ಕಾಣಿಯೂರು: ಸ.ಹಿ.ಪ್ರಾ.ಶಾಲೆ ಕಾಣಿಯೂರಿನಲ್ಲಿ ಗಾಂಧಿ ಜಯಂತಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿಯನ್ನು ಆಚರಿಸಲಾಯಿತು.
ಶಾಲಾ ಎಸ್. ಡಿ. ಎಂ. ಸಿ. ಅಧ್ಯಕ್ಷರಾದ ಪರಮೇಶ್ವರ ಅನಿಲರವರು ದಿನದ ಮಹತ್ವದ ಕುರಿತು ಮಾತನಾಡಿದರು. ಈ ಸಂಧರ್ಭದಲ್ಲಿ ಶಾಲಾ ಎಸ್. ಡಿ. ಎಂ. ಸಿ ಉಪಾಧ್ಯಕ್ಷೆ ಯಶೋದಾ ನೇರೋಳ್ತಡ್ಕ ಕಾಣಿಯೂರು ಗ್ರಾಮ ಪಂಚಾಯತ್ ಸದಸ್ಯ ರಾಮಣ್ಣ ಗೌಡ ಮುಗರಂಜ, ಎಸ್. ಡಿ. ಎಂ. ಸಿ. ಸದಸ್ಯರಾದ ರಮೇಶ್ ಮಾದೋಡಿ, ರಮೇಶ್ ಕಟ್ಟತ್ತಾರು, ಚಂದ್ರಶೇಖರ ಬೈತಡ್ಕ, ಯಶಕಲಾ ಮುಗರಂಜ, ಕಾಣಿಯೂರು ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷ ಸುರೇಶ್ ಓಡಬಾಯಿ, ಶ್ರೀ ಲಕ್ಷ್ಮೀ ನರಸಿಂಹ ಯುವಕ ಮಂಡಲದ ಅಧ್ಯಕ ರಾಜೇಶ್ ಮೀಜೆ, ಆಟೋ ಚಾಲಕ -ಮಾಲಕ ಸಂಘದ ಸದಸ್ಯ ಯತೀಶ್ ಮಾದೋಡಿ, ಶಿಕ್ಷಕಿಯರಾದ ದೇವಕಿ, ವೀಕ್ಷಿತಾ, ದಿವ್ಯಾ, ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಶಾಲಾ ಪ್ರಬಾರ ಮುಖ್ಯಗುರು ಬಾಲಕೃಷ್ಣ ಇವರು ಪ್ರಾಸ್ತವಿಕ ಮಾತುಗಳೊಂದಿಗೆ ಸ್ವಾಗತಿಸಿದರು. ಹಿರಿಯ ಶಿಕ್ಷಕಿ ದೇವಕಿ ವಂದಿಸಿದರು