ರಾಮಕುಂಜ: ರಾಮಕುಂಜ ಹಾಗೂ ಹಳೆನೇರೆಂಕಿ ಗ್ರಾಮ ದೇವರಾದ ರಾಮಕುಂಜ ಶ್ರೀ ರಾಮಕುಂಜೇಶ್ವರ ದೇವಸ್ಥಾನದಲ್ಲಿ ಲೋಕ ಕಲ್ಯಾಣಾರ್ಥವಾಗಿ ಕೋಟಿ ಶಿವಪಂಚಾಕ್ಷರಿ ಜಪಯಜ್ಞ ಹಾಗೂ ದುರ್ಗಾಪೂಜೆ, ಸಾಮೂಹಿಕ ಕುಂಕುಮಾರ್ಚನೆ ಅ.11 ಹಾಗೂ 12ರಂದು ನಡೆಯಲಿದೆ.
ಶ್ರೀ ಕ್ಷೇತ್ರದ ತಂತ್ರಿಗಳಾದ ಬ್ರಹ್ಮಶ್ರೀ ಕೆಮ್ಮಿಂಜೆ ನಾಗೇಶ ತಂತ್ರಿಗಳ ನೇತೃತ್ವದಲ್ಲಿ ಪವಿತ್ರಪಾಣಿ ವೇದಮೂರ್ತಿ ಈರಕೀಮಠ ನರಹರಿ ಉಪಾಧ್ಯಾಯರ ಉಪಸ್ಥಿತಿಯಲ್ಲಿ ವೈದಿಕ ಕಾರ್ಯಕ್ರಮಗಳೊಂದಿಗೆ ಕಾರ್ಯಕ್ರಮ ನಡೆಯಲಿದೆ. ಅ.11ರಂದು ಬೆಳಿಗ್ಗೆ ದೇವತಾ ಪ್ರಾರ್ಥನೆ, ಆಚಾರ್ಯವರಣ, ಸ್ವಸ್ತಿ ಪುಣ್ಯಾಹವಾಚನ, ಅರಣೀಮಥನ, ಆಚಾರ್ಯಕುಂಡದಲ್ಲಿ ಅಗ್ನಿಜನನ ಕ್ರಿಯೆ, ಶ್ರೀ ಮಹಾಗಣಪತಿ ಹೋಮ, ಅಗ್ನಿವಿಹರಣೆ, ಪಂಚಕುಂಡಗಳಲ್ಲಿ ಶಿವಪಂಚಾಕ್ಷರೀ ಯಜ್ಞ ಆರಂಭ, ಶ್ರೀ ದೇವರಿಗೆ ಏಕಾದಶ ರುದ್ರಾಭಿಷೇಕ ನಡೆಯಲಿದೆ. ಅಪರಾಹ್ನ 12ರಿಂದ ಹೋಮಗಳ ಪೂರ್ಣಾಹುತಿ, ಮಂಗಳಾರತಿ, ಶ್ರೀ ದೇವರಿಗೆ ಮಹಾಪೂಜೆ, ಮಧ್ಯಾಹ್ನ ಅನ್ನಸಂತರ್ಪಣೆ ನಡೆಯಲಿದೆ. ಸಂಜೆ 4.30ರಿಂದ ಸಾಮೂಹಿಕ ಕುಂಕುಮಾರ್ಚನೆ, ಶ್ರೀ ದುರ್ಗಾಪೂಜೆ, ಮಹಾಮಂಗಳಾರತಿ, ಅಷ್ಟವಧಾನ ಸೇವೆ ನಡೆಯಲಿದೆ. ರಾತ್ರಿ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಲಿದೆ.
ಅ.12ರಂದು ಬೆಳಿಗ್ಗೆ ಶಿವಪಂಚಾಕ್ಷರೀ ಯಜ್ಞ ಆರಂಭ, 8ರಿಂದ ಸಾಮೂಹಿಕ ಬಿಲ್ವಾರ್ಚನೆ (ಪುರುಷರು ಹಾಗೂ ಮಹಿಳೆಯರಿಂದ), ಶಿವಪಂಚಾಕ್ಷರಿ ಜಪ, ಶ್ರೀ ದೇವರಿಗೆ ಏಕಾದಶ ರುದ್ರಾಭಿಷೇಕ, ಮಧ್ಯಾಹ್ನ 12ರಿಂದ ಶಿವಪಂಚಾಕ್ಷರಿ ಜಪ ಮಹಾಯಜ್ಞದ ಪೂರ್ಣಾಹುತಿ, ಮಹಾಪೂಜೆ, ಪ್ರಸಾದ ವಿತರಣೆ, ಮಧ್ಯಾಹ್ನ ಅನ್ನಸಂತರ್ಪಣೆ ನಡೆಯಲಿದೆ. ಅಪರಾಹ್ನ 2ರಿಂದ ರಾಮಕುಂಜ ಹಾಗೂ ಹಳೆನೇರೆಂಕಿ ಗ್ರಾಮದ ಭಕ್ತರ ಸಭೆ ನಡೆಯಲಿದೆ. ಅಪರಾಹ್ನ 3.30ರಿಂದ ಶಿವಪಂಚಾಕ್ಷರಿ ಹೋಮದ ಮಹಾಪ್ರಸಾದ ವಿತರಣೆ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.