ್ರ ಬಾಯಾರು, ಹಿರಿಯ ವಿದ್ಯಾರ್ಥಿಯಾಗಿರುವ ಡಾ.ಅರ್ಜುನ್ ಆಳ್ವ ಆಳ್ವಾಸ್ ಮೂಡಬಿದ್ರೆ ಆಳ್ವಾಸ್ ಬ್ಯಾಚುರಲ್ ಆಫ್ ನ್ಯಾಚುರೋಪತಿ ಮತ್ತು ಯೋಗಿಕ್ ಸೈನ್ಸ್ ಪದವಿ ಪಡೆದು ಪ್ರಸ್ತುತ ಆಳ್ವಾಸ್ ಮೂಡಬಿದ್ರೆ ಬಿ.ಎನ್.ವೈ.ಎಸ್ ಕಾಲೇಜಿನಲ್ಲಿ ಇಂಟರ್ನ್‌ ಶಿಪ್ ಮಾಡುತ್ತಿದ್ದಾರೆ. ಆಳ್ವಾಸ್ ಮೂಡಬಿದ್ರೆ ಬಿ.ಎನ್.ವೈ.ಎಸ್ ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು, ಶಿಕ್ಷಕರು, ದೈಹಿಕ ಶಿಕ್ಷಣ ಶಿಕ್ಷಕರಾದ ಅವಿನಾಶ್ ಎಸ್ ಮತ್ತು ಕೋಚ್ ಡಾ.ಮಧು ಜಿ.ಆರ್., ಪ್ರೋ.ಡಾ. ಡಾರ್ವಿನ್‌ರವರ ಮಾರ್ಗದರ್ಶನ, ಪ್ರೋತ್ಸಾಹದಿಂದ ಆಯ್ಕೆಗೊಂಡಿದ್ದಾರೆ. ಇವರು ಸಂತ ಫಿಲೋಮಿನಾ ಕಾಲೇಜಿನ ಹಿರಿಯ ವಿದ್ಯಾರ್ಥಿ ಮಂಗಳೂರು ವಿಶ್ವವಿದ್ಯಾನಿಲಯದ ಕಬಡ್ಡಿ ತಂಡದ ಮಾಜಿ ಕಪ್ತಾನ, ಅಜಲಾಡಿ ಬೀಡು ಪ್ರವೀಣ್‌ಚಂದ್ರ ಆಳ್ವ ಮತ್ತು ಸುಮಲತಾ ದಂಪತಿ ಪುತ್ರ.

LEAVE A REPLY

Please enter your comment!
Please enter your name here