





ಉಪ್ಪಿನಂಗಡಿ: 34 ನೆಕ್ಕಿಲಾಡಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳ ದಿನಾಚರಣೆ, ಪೋಷಕರ ಮಹಾಸಭೆ ಹಾಗೂ ಪ್ರಿಂಟರ್ ಕೊಡುಗೆ ಹಸ್ತಾಂತರ ಕಾರ್ಯಕ್ರಮ ನಡೆಯಿತು.


34 ನೆಕ್ಕಿಲಾಡಿ ಗ್ರಾ.ಪಂ. ಉಪಾಧ್ಯಕ್ಷ ಹರೀಶ್ ಡಿ. ಕಾರ್ಯಕ್ರಮ ಉದ್ಘಾಟಿಸಿದರು. ಶಾಲೆಗೆ ಪ್ರಿಂಟರ್ ಕೊಡುಗೆ ನೀಡಿ ಮಾತನಾಡಿದ ನಿವೃತ್ತ ಯೋಧ ಜಯಕುಮಾರ್ ಪೂಜಾರಿ, ಸರ್ವಧರ್ಮದ ಸಹ ಬಾಳ್ವೆಯ ಸಮಾಜವನ್ನು ನಾವು ಕಟ್ಟಬೇಕು. ದೇಶ ಭಕ್ತಿಯ ಜಾಗೃತಿ ನಮ್ಮದಾಗಬೇಕು ಎಂದರು.





ಬಳಿಕ ಪೋಷಕ- ಶಿಕ್ಷಕರ ಸಂವಾದ ನಡೆಯಿತು. ೩೪ ನೆಕ್ಕಿಲಾಡಿ ಗ್ರಾ.ಪಂ. ಅಧ್ಯಕ್ಷೆ ಸುಜಾತ ಆರ್. ರೈ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಉಪ್ಪಿನಂಗಡಿ ರೋಟರಿ ಕ್ಲಬ್ ಅಧ್ಯಕ್ಷ ಜಾನ್ ಕೆನ್ಯೂಟ್, ಭೂ ನ್ಯಾಯ ಮಂಡಳಿ ಸದಸ್ಯ ಅಬ್ದುರ್ರಹ್ಮಾನ್ ಯುನಿಕ್, ಶಾಲಾ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಜುಬೇರ್, ನಿವೃತ್ತ ಮುಖ್ಯ ಗುರು ರುಕ್ಮಿಣಿ ಉಪಸ್ಥಿತರಿದ್ದರು.
ಶಾಲಾ ಮುಖ್ಯಗುರು ಶ್ರೀಮತಿ ಕಾವೇರಿ ಸ್ವಾಗತಿಸಿದರು. ಹಿರಿಯ ಶಿಕ್ಷಕಿ ಪದ್ಮಾ ವಂದಿಸಿದರು. ಗೌರವ ಶಿಕ್ಷಕಿ ಶ್ರೀಮತಿ ಪೂರ್ಣಿಮಾ ಕಾರ್ಯಕ್ರಮ ನಿರೂಪಿಸಿದರು. ಬಳಿಕ ಪೋಷಕರಿಗೆ ಹಾಗೂ ಮಕ್ಕಳಿಗೆ ವಿವಿಧ ಆಟೋಟ ಸ್ಪರ್ಧೆಗಳನ್ನು ನಡೆಸಲಾಯಿತು.









