ಜಿಲ್ಲಾ ಮಟ್ಟದ ಕ್ರಿಕೆಟ್: ಸುದಾನ ಶಾಲೆಗೆ ದ್ವಿತೀಯ ಸ್ಥಾನ – ಮೈಸೂರು ವಿಭಾಗ ಮಟ್ಟಕ್ಕೆ ಆಯ್ಕೆ

0

ಪುತ್ತೂರು:  ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಸೈಂಟ್ ಫಿಲೋಮಿನ ಪ್ರೌಢ ಶಾಲೆ ಪುತ್ತೂರು ಇವರ ಸಹಯೋಗದಲ್ಲಿ ನಡೆದ ಜಿಲ್ಲಾ ಮಟ್ಟದ ಕ್ರಿಕೆಟ್ ಪಂದ್ಯಾಟದಲ್ಲಿ 14ರ ವಯೋಮಾನದ ಪ್ರಾಥಮಿಕ ಶಾಲಾ ಬಾಲಕರ ತಂಡವು ದ್ವಿತೀಯ ಸ್ಥಾನ ಪಡೆದಿರುತ್ತಾರೆ.

ದಿಶಾನ್ ಕೆ ಎಸ್ (8), ಆಯುರ್ ವರ್ಷ (7), ಆದಿತ್ಯ ಬೌದು (6), ಆಶ್ರಿತ್ (8), ಸಾನ್ವಿತ್ (8), ಸುಶಾಂತ್ (8), ಸೋಹನ್ (7), ಧನ್ವಿತ್ (7), ಮಹಮ್ಮದ್ ಕೈಸ್ (7), ಮಹಮ್ಮದ್ ಮುಸ್ತಫ (6), ಧನ್ವಿತ್ (6) ಮತ್ತು ಆರ್ಯನ್ (5) ತಂಡವನ್ನು ಪ್ರತಿನಿಧಿಸಿದರು.ಇದರಲ್ಲಿ ದಿಶಾನ್ ಕೆ ಎಸ್ (8), ಆಯುರ್ ವರ್ಷ (7) ಹಾಗೂ ಆದಿತ್ಯ ಬೌದು (6) ಇವರು ಮೈಸೂರು ವಿಭಾಗ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.

ಹಾಗೂ 17ರ ವಯೋಮಾನದ ಪ್ರೌಢಶಾಲಾ ಬಾಲಕರ ತಂಡವು ದ್ವಿತೀಯ ಸ್ಥಾನ
ಮನೀಷ್ ಶೆಟ್ಟಿ (10), ಇಷಾಮ್ ಶೇಕ್ (10), ಅಭಿನ್ (10), ಕಾರ್ತಿಕ್ (10), ಅರ್ಹಾನ್ (9), ಸಹನ್ (9), ರೋಹನ್ (9), ಸಾಯಿಕಿರಣ್  (9), ಮಾನ್ ಶೆಟ್ಟಿ (9), ವಿನ್ಯಾಸ್ (9), ಸುಮಂತ್ (9), ತುಷಾರ್ (9), ಯಾತ್ರಿಕ್ (9), ಸಂಭ್ರಮ್ ಶೆಟ್ಟಿ (8) ತಂಡವನ್ನು ಪ್ರತಿನಿಧಿಸಿದರು.ಇದರಲ್ಲಿ ಮನೀಷ್ ಶೆಟ್ಟಿ (10), ಇಷಾಮ್ ಶೇಕ್ (10) ಹಾಗೂ ಸಂಭ್ರಮ್ ಶೆಟ್ಟಿ (8) ಇವರು ಸ್ಪರ್ಧಿಸಿ ಮೈಸೂರು ವಿಭಾಗ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.

ಶಾಲಾ ಸಂಚಾಲಕರು ರೆ. ವಿಜಯ ಹಾರ್ವಿನ್ ಶಾಲಾ ಆಡಳಿತ ಮಂಡಳಿ, ಶಾಲಾ ಮುಖ್ಯೋಪಾಧ್ಯಯಿನಿ ಶೋಭ ನಾಗರಾಜ್ ಹಾಗೂ ದೈಹಿಕ ಶಿಕ್ಷಣ ಶಿಕ್ಷಕರು ಅಭಿನಂದಿಸಿರುತ್ತಾರೆ. ಇವರಿಗೆ ಕಿರಣ್ ಕುಮಾರ್ ಹಾಗೂ ದೈಹಿಕ ಶಿಕ್ಷಣ ಶಿಕ್ಷಕ ನವೀನ್ ತರಬೇತಿಯನ್ನು ನೀಡಿರುತ್ತಾರೆ.

LEAVE A REPLY

Please enter your comment!
Please enter your name here