ಪುತ್ತೂರು: ನವದೆಹಲಿಯಲ್ಲಿರುವ ಎಂಟು ಸಾರ್ಕ್ (SAARC) ರಾಷ್ಟ್ರಗಳು ಸ್ಥಾಪನೆ ಮಾಡಿರುವ ದಕ್ಷಿಣ ಏಷ್ಯಾ ವಿಶ್ವವಿದ್ಯಾಲಯ (ಸೌತ್-ಏಶಿಯನ್ ಯೂನಿವರ್ಸಿಟಿ) ಬಿಎಸ್-ಎಂಎಸ್ (ಇಂಟಿಗ್ರೇಟೆಡ್, ಅಂತರ್ವಿಷಯೀಯ) ಪದವಿಗಾಗಿ ದೇಶದಾಧ್ಯಂತ ನಡೆಸಿದ ಪ್ರವೇಶ ಪರೀಕ್ಷೆಯಲ್ಲಿ ಪುತ್ತೂರು ಅಂಬಿಕಾ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿ ಕೇಶ್ನಿ ಆರ್ ಸಾಲಿಯಾನ್ ತೇರ್ಗಡೆಯಾಗಿ ಪ್ರವೇಶ ಪಡೆದಿದ್ದಾರೆ. ಪುತ್ತೂರು ತಾಲೂಕಿನ ಹಿರೇಬಂಡಾಡಿ ಸೆಟ್ಲೇಪಾಲ್ ಮನೆಯ ದಿವಂಗತ ಚಂದ್ರಶೇಖರ ಪೂಜಾರಿ ಹಾಗೂ ರತ್ನಾವತಿ ಮತ್ತ್ತು ಉಪ್ಪಿನಂಗಡಿಯ ಎನ್ ಕೆ ರಾಮದಾಸ್ ಹಾಗೂ ಹೇಮಾ ರಾಮದಾಸ್ ಇವರ ಮೊಮ್ಮಗಳು ಆಗಿರುವ ಇವರು ಪ್ರಸ್ತುತ ನವದೆಹಲಿಯ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ ಅರ್ಥಶಾಸ್ತ್ರ ಅಧ್ಯಯನ ಮತ್ತು ಯೋಜನಾ ವಿಭಾಗದ ಪ್ರಾಧ್ಯಾಪಕರು ಆಗಿರುವ ಡಾ.ರಮೇಶ್ ಸಾಲಿಯಾನ್ ಮತ್ತು ಸಹನಾ ರಮೇಶ್ ಇವರ ಪುತ್ರಿಯಾಗಿದ್ದಾರೆ.