ಹತ್ತನೇ ವರ್ಷದ ಹೊಸ್ತಿಲಿನಲ್ಲಿ ಮುಕ್ಕೂರು ನೇಸರ ಯುವಕ ಮಂಡಲ

0

ಮುಕ್ಕೂರು : ನೇಸರ ಯುವಕ ಮಂಡಲ ಮುಕ್ಕೂರು ಇದರ ಹತ್ತನೇ ವರ್ಷಾಚರಣೆಯ ಪ್ರಯುಕ್ತ ದಶ ಪ್ರಣತಿ ಯಶೋಗಾಥೆಯನ್ನು ಇತಿಹಾಸ ಪ್ರಸಿದ್ಧ ಮಾಗಣೆ ಕ್ಷೇತ್ರ ಪೆರುವಾಜೆ ಶ್ರೀ ಜಲದುರ್ಗಾದೇವಿ ದೇವಾಲಯದಲ್ಲಿ ಬಿಡುಗಡೆಗೊಳಿಸಲಾಯಿತು.

ಶ್ರೀ ಜಲದುರ್ಗಾದೇವಿ ಕ್ಷೇತ್ರದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿದ ನಂತರ ಪೆರುವಾಜೆ ಶ್ರೀ ಜಲದುರ್ಗಾದೇವಿ ದೇವಾಲಯದ ವ್ಯವಸ್ಥಾಪನ ಸಮಿತಿ ಮಾಜಿ ಸದಸ್ಯ ವೆಂಕಟಕೃಷ್ಣ ರಾವ್ ಅವರು ಗಣ್ಯರ ಉಪಸ್ಥಿತಿಯಲ್ಲಿ ನೇಸರ-ಯಶೋಗಾಥೆಯನ್ನು ಬಿಡುಗಡೆಗೊಳಿಸಿದರು.

ದಶಮದ ರಂಗಿಗೆ ನಿಮ್ಮೊಳಗೆ ಕೌತುಕವಿರಲಿ ಎನ್ನುವ ಜತೆಗೆ ದಶ ಕಾರ್ಯಕ್ರಮಗಳ ಗೊಂಚಲಿನಲ್ಲಿ ಕಲರವದ ಸಂದೇಶ ಹೊತ್ತ ಯಶೋಗಾಥೆಗೆ ಗಣ್ಯರು ಶುಭ ಹಾರೈಸಿದರು.

ನೇಸರ ಯುವಕ ಮಂಡಲದ ಗೌರವಾಧ್ಯಕ್ಷ ಜಗನ್ನಾಥ ಪೂಜಾರಿ ಮುಕ್ಕೂರು , ನೇಸರನ ಹೆಸರಿನಲ್ಲಿ ಸಮಾಜಮುಖಿ ಚಿಂತನೆಯ ಬೆಳಕು ಹರಿಸುವ ಪ್ರಯತ್ನದಲ್ಲಿ ನಿರತರಾಗಿರುವ ಮುಕ್ಕೂರು ನೇಸರ ಯುವಕ ಮಂಡಲ ಈ ತನಕ ಸರಿ ಸುಮಾರು 55 ಕ್ಕೂ ಅಧಿಕ ಸಮಾಜಮುಖಿ ಕಾರ್ಯಕ್ರಮ ಹಮ್ಮಿಕೊಂಡು ಬಹು ದೂರ ಸಾಗಿ ಬಂದಿದೆ. ಈಗಾಗಲೇ ಊರವರ ಸಹಕಾರದಿಂದ ಆಧಾರ್ ನೋಂದಣಿ, ಆಯುಷ್ಮಾನ್ ಕಾರ್ಡ್ ನೋಂದಣಿ, ನರೇಗಾ, ಕೃಷಿ‌ ಮಾಹಿತಿ, ಗುರುವಂದನೆ, ಚಲನಚಿತ್ರ ಪ್ರದರ್ಶನ, ಪರಿಸರ ಸ್ವಚ್ಛತೆ ,ಕ್ರೀಡಾ ಸ್ಪರ್ಧೆ ಹೀಗೆ ಹಲವು ಕಾರ್ಯಕ್ರಮ ನಡೆಸಿರುವ ಬಗ್ಗೆ ಮಾಹಿತಿ ನೀಡಿದರು.

ಯಶೋಗಾಥೆ ಬಿಡುಗಡೆ ಸಂದರ್ಭದಲ್ಲಿ ಚಾರ್ವಾಕ ಶ್ರೀ ಕಪಿಲೇಶ್ವರ ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಲಕ್ಷ್ಮಣ ಕರಂದ್ಲಾಜೆ, ಪೆರುವಾಜೆ ಶ್ರೀ ಜಲದುರ್ಗಾದೇವಿ ದೇವಾಲಯದ ವ್ಯವಸ್ಥಾಪನ ಸಮಿತಿ ಮಾಜಿ ಅಧ್ಯಕ್ಷರಾದ ಉಮೇಶ್ ಕೆಎಂಬಿ, ನಿರಂಜನ ರೈ ಪಾಲ್ತಾಡಿ, ಬೆಳ್ಳಾರೆ ಸಿ.ಎ.ಬ್ಯಾಂಕ್ ನಿರ್ದೇಶಕಿ ವನಿತಾ ಸಾರಕರೆ, ಪೆರುವಾಜೆ ಶ್ರೀ ಜಲದುರ್ಗಾದೇವಿ ದೇವಾಲಯದ ಆಡಳಿತಾಧಿಕಾರಿ ಪ್ರವೀಣ್ ಕುಮಾರ್, ನಳೀಲು ಶ್ರೀ ಸುಬ್ರಹ್ಮಣ್ಯ ಕ್ಷೇತ್ರದ ಅರ್ಚಕ ಪ್ರವೀಣ್ ಶಂಕರ್, ಪೆರುವಾಜೆ ಶ್ರೀ ಭಾವೈಕ್ಯ ಯುವಕ ಮಂಡಲದ ಕಾರ್ಯದರ್ಶಿ ರಕ್ಷಿತ್ ಕುಮಾರ್ ಪೆರುವಾಜೆ, ಬೆಳ್ಳಾರೆ ಕಲಾಮಂದಿರದ ನಿರ್ದೇಶಕ ಪ್ರಮೋದ್ ಕುಮಾರ್ ರೈ, ಬೆಳ್ಳಾರೆ ಜೇಸಿಐ ಮಾಜಿ ಅಧ್ಯಕ್ಷ ಪ್ರೀತಂ ರೈ ಪೆರುವಾಜೆ, ರೂಪಾ ರೈ ಸಾರಕರೆ, ಪೆರುವಾಜೆ ಶ್ರೀ ಜಲದುರ್ಗಾದೇವಿ ದೇವಾಲಯದ ವ್ಯವಸ್ಥಾಪನ ಸಮಿತಿ ಮಾಜಿ ಸದಸ್ಯ ಜಗನ್ನಾಥ ರೈ, ದೀಪಕ್ ಶೆಟ್ಟಿ ಪೆರುವಾಜೆ, ಮುಕ್ಕೂರು ನೇಸರ ಯುವಕ ಮಂಡಲದ ಅಧ್ಯಕ್ಷ ರಮೇಶ್ ಕಾನಾವು, ಮುಕ್ಕೂರು ಶ್ರೀ ಸಾರ್ವಜನಿಕ ಗಣೇಶೋತ್ಸವ ಸಮಿತಿ ಅಧ್ಯಕ್ಷ ರವೀಂದ್ರ ಅನವುಗುಂಡಿ, ಮಾಜಿ ಅಧ್ಯಕ್ಷರಾದ ಜಯಂತ ಕುಂಡಡ್ಕ, ರವಿ ಕುಂಡಡ್ಕ, ಮುಕ್ಕೂರು ಶ್ರೀ ಉಳ್ಳಾಲ್ತಿ ಭಕ್ತವೃಂದದ ಸದಸ್ಯರಾದ ಭಾಸ್ಕರ ಕುಂಡಡ್ಕ, ಶ್ರೀಧರ ಕೊಂಡೆಪ್ಪಾಡಿ, ದಯಾನಂದ, ನೇಸರ ಯುವಕ ಮಂಡಲದ ಸದಸ್ಯರಾದ ಪ್ರವೀಣ್ ಬೋಳಕುಮೇರು, ಶೀನ ಅನವುಗುಂಡಿ ಮೊದಲಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here