ಪುತ್ತೂರು: ಕೆದಂಬಾಡಿ ಗ್ರಾಮ ಪಂಚಾಯತ್ ನೂತನ ಅಭಿವೃದ್ಧಿ ಅಧಿಕಾರಿಯಾಗಿ ಆಗಮಿಸಿದ ಲಾವಣ್ಯ ಅವರಿಗೆ ಕೆದಂಬಾಡಿ ವಲಯ ಕಾಂಗ್ರೆಸ್ ಸಮಿತಿ ವತಿಯಿಂದ ಸ್ವಾಗತ ಕಾರ್ಯಕ್ರಮ ಅ.3ರಂದು ಗ್ರಾ.ಪಂನಲ್ಲಿ ನಡೆಯಿತು. ಕೆದಂಬಾಡಿ ವಲಯ ಕಾಂಗ್ರೆಸ್ ಅಧ್ಯಕ್ಷ ಪುರಂದರ ರೈ ಕೋರಿಕ್ಕಾರು, ಕೆದಂಬಾಡಿ ಗ್ರಾ.ಪಂ ಸದಸ್ಯ ಮೆಲ್ವಿನ್ ಮೊಂತೆರೊ, ವಲಯ ಪ್ರಧಾನ ಕಾರ್ಯದರ್ಶಿ ನೌಶಾದ್ ತಿಂಗಳಾಡಿ, ಬೂತ್ ಅಧ್ಯಕ್ಷ ಹಬೀಬ್ ಕಣ್ಣೂರು, ಕೆದಂಬಾಡಿ ವಲಯ ಎಸ್ಸಿ ಘಟಕದ ಅಧ್ಯಕ್ಷ ಸೋಮಯ್ಯ, ಶೇಖರ್ ರೈ ಉಪಸ್ಥಿತರಿದ್ದರು.
