
ಕಡಬ: ಮನೆಗೆ ಮರ ಬಿದ್ದು ಮನೆ ಸಂಪೂರ್ಣ ಹಾನಿಯಾದ ಘಟನೆ ಕಡಬ ತಾಲೂಕಿನ ನೂಜಿಬಾಳ್ತಿಲ ಗ್ರಾಮದಲ್ಲಿ ಅ.2ರ ರಾತ್ರಿ ನಡೆದಿದೆ.

ನೂಜಿಬಾಳ್ತಿಲ ಗ್ರಾಮದ ಬೊಳ್ಳಾಜೆ ರಾಜೀವಿ ಗೌಡ ಬೊಳ್ಳಾಜೆ ಅವರ ಮನೆಗೆ ಅ.2ರ ರಾತ್ರಿ ಮರ ಬಿದ್ದು ಮನೆ ಸಂಪೂರ್ಣ ಹಾನಿಯಾಗಿದೆ. ತಾಲೂಕು ಪಂಚಾಯತ್ ಮಾಜಿ ಅಧ್ಯಕ್ಷರಾದ ಪುಲಸ್ತ್ಯಾ ರೈ, ಉಮೇಶ್ ಶೆಟ್ಟಿ ಸಾಯಿರಾಮ್, ನೂಜಿಬಾಳ್ತಿಲ ಗ್ರಾಮ ಪಂಚಾಯತ್ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು, ಪಿಡಿಒ, ವಿಎ, ಶಿಕ್ಷಕ ಗೋವಿಂದ ನಾಯಕ್, ಆಶಾ ಕಾರ್ಯಕರ್ತೆಯರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಕಡಬ ಸೊಸೈಟಿ ಬ್ಯಾಂಕ್ ನವರು ಚೆಕ್ ನೀಡಿ ಸಹಕರಿಸಿದರು.