ಸಂತ ಫಿಲೋಮಿನಾ ಸ್ವಾಯತ್ತ ಕಾಲೇಜಿನಲ್ಲಿ ರಾಷ್ಟ್ರಮಟ್ಟದ ಫೆಸ್ಟ್ “ಫಾಕ್ಯುಲಾ 2025-ಸ್ಕ್ವಿಡ್ ಗೇಮ್”

0

ಪುತ್ತೂರು: ಸಂತ ಫಿಲೋಮಿನಾ ಕಾಲೇಜು (ಸ್ವಾಯತ್ತ), ಬಿಸಿನೆಸ್ ಅಡ್ಮಿನಿಸ್ಟ್ರೇಶನ್ ವಿಭಾಗದ ವತಿಯಿಂದ ನಡೆದ ರಾಷ್ಟ್ರಮಟ್ಟದ ಫೆಸ್ಟ್ ‘ಫಾಕ್ಯುಲಾ 2025-ಸ್ಕ್ವಿಡ್ ಗೇಮ್’ ವಿದ್ಯಾರ್ಥಿಗಳ ಕ್ರಿಯಾಶೀಲತೆ, ನವೀನತೆ ಮತ್ತು ಸ್ಪರ್ಧಾತ್ಮಕ ಮನೋಭಾವವನ್ನು ಬೆಳಗಿಸುವ ವೇದಿಕೆಯಾಗಿತ್ತು. ದೇಶದ ವಿವಿಧ ಭಾಗಗಳಿಂದ ಕಾಲೇಜು ವಿದ್ಯಾರ್ಥಿಗಳು ಉತ್ಸಾಹದಿಂದ ಭಾಗವಹಿಸಿದರು.


ಮುಖ್ಯ ಅತಿಥಿ ಬೆಂಗಳೂರು ಬೇಕರ್ ಟಿಲ್ಲಿ ರಿಕ್ರೂಟಿಂಗ್ ಲೀಡ್ ರಾಧಿಕಾ ದೇವಯ್ಯ ಕಾರ್ಯಕ್ರಮ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ನಿರ್ವಹಣಾ ಕೌಶಲ್ಯ, ಸೃಜನಶೀಲತೆ ಮತ್ತು ತಂಡ ಭಾವವು ಭವಿಷ್ಯದ ನಾಯಕರನ್ನು ರೂಪಿಸುವ ಪ್ರಮುಖ ಅಂಶಗಳಾಗಿವೆ ಎಂದು ಹೇಳಿದರು. ಕಾಲೇಜಿನ ಪ್ರಾಂಶುಪಾಲರಾದ ವಂ| ಡಾ. ಆಂಟೊನಿ ಪ್ರಕಾಶ್ ಮೊಂತೇರೋ ಮಾತನಾಡಿ ವಿದ್ಯಾರ್ಥಿಗಳು ಶೈಕ್ಷಣಿಕ ಜ್ಞಾನದ ಜೊತೆಗೆ ಪ್ರಾಯೋಗಿಕ ಜ್ಞಾನವನ್ನು ಪೂರೈಸುವಂತಹ ಅವಕಾಶಗಳನ್ನು ಸದ್ಭಳಕೆ ಮಾಡಿಕೊಳ್ಳಬೇಕು ಎಂದು ತಿಳಿಸಿದರು. ಕಾಲೇಜಿನ ಸಂಚಾಲಕರಾದ ವಂ| ಫಾ. ಲಾರೆನ್ಸ್ ಮಸ್ಕರೆನ್ಹಾಸ್ ಅಧ್ಯಕ್ಷತೆ ವಹಿಸಿ ಮಾತನಾಡಿ ವಿದ್ಯಾರ್ಥಿಗಳಲ್ಲಿ ಸೃಜನಶೀಲತೆ, ನವೀನತೆ ಮತ್ತು ತಂಡಭಾವದ ಅಗತ್ಯತೆಯನ್ನು ಸವಾಲುಗಳನ್ನು ಸ್ವೀಕರಿಸಿ, ಧೈರ್ಯವಾಗಿ ಮುಂದುವರಿದು, ತಮ್ಮ ಕ್ಷೇತ್ರದಲ್ಲಿ ಶ್ರೇಷ್ಠತೆ ಸಾಧಿಸಬೇಕು ಎಂದು ಹೇಳಿದರು. ಬಿಜಿನೆಸ್ ಅಡ್ಮಿನಿಸ್ಟ್ರೇಷನ್ ವಿಭಾಗದ ಡೀನ್ ಡಾ. ರಾಧಾಕೃಷ್ಣ ಗೌಡ ಸ್ವಾಗತಿಸಿ, ವಿದ್ಯಾರ್ಥಿ ಸಂಯೋಜಕ ಮೊಹಮ್ಮದ್ ಅಫ್ನಾನ್ ವಂದಿಸಿದರು. ವಿದ್ಯಾರ್ಥಿನಿ ಪ್ರಿಯಾ ಕಾರ್ಯಕ್ರಮ ನಿರೂಪಿಸಿದರು.

“ಫಾಕ್ಯುಲಾ 2025” ಸಮಾರೋಪ ಸಮಾರಂಭ:
ರಾಷ್ಟ್ರಮಟ್ಟದ ಫೆಸ್ಟ್ ‘ಫಾಕ್ಯುಲಾ 2025’ ಸಮಾರೋಪ ಸಮಾರಂಭ ಕಾಲೇಜಿನ ಪ್ರಾಂಶುಪಾಲರಾದ ವಂ| ಡಾ.ಆಂಟೊನಿ ಪ್ರಕಾಶ್ ಮೊಂತೇರೋರವರ ಅಧ್ಯಕ್ಷತೆಯಲ್ಲಿ ನಡೆಯಿತು. ಮುಖ್ಯ ಅತಿಥಿ ಬೆಂಗಳೂರಿನ AMA Ceramics ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ, ಕಾಲೇಜಿನ ಹಳೆಯ ವಿದ್ಯಾರ್ಥಿಯೂ ಆಗಿರುವ ಅಬ್ದ್ ಸಮದ್ ಪಿ.ಎ. ಮಾತನಾಡಿ ತಮ್ಮ ಉದ್ಯಮಶೀಲ ಜೀವನಯಾನವನ್ನು ಹಂಚಿಕೊಂಡು ದೃಢಸಂಕಲ್ಪದೊಂದಿಗೆ ತಮ್ಮ ಕನಸುಗಳನ್ನು ಸಾಕಾರಗೊಳಿಸಬೇಕು ಎಂದು ತಿಳಿಸಿದರು. ಸ್ಟಾಫ್ ಕಾರ್ಡಿನೇಟರ್, ಬಿಬಿಎ ವಿಭಾಗದ ಸಹಾಯಕ ಪ್ರಾಧ್ಯಾಪಕ ಅಭಿಷೇಕ್ ಸುವರ್ಣ ಸ್ವಾಗತಿಸಿ, ವಿಭಾಗದ ಮುಖ್ಯಸ್ಥ ಡಾ. ರಾಧಾಕೃಷ್ಣ ಗೌಡ ಗೌಡ ವಿ. ಫೆಸ್ಟ್‌ನ ಉದ್ದೇಶ ಹಾಗೂ ಯಶಸ್ಸಿನ ಕುರಿತು ತಿಳಿಸಿದರು. ವಿದ್ಯಾರ್ಥಿನಿ ಅಮೀನಾ ಮುಫಿರಾ ಕಾರ್ಯಕ್ರಮ ನಿರೂಪಿಸಿ ಮ್ಯಾನೇಜ್‌ಮೆಂಟ್ ಅಸೋಸಿಯೇಷನ್ ಅಧ್ಯಕ್ಷೆ ದೇಚಮ್ಮ ಎ.ಕೆ. ವಂದಿಸಿದರು.


‘ಫಾಕ್ಯುಲಾ ಸ್ಕ್ವಿಡ್ ಗೇಮ್’ ಸ್ಪರ್ಧೆಯ ಫಲಿತಾಂಶ:
ಹುಬ್ಬಳ್ಳಿಯKLEBA ಕಾಲೇಜು ಪ್ರಥಮ ಸ್ಥಾನ ಪಡೆದು ವಿಜೇತರಾದರು. ಮಂಗಳೂರು ಸಂತ ಅಲೋಶಿಯಸ್ ಕಾಲೇಜು ದ್ವಿತೀಯ ಸ್ಥಾನ ಪಡೆದುಕೊಂಡಿತು.

LEAVE A REPLY

Please enter your comment!
Please enter your name here