ಪಡುಮಲೆ ಮದಕ ಶ್ರೀ ರಾಜರಾಜೇಶ್ವರೀ ಕ್ಷೇತ್ರದಲ್ಲಿ ಶರನ್ನವರಾತ್ರಿ ಮಹೋತ್ಸವ- ಸಂಪನ್ನ

0

ಬಡಗನ್ನೂರು: ಪಡುಮಲೆ ಮದಕ ಶ್ರೀ ರಾಜರಾಜೇಶ್ವರೀ ಕ್ಷೇತ್ರದಲ್ಲಿ ಶರನ್ನವರಾತ್ರಿ ಮಹೋತ್ಸವವು ಬ್ರಹ್ಮಶ್ರೀ ವೇದಮೂರ್ತಿ ವಾಸುದೇವ ತಂತ್ರಿ ಮತ್ತು ವೇದಮೂರ್ತಿ ಕುಂಟಾರು ರವೀಶ ತಂತ್ರಿ ಇವರ ಮಾರ್ಗದರ್ಶನದಲ್ಲಿ ಸೆ.22 ರಂದು ಸೋಮವಾರ ಪ್ರಾರಂಭಗೊಂಡು ಅ. 1 ಬುಧವಾರದ ತನಕ ವಿವಿಧ ಧಾರ್ಮಿಕ ಕಾರ್ಯಕ್ರಮ ಗಳೊಂದಿಗೆ ವಿಜೃಂಭಣೆಯಿಂದ ನಡೆಯಿತು.

ಸೆ. 22 ರಂದು  ಶ್ರೀ ಕೂವೆ ಶಾಸ್ತಾರ ವಿಷ್ಣುಮೂರ್ತಿ ದೇವಸ್ಥಾನದಿಂದ ಭಜನೆ, ಚೆಂಡೆ ವಾಧ್ಯ ಘೋಷದೊಂದಿಗೆ  ಮೆರವಣಿಗೆ ಮೂಲಕ ಮದಕ ಶ್ರೀ ರಾಜರಾಜೇಶ್ವರಿ ಕ್ಷೇತ್ರಕ್ಕೆ ತೆರಳಲಾಯಿತು.

ತದನಂತರ ಪ್ರತಿದಿನ ಪರ್ಯಂತವಾಗಿ  ಶ್ರೀ ದೇವಿಯ ಸನ್ನಿಧಿಯಲ್ಲಿ ವಿವಿಧ ಭಜನಾ ತಂಡಗಳಿಂದ ಭಜನೆ ಹಾಗೂ ವಿವಿಧ ವೈದಿಕ ತಂಡಗಳಿಂದ ಸಹಸ್ರನಾಮಾದಿ ಪಾರಾಯಣಗಳು ಹಾಗೂ ಶ್ರೀ ದೇವಿಗೆ ವಿಶೇಷ ಅಲಂಕಾರ ಪೂಜಾ ಕಾರ್ಯಕ್ರಮ ಮೂಲಕ ವಿಜೃಂಭಣೆ  ನಡೆದು ಅ. 1 ರಂದು ಸಂಪನ್ನಗೊಂಡಿತು..

ಈ ಸಂಧರ್ಭದಲ್ಲಿ ಶರನ್ನವರಾತ್ರಿ ಮಹೋತ್ಸವ ಸಮಿತಿ ಅಧ್ಯಕ್ಷ ಚಂದ್ರಶೇಖರ ಆಳ್ವ, ಶ್ರೀ ಕ್ಷೇತ್ರ ಪಡುಮಲೆ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಸತೀಶ್ ರೖೆ ಕಟ್ಟಾವು, ಸದಸ್ಯರಾದ ಜನಾರ್ಧನ ಪೂಜಾರಿ ಪದಡ್ಕ, ಶ್ರೀನಿವಾಸ್ ಗೌಡ ಕನ್ನಯ, ಪುರಂದರ ರೖೆ ಕುದ್ಕಾಡಿ, ಗೋಪಾಲ ನಾಯ್ಕ ದೊಡ್ಡಡ್ಕ, ಶಂಕರಿ ಪಟ್ಟೆ, ಶ್ರೀಮತಿ ಕನ್ನಡ್ಕ, ಗ್ರಾ. ಪಂ ಸದಸ್ಯರಾದ ರವಿರಾಜ ರೖೆ ಸಜಂಕಾಡಿ ಸಂತೋಷ ಆಳ್ವ ಗಿರಿಮನೆ, ವೆಂಕಟೇಶ್ ಕನ್ನಡ್ಕ, ಸುಜಾತ ಮೖೆಂದನಡ್ಕ ಕ,ಶ್ರೀ ಕ್ಷೇತ್ರ ಗೆಜ್ಜೆಗಿರಿ ಆಡಳಿತ ಸಮಿತಿ ಪ್ರಧಾನ ಕಾರ್ಯದರ್ಶಿ ಡಾ. ರಾಜಾರಾಮ್, ಅಭಿವೃದ್ಧಿ ಸಮಿತಿ ಕಾರ್ಯದರ್ಶಿ ಉಲ್ಲಾಸ್ ಕೋಟ್ಯಾನ್, ಪುತ್ತೂರು ಬಿಲ್ಲವ ಸಂಘದ ಮಾಜಿ ಅಧ್ಯಕ್ಷ ವಿಜಯಕುಮಾರ್ ಸೊರಕೆ,, ಜಿಲ್ಲಾ ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷೆ ಉಷಾ ಅಂಚನ್, ಪುತ್ತೂರು ರಾಮಕೃಷ್ಣ ಪ್ರೌಢಶಾಲಾ ಸಂಚಾಲಕ ಹೇಮನಾಥ ಶೆಟ್ಟಿ ಕಾವು ಶರನ್ನವರಾತ್ರಿ ಮಹೋತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ಶೀಧರ ನಾಯ್ಕ ನೇರ್ಲಂಪ್ಪಾಡಿ, ಕೋಶಾಧಿಕಾರಿ ಶಿವಕುಮಾರ್ ಮೋಡಿಕೆ, ಶ್ರೀ ಕೂವೆ ಶಾಸ್ತಾರ ಸಾಂಸ್ಕೃತಿಕ ಸಮಿತಿ ಅಧ್ಯಕ್ಷ ರಾಮಣ್ಣ ಗೌಡ ಬಸವಹಿತ್ತಿಲು, ಮಾಜಿ ಅಧ್ಯಕ್ಷ ಸುಬ್ಬಯ್ಯ ರೖೆ ಹಲಸಿನಡಿ, ಬಡಗನ್ನೂರು ಶಾಲಾ ಹಿರಿಯ ವಿದ್ಯಾರ್ಥಿ ಸಂಘದ ಗೌರವಾಧ್ಯಕ್ಷ ನಾರಾಯಣ ರೖೆ ಕುದ್ಕಾಡಿ, ಕುಂಬ್ರ ಕೃ. ಪ. ಸ. ಸಂಘದ ಉಪಾಧ್ಯಕ್ಷ ಸೂರ್ಯನಾರಾಯಣ ಭಟ್ ಸುಳ್ಯಪದವು, ಗಣೇಶ್ ಭಟ್   ಪಟ್ಟೆ,ಶ್ರೀಕೃಷ್ಣ ಹಿ.ಪ್ರಾ. ಶಾಲಾ ಮುಖ್ಯ ಶಿಕ್ಷಕ ರಾಜಗೋಪಾಲ್ ಭಟ್ ಪಾಪಮಜಲು ಸರಕಾರಿ ಪ್ರೌಢಶಾಲಾ ಸಹ ಶಿಕ್ಷಕಿ ಸವಿತ ಭಟ್ ಪಟ್ಟೆ,   ಗಣೇಶೋತ್ಸವ ಸಮಿತಿ ಅಧ್ಯಕ್ಷ ಗಂಗಾಧರ ರೖೆ ಮೇಗಿನಮನೆ ಕಾರ್ಯದರ್ಶಿ ರಾಜೇಶ್ ರೖೆ ಮೇಗಿನಮಸೆ ಸದಸ್ಯರುಗಳಾದ ಪದ್ಮನಾಭ ರೖೆ ಅರೆಪ್ಪಾಡಿ, ರಘುರಾಮ ಪಾಟಾಳಿ ಶರವು, ಕಿರಣ್ ಕುಮಾರ್ ಮೖಂದನಡ್ಕ ರಾಜೇಶ್ ಸುಳ್ಯಪದವು, ಸತೀಶ್ ಕುಲಾಲ್ ಪೖೆರುಪುಣಿ, ಸೂರಾಜ್ ರೖೆ ಮೖಂದನಡ್ಕ, ರತ್ನಾಕರ ರೖೆ ಕುದ್ಕಾಡಿ, ಹಾಗೂ ವಿವಿಧ ಸಂಘ ಸಂಸ್ಥೆಗಳ ಅಧ್ಯಕ್ಷರು, ಪದಾಧಿಕಾರಿಗಳು ಮತ್ತು ಊರಪರವೂರ ಭಕ್ತಾದಿಗಳು ಭಾಗವಹಿಸಿದ್ದರು.

ಶ್ರೀ ರಾಜರಾಜೇಶ್ವರಿ ಕ್ಷೇತ್ರದಲ್ಲಿ 10 ದಿವಸದ ಶರನ್ನವರಾತ್ರಿ ಮಹೋತ್ಸವ ಸಂಧರ್ಭದಲ್ಲಿ  ಶ್ರೀ ದೇವಿಗೆ ಭಕ್ತಾದಿಗಳಿಂದ ಸುಮಾರು ಸಾವಿರಕ್ಕೂ ಮಿಕ್ಕಿ ಹೂವಿನ ಪೂಜೆ ನಡೆಯಿತು.ಮತ್ತು ಕಾರ್ಯಕ್ರಮದಲ್ಲಿ ಸಮಾರು 5000ಕ್ಕೂ ಮಿಕ್ಕಿ ಭಕ್ತಾದಿಗಳು ಭಾಗವಹಿಸಿ ಅನ್ನಪ್ರಸಾದ ಸ್ವೀಕರಿಸಿದರು.

LEAVE A REPLY

Please enter your comment!
Please enter your name here