ಪುತ್ತೂರು: ಪುತ್ತೂರಿನ ನೃತ್ಯೋಪಾಸನಾ ಕಲಾ ಅಕಾಡೆಮಿಯ ಪ್ರಧಾನ ಶಾಖೆಯಲ್ಲಿ ವಿಜಯದಶಮಿ ಮತ್ತು ಗೆಜ್ಜೆ ಪೂಜೆ ಕಾರ್ಯಕ್ರಮ ಬರೆಕರೆ ವೆಂಕಟ್ರಮಣ ಸಭಾಭವನದಲ್ಲಿ ನಡೆಯಿತು.

ಅಕಾಡೆಮಿ ವಿದ್ಯಾರ್ಥಿಗಳು ಬೃಹತ್ ನಟರಾಜ ವಿಗ್ರಹದ ಜೊತೆ ಆವರಣದಲ್ಲಿ ಮೆರವಣಿಗೆಯಲ್ಲಿ ಸಾಗಿ ಸಭಾಭವನ ಪ್ರವೇಶಿಸಿದರು. ಅಲ್ಲಿ ನಟರಾಜ ವಿಗ್ರಹ ಮತ್ತು ಗೆಜ್ಜೆಗೆ ನೃತ್ಯಗುರು ವಿದುಷಿ ಶಾಲಿನಿ ಆತ್ಮಭೂಷಣ್ ವಿಜಯದಶಮಿಯ ಗೆಜ್ಜೆ ಪೂಜೆ ನೆರವೇರಿಸಿದರು. ಮಹಾ ಮಂಗಳಾರತಿ ಬಳಿಕ ಪ್ರತಿ ವಿದ್ಯಾರ್ಥಿಗಳೂ ಗೆಜ್ಜೆ ಪ್ರದಾನ ಮಾಡಿ ಆಶೀರ್ವಾದ ಮಾಡಲಾಯಿತು. ಬಳಿಕ ಗೆಜ್ಜೆ ಧರಿಸಿದ ವಿದ್ಯಾರ್ಥಿಗಳು ಸಾಂಕೇತಿಕವಾಗಿ ನಟರಾಜನಿಗೆ ಹಾಗೂ ಗುರುವಿಗೆ ನೃತ್ಯ ನಮನ ಸಲ್ಲಿಸಿದರು. ಈ ಸಂದರ್ಭ ಹೊಸ ವಿದ್ಯಾರ್ಥಿಗಳ ಸೇರ್ಪಡೆಯೂ ನೆರವೇರಿತು.

ಹಿರಿಯ ಪತ್ರಕರ್ತ ಪ್ರೊ.ವಿ.ಬಿ.ಅರ್ತಿಕಜೆ, ನೃತ್ಯೋಪಾಸನಾ ಕಲಾ ಅಕಾಡೆಮಿ ಅಧ್ಯಕ್ಷ ಮಂಜುನಾಥ್ ಪಿ.ಎಸ್., ಉಪಾಧ್ಯಕ್ಷ ಡಾ.ಕೃಷ್ಣ ಕುಮಾರ್, ಕಾರ್ಯದರ್ಶಿ ಆತ್ಮಭೂಷಣ್
ಉಪಸ್ಥಿತರಿದ್ದರು.
