ಬಡಗನ್ನೂರು : ಶ್ರೀ ಕ್ಷೇತ್ರ ಗೆಜ್ಜೆಗಿರಿ ಆದಿದೈವ ಧೂಮಾವತಿ, ದೇಯಿ ಬೈದೇತಿ ಕೋಟಿ ಚೆನ್ನಯರ ಮೂಲಸ್ಥಾನಕ್ಕೆ ರಾಜ್ಯ ಹಿಂದುಳಿದ ಆಯೋಗದ ಸದಸ್ಯೆ ಪ್ರತಿಭಾ ಕುಳಾಯಿ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು.
ಈ ಸಂಧರ್ಭದಲ್ಲಿ ಶ್ರೀ ಕ್ಷೇತ್ರದ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಸಂಜೀವ ಪೂಜಾರಿ ಬಿರುವ, ಕ್ಷೇತ್ರಾಡಳಿತ ಸಮಿತಿ ಪ್ರಧಾನ ಕಾರ್ಯದರ್ಶಿ ಡಾ. ಕೆ.ಬಿ ರಾಜಾರಾಮ್, ಮೂಕ್ತೇಸರ ಶ್ರೀಧರ ಪೂಜಾರಿ, ಕ್ಷೇತ್ರದ ಅಭಿವೃದ್ಧಿ ಸಮಿತಿ ಕಾರ್ಯದರ್ಶಿ ಉಲ್ಲಾಸ್ ಕೋಟ್ಯಾನ್, ಟ್ರಸ್ಟಿಗಳಾದ ಶೖೆಲೇಂದ್ರ ಸುವರ್ಣ ಹರೀಶ್ ಕೆ, ಜಯ ವಿಕ್ರಮ್ ಉಪ್ಪಿನಂಗಡಿ, ಪುತ್ತೂರು ಬಿಲ್ಲವ ಸಂಘದ ಮಾಜಿ ಅಧ್ಯಕ್ಷ ವಿಜಯಕುಮಾರ್ ಸೊರಕೆ,, ಜಿಲ್ಲಾ ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷೆ ಉಷಾ ಅಂಚನ್, ಬಿಜೆಪಿ ಹಿಂದುಳಿದ ವರ್ಗದ ಸದಸ್ಯ ಆರ್ ಸಿ ನಾರಾಯಣ ರೆಂಜ, ಪುತ್ತೂರು ರಾಮಕೃಷ್ಣ ಪ್ರೌಢಶಾಲಾ ಸಂಚಾಲಕ ಹೇಮನಾಥ ಶೆಟ್ಟಿ ಕಾವು, ಪುತ್ತೂರು ನಗರ ಬಿಲ್ವವ ಸಮಿತಿ ಅಧ್ಯಕ್ಷ ಮೋಹನ್ ತೆಂಕಿಲ, ಮತ್ತಿತರು ಗಣ್ಯರು.ಹಾಗೂ ಊರಪರವೂರ ಭಕ್ತಾಧಿಗಳು ಭಾಗವಹಿಸಿದ್ದರು.

ಕ್ಷೇತ್ರದಲ್ಲಿ ನವರಾತ್ರಿ ಮಹೋತ್ಸವ ಆಂಗವಾಗಿ ಶ್ರೀ ದೇವಿಗೆ ವಿಶೇಷ ಅಲಂಕಾರ ಪೂಜೆ ಭಜನಾ ಸಂಕೀರ್ತಣೆ ಬೆಳಗ್ಗೆ ಶಾಂತಿಗೋಡು ಶೀ ದುರ್ಗಾ ಭಜನಾ ಸಂಘ,ಹಾಗೂ ಸಿದ್ದಿವಿನಾಯಕ ಮಹಿಳಾ ಭಜನಾ ಸಂಘ ಬೆಟ್ಟಂಪ್ಪಾಡಿ ಇದರ ಸದಸ್ಯರಿಂದ ಭಜನಾ ಸಂಕೀರ್ತಣೆ ನಡೆಯಿತು. ಮಧ್ಯಾಹ್ನ ಶ್ರೀ ದೇವಿಗೆ ವಿಶೇಷ ಅಲಂಕಾರ ಪೂಜೆ ಪ್ರಸಾದ ವಿತರಣೆ ಬಳಿಕ ಅನ್ನಸಂತರ್ಪಣೆ ನಡೆಯಿತು.

ಸಂಜೆ ಕಕ್ಕೆಪದವು ಉಳಿ ಶ್ರೀ ಗೋಪಾಲಕೃಷ್ಣ ಭಜನಾ ಮಂಡಳಿ ಸದಸ್ಯರಿಂದ ಭಜನಾ ಕಾರ್ಯಕ್ರಮ ನಡೆಯಿತು.ರಾತ್ರಿ ಮಹಾಪೂಜೆ ಪ್ರಸಾದ ವಿತರಣೆ ಬಳಿಕ ಅನ್ನ ಸಂತರ್ಪಣೆ ನಡೆಯಿತು.
ಕ್ಷೇತ್ರ ತಂತ್ರಿವರ್ಯರಾದ ಮೂಡಬಿದ್ರಿ ಶಿವನಂದ ಶಾಂತಿ ಮಾರ್ಗದರ್ಶನದಲ್ಲಿ ಅರ್ಚಕ ಪ್ರಜ್ವಲ್ ಪಕ್ಕಿಬೆಟ್ಟು ಧಾರ್ಮಿಕ ವಿಧಿ ವಿಧಾನಗಳು ನೆರವೇರಿಸಿದರು.